Advertisment

ಎಮ್ಮೆಗೂ ಬಂತು ಕಾಲ..! ಕೊಟ್ಟಿಗೆಯಲ್ಲಿ AC ಕಂಡು ಬೆಚ್ಚಿಬಿದ್ದ ಜನ.. Video

author-image
Ganesh
Updated On
ಎಮ್ಮೆಗೂ ಬಂತು ಕಾಲ..! ಕೊಟ್ಟಿಗೆಯಲ್ಲಿ AC ಕಂಡು ಬೆಚ್ಚಿಬಿದ್ದ ಜನ.. Video
Advertisment
  • ಮೂಕ ಪ್ರಾಣಿಗಳ ಮೇಲಿನ ನಿಜವಾದ ಪ್ರೀತಿ ಅಂದರೆ ಇದು
  • ರಣ ಬಿಸಿಲಿನಿಂದ ಎಮ್ಮೆಗಳ ಕಾಪಾಡಿಕೊಳ್ಳಲು ಐಡಿಯಾ
  • ಇಲ್ಲಿ ಮನುಷ್ಯರಿಗಿಂತ ಚೆನ್ನಾಗಿ ಬದುಕುತ್ತಿವೆ ಎಮ್ಮೆಗಳು..!

ಎಮ್ಮೆಗೂ ಬಂತು ಒಂದು ಕಾಲ ಕಣ್ರಿ.. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋ ಒಂದು ವೀಕ್ಷಕರನ್ನು ದಂಗಾಗಿಸಿದೆ. ಅದಕ್ಕೆ ಕಾರಣ ಎಮ್ಮೆಗಳಿಗೆ ಮಾಡಿಕೊಟ್ಟಿರುವ ಸವಲತ್ತುಗಳು.

Advertisment

ಇದು ಹೇಳಿ, ಕೇಳಿ ಬೇಸಿಗೆಗಾಲ.. ಬಿಸಿಗಾಳಿ.. ರಣ ಬಿಸಿಲಿನ ಆರ್ಭಟ.. ಜನಸಾಮಾನ್ಯರು ಕಂಗಾಲ್ ಆಗಿ ಹೋಗಿದ್ದಾರೆ. ಮಳೆ ಬಂದರೆ ಸಾಕಪ್ಪ ಎಂದು ಪ್ರಾರ್ಥಿಸುತ್ತಿದ್ದಾರೆ. ಇಂಥ ಸಂಕಟ ಕೇವಲ ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿಗಳಿಗೂ ತೊಂದರೆಯಾಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಯಾವ ಸ್ಮಾರ್ಟ್​ ಫೋನ್ ಬಳಸುತ್ತಾರೆ.. ಅದರೆ ಬೆಲೆ ಗೊತ್ತಾದ್ರೆ ಶಾಕ್ ಆಗುತ್ತೀರಿ..!

ಬಿಸಿಲ ತಾಪದಿಂದ ಪ್ರಾಣಿಗಳಿಗೆ ಪರಿಹಾರ ನೀಡಲು ಅವುಗಳ ಮಾಲೀಕರು ನಾನಾ ವ್ಯವಸ್ಥೆ ಮಾಡ್ತಿದ್ದಾರೆ. ಕೆಲವರು ತಣ್ಣೀರು ಎರಚುತ್ತಿದ್ದರೆ, ಇನ್ನು, ಕೆಲವರು ತಮ್ಮ ಪ್ರಾಣಿಗಳಿಗೆ ಕೂಲರ್ ಮತ್ತು ಫ್ಯಾನ್ ಗಳನ್ನು ಅಳವಡಿಸುತ್ತಿದ್ದಾರೆ. ಹೀಗಿರುವಾಗ ಎಮ್ಮೆಗಳ ಮಾಲಿಕನೊಬ್ಬ ತನ್ನ ಎಮ್ಮೆಗಳಿಗೆ ಬಿಸಿಲಿನಿಂದ ನೆಮ್ಮದಿ ಕೊಡಲು ಎಸಿ ಅಳವಡಿಸಿ ಸುದ್ದಿಯಾಗಿದ್ದಾರೆ. ಕೇವಲ ಎಸಿ ಮಾತ್ರವಲ್ಲ ಫ್ಯಾನ್​ಗಳು ಕೂಡ ತಿರುಗುತ್ತಿರೋದನ್ನು ನೋಡಬಹುದಾಗಿದೆ.

Advertisment

ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

ಎಮ್ಮೆ ಮಾಲೀಕರು ಕೊಟ್ಟಿಗೆಗೆ ಎರಡು ಎಸಿಗಳನ್ನು ಅಳವಡಿಸಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಮಾತ್ರವಲ್ಲ, ಕೊಟ್ಟಿಗೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟಿರೋದನ್ನೂ ನಾವು ನೋಡಬಹುದು. ಕೊಟ್ಟಿಗೆಯಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿರುವ ಎಮ್ಮೆಗಳು ಆರಾಮಾಗಿ ಎಸಿ ಗಾಳಿಯನ್ನು ಆನಂದಿಸುತ್ತಿವೆ. ಅಂದ್ಹಾಗೆ ಇದು ಹರಿಯಾಣ ರಾಜ್ಯದ ರೈತರೊಬ್ಬರು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಪ್ರಜ್ವಲ್ ರೇವಣ್ಣ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಪುಟ್ಟರಾಜು..!

Advertisment

ಮಂಜೀತ್ಮಾಲಿಕ್ 567 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದನ್ನು ಇಲ್ಲಿಯವರೆಗೆ 7 ಲಕ್ಷ 77 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 37 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋಗೆ ಲೈಕ್ ಮಾಡಿದ್ದಾರೆ. ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ‘ಸಹೋದರ, ಎಮ್ಮೆಗಳು ಮೋಜು ಮಾಡುತ್ತಿವೆ ಎಂದಿದ್ದಾರೆ. ಮತ್ತೊಬ್ಬರು ಹರಿಯಾಣದ ಜನರು ಮಾತ್ರ ಇದನ್ನು ಮಾಡಬಹುದು ಎಂದಿದ್ದಾರೆ. ಈ ಎಮ್ಮೆಗಳು ನಮಗಿಂತ ಉತ್ತಮ ಜೀವನ ನಡೆಸುತ್ತಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್​ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment