Advertisment

ಬೈಕ್​ಗೆ ಗುದ್ದಿ ಪಲ್ಟಿ ಹೊಡೆದ ಸರ್ಕಾರಿ ಬಸ್​.. 30 ಅಡಿ ಎತ್ತರಕ್ಕೆ ಹಾರಿ ಪ್ರಾಣಬಿಟ್ಟ ಸವಾರ

author-image
AS Harshith
Updated On
ಬೈಕ್​ಗೆ ಗುದ್ದಿ ಪಲ್ಟಿ ಹೊಡೆದ ಸರ್ಕಾರಿ ಬಸ್​.. 30 ಅಡಿ ಎತ್ತರಕ್ಕೆ ಹಾರಿ ಪ್ರಾಣಬಿಟ್ಟ ಸವಾರ
Advertisment
  • ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ
  • ಪಲ್ಟಿ ಹೊಡೆದ ಬಸ್​.. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
  • 30 ಅಡಿ ಎತ್ತರಕ್ಕೆ ಜಿಗಿದು ಹೊಲದಲ್ಲಿ ಬಿದ್ದ ಸವಾರ.. ಅಲ್ಲೇ ಸಾವು

ಬೆಳಗಾವಿ: ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಘಟನೆ ಬೆಳಗಾವಿ ಖನಗಾಂವ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಕೆ.ಎಚ್.ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Advertisment

ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ(29) ಬಸ್​ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಬಸ್​ ಗುದ್ದಿದ ರಭಸಕ್ಕೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಇದನ್ನೂ ಓದಿ: ‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ

publive-image

ಬಸ್ ಬೆಳಗಾವಿ ಕಡೆಗೆ ಬರುತ್ತಿತ್ತು. ಈ ವೇಳೆ ಬೈಕ್ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್​ ಸವಾರ 30 ಅಡಿ ಎತ್ತರಕ್ಕೆ ಜಿಗಿದು ಹೊಲದಲ್ಲಿ ಬಿದ್ದಿದ್ದಾನೆ. ಅಲ್ಲೇ ಉಸಿರು ಚೆಲ್ಲಿದ್ದಾನೆ. ಇತ್ತ ನಿಯಂತ್ರಣ ತಪ್ಪಿದ ಬಸ್ ಕೂಡ ಪಲ್ಟಿ ಹೊಡೆದಿದೆ.

Advertisment

ಇದನ್ನೂ ಓದಿ: 5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?

ಬಸ್ ಪಲ್ಟಿ ಹೊಡೆದ ರಭಸಕ್ಕೆ ಬಸ್​ನಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment