newsfirstkannada.com

×

BSNL: ಅನಿಯಮಿತ ಕರೆ, 320GB ಡೇಟಾ.. 160 ದಿನಗಳ ವ್ಯಾಲಿಡಿಟಿ ಹೊಂದಿದೆ ಈ ಪ್ಲಾನ್​

Share :

Published September 16, 2024 at 12:25pm

    ಗಮನ ಸೆಳೆದ BSNL ಪ್ರಿಪೇಯ್ಡ್​ ಪ್ಲಾನ್​

    160 ದಿನಗಳ ಸಿಂಧುತ್ವ ಹೊಂದಿರುವ ಪ್ರಿಪೇಯ್ಡ್​ ಪ್ಲಾನ್

    ಹೈ-ಸ್ಪೀಡ್​​​ ಡೇಟಾ, ಝಿಂಗ್​ ಮ್ಯೂಸಿಕ್​ ಅನಂದಿಸುವ ಅವಕಾಶ

ಭಾರತ್​​ ಸಂಚಾರ್​ ನಿಗಮ ಲಿಮಿಟೆಡ್​​ (BSNL) ಗ್ರಾಹಕರಿಗಾಗಿ ಬಜೆಟ್​ ಸ್ನೇಹಿ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅದರ ಮೂಲಕ ಆಫರ್​ ಪರಿಚಯಿಸುವುದರ ಜೊತೆಗೆ ಪ್ರಯೋಜನಗಳನ್ನು ಒದಗಿಸುತ್ತಿರುತ್ತದೆ. ಅನಿಯಮಿತ ಕರೆ, ಡೇಟಾ ಹೀಗೆ ಸಾಲು ಸಾಲು ಪ್ರಯೋಜನ ನೀಡುತ್ತಿರುತ್ತದೆ. ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್​​ಎನ್​ಎಲ್​ 160 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್​ ಗ್ರಾಹಕರ ಮನಗೆದ್ದಿದೆ.

ಬಿಎಸ್​​ಎನ್​ಎಲ್​ ಪ್ರಿಪೇಯ್ಡ್​ ಬಳಕೆದಾರರು 160 ದಿನಗಳ ಸಿಂಧ್ವುತ್ವ ಪಡೆಯಬೇಕಾದರೆ ಅದಕ್ಕಾಗಿ 997 ರೂಪಾಯಿಯ ರೀಚಾರ್ಜ್​ ಪ್ಲಾನ್​ ಅಳವಡಿಸಿಕೊಳ್ಳಬೇಕು. ಇದೊಂದು ಧೀರ್ಘಾವದಿಯ ಪ್ಲಾನ್​ ಆಗಿದ್ದು, ಗ್ರಾಹಕರಿಗಾಗಿ ಹಲವು ಬೆನಿಫಿಟ್ಸ್​ ಒದಗಿಸುತ್ತದೆ.

ಇದನ್ನೂ ಓದಿ: UPI ಪಾವತಿ ಮಿತಿ ಇಂದಿನಿಂದ ಏರಿಕೆ.. ಒಂದು ಬಾರಿಗೆ ಇಷ್ಟೊಂದು ಹಣ ಟ್ರಾನ್ಸಾಕ್ಷನ್​ ಮಾಡಬಹುದಾ?

ಅಂದಹಾಗೆಯೇ ಈ ಪ್ಲಾನ್​ ಮೂಲಕ ದೇಶದ ಯಾವುದೇ ನೆಟ್​​​ವರ್ಕ್​ಗಳಿಗೆ ಅನಿಯಮಿತ ಕರೆ ಮಾಡಬಹುದಾಗಿದೆ. ಜೊತೆಗೆ ಪ್ರತಿದಿನ 2ಜಿಬಿ ಡೇಟಾದಂತೆ 160 ದಿನಗಳಿಗೆ ಸರಿಯಾಗಿ 320ಜಿಬಿ ಹೈ-ಸ್ಪೀಡ್​​ ಡೇಟಾ ನೀಡುತ್ತದೆ.

ಗ್ರಾಹಕರಿಗಾಗಿ ಈ ಪ್ಲಾನ್​ನಲ್ಲಿ ದಿನಕ್ಕೆ 100 ಎಸ್​ಎಮ್​​ಎಸ್​ ಉಚಿತವಾಗಿ ಸಿಗುತ್ತದೆ. 160 ದಿನಗಳ ಕಾಲ ದೇಶದ ಉದ್ದಗಲಕ್ಕೂ ಮೆಸೇಜ್​​ ಮಾಡಬಹುದಾಗಿದೆ.

ಇದನ್ನೂ ಓದಿ: iPhone​ ಮತ್ತು iPad​​ ಬಳಕೆದಾರಿಗೆ ಶಾಕಿಂಗ್​ ನ್ಯೂಸ್; ಇನ್ಮುಂದೆ ಈ ಸಾಧನಗಳಲ್ಲಿ ‘Netflix‘​​ ಕೆಲಸ ಮಾಡಲ್ಲ​

ಇದಲ್ಲದೆ, ನ್ಯಾಷನಲ್​ ರೋಮಿಂಗ್​ ಆಯ್ಕೆ ಕೂಡ ಇದರಲ್ಲಿದೆ. ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಬಿಎಸ್​ಎನ್​ಎಲ್​ ಟ್ಯೂನ್​​ ಮತ್ತು ಝಿಂಗ್​​ ಮ್ಯೂಸಿಕ್​​ ಆನಂದಿಸಬಹುದಾಗಿದೆ.

ಬಿಎಸ್​​ಎನ್​ಲ್​​ ಸೆಲ್ಫ್​​ ಕೇರ್​​ ಆ್ಯಪ್​, ಬಿಎಸ್​​ಎನ್​ಎಲ್​​ ಅಧಿಕೃತ ವೆಬ್​ಸೈಟ್​​​, ಮತ್ತು ಹತ್ತಿರದ ರಿಟೇಲ್​​ ಸ್ಟೋರ್​​ಗಳ ಮೂಲಕ ಈ ಪ್ಲಾನ್​ ರೀಚಾರ್ಜ್​ ಮಾಡಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BSNL: ಅನಿಯಮಿತ ಕರೆ, 320GB ಡೇಟಾ.. 160 ದಿನಗಳ ವ್ಯಾಲಿಡಿಟಿ ಹೊಂದಿದೆ ಈ ಪ್ಲಾನ್​

https://newsfirstlive.com/wp-content/uploads/2024/08/BSNL-2.jpg

Load More