/newsfirstlive-kannada/media/post_attachments/wp-content/uploads/2024/06/Bus-4.jpg)
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಬೆಳಕಿಗೆ ಬಂದಿದೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ಬಸ್ ಮಗುಚಿಬಿದ್ದಿದೆ.
ಸಾಗರದಿಂದ ಬೆಳ್ತಂಗಡಿ ಹೊರಟಿದ್ದ ಖಾಸಗಿ ಬಸ್ ಬೆಳಗ್ಗೆ 7:30ರ ಸಮಯದಲ್ಲಿ ಪಲ್ಟಿಯಾಗಿದೆ. ಮುಂಬಾಳು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ.
ಇದನ್ನೂ ಓದಿ: ಮಗನ ಪಿಂಡ ಬಿಟ್ಟು ಬರುವ ವೇಳೆ ಅಪಘಾತ.. ಬಸ್ಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು
ಬಸ್ ನಲ್ಲಿದ್ದ ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ಪ್ರಮಾಣದ ಗಾಯವಾಗಿದೆ. ಬೆಳಗ್ಗೆಯಿಂದ ಸುರಿದ ಮಳೆಯಿಂದ ತಿರುವಿನಲ್ಲಿ ಪಲ್ಟಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ ಕಸಿದು ಪರಾರಿಯಾದ ಖತರ್ನಾಕ್ ಕಳ್ಳ
ಸದ್ಯ ಗಾಯಾಳುಗಳನ್ನು ಶಿವಮೊಗ್ಗ ಮತ್ತು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ