/newsfirstlive-kannada/media/post_attachments/wp-content/uploads/2024/09/BANANA-CANCER.jpg)
ಬಾಳೆ ಹಣ್ಣು ಹಲವು ಪೋಷಕಾಂಶಗಳನ್ನು ಒಳಗೊಂಡಿರುವ ಒಂದು ಫಲ. ಈ ಒಂದ ಫಲದ ನಿತ್ಯ ಸೇವನೆಯಿಂದಾಗಿ ನಾವು ಅನೇಕ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ಬಾಳೆಹಣ್ಣಿನಲ್ಲಿ ಪೋಟ್ಯಾಶಿಯಂ ಸೇರಿದಂತೆ ಮೆಗ್ನೆಶಿಯಂ, ವಿಟಮಿನ್​​ ಬಿ6 ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.
ತೆಳ್ಳನೇ ದೇಹ ಇರುವವರು ಇದನ್ನು ದಪ್ಪ ಆಗಲು ಅಂತ ತಿನ್ನುತ್ತಾರೆ. ತೂಕ ಹೆಚ್ಚಿಸಿಕೊಳ್ಳಲು ಬಾಳೆ ಹಣ್ಣು ಬೇಕೇ ಬೇಕು. ನಮ್ಮ ಎಲುಬುಗಳು ಗಟ್ಟಿಯಾಗಬೇಕು ಅಂದ್ರೆ ನಾವು ಈ ಹಣ್ಣನ್ನು ತಿನ್ನಲೇಬೇಕು ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಈ ಹಣ್ಣಿನ ಜರೂರತ್ತು ತುಂಬಾ ಇದೆ ಹೀಗೆ ಹೇಳುತ್ತಾ ಹೋದರೆ ಬಾಳೆ ಹಣ್ಣಿನ ಪ್ರಯೋಜನಗಳ ಉದ್ದನೆಯ ಪಟ್ಟಿಯೇ ಬೆಳೆಯುತ್ತಿದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಈ ಬಾಳೆಹಣ್ಣು ಈಗ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ತರುವಂತಹ ಮಾರಕ ವಸ್ತುವಾಗಿ ಬಿಕರಿಯಾಗುತ್ತಿದೆ ಅಂದ್ರೆ ನೀವು ನಂಬಲೇಬೇಕು.
/newsfirstlive-kannada/media/post_attachments/wp-content/uploads/2024/09/BANANA-CANCER-1.jpg)
ಇದನ್ನೂ ಓದಿ:Fatty Liver ನಿಂದ ಉಂಟಾಗುವ ಸಮಸ್ಯೆಗಳೇನು ಗೊತ್ತಾ? ಇದನ್ನು ತಡೆಯುವುದು ಹೇಗೆ..?
ಚೋಟುದ್ದ ಬಾಳೆಹಣ್ಣನ್ನು ಕೆಮಿಕಲ್​ಗಳನ್ನು ಬಳಸಿ ಇಷ್ಟೂದ್ದ ಮಾಡಿಡಲಾಗುತ್ತದೆ. ಗ್ರಾಹಕರನ್ನು ಸೆಳೆಯಲು ಅಂತ ಬಾಳೆಹಣ್ಣಿನ ಗಾತ್ರವನ್ನು ದೊಡ್ಡದಾಗಿ ಮಾಡಿಟ್ಟು ಮಾಡಲಾಗುತ್ತಿದೆ. ಅದಕ್ಕಾಗಿ ಉಪಯೋಗಿಸುವ ರಾಸಾಯನಿಕ ಪದಾರ್ಥ ಯಾವುದು ಅಂತ ನಿಮಗೆ ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ಕಾಯಿ ತಾನಾಗಿಯೇ ಹಣ್ಣಾಗಬೇಕು, ತಾನಾಗಿಯೇ ಮಾಗಬೇಕು. ಆದ್ರೆ ಈಗ ಬಾಳೆಹಣ್ಣನ್ನು ಅದು ಹಣ್ಣಾಗುವ ಅವಧಿಪೂರ್ವವೇ ರಾಸಾಯನಿಕ ಪದಾರ್ಥಗಳನ್ನು ಬಳಸಿ ಹಣ್ಣು ಮಾಡಲಾಗುತ್ತಿದೆ. ಈ ಮೂಲಕ ಜನರಲ್ಲಿ ಒಂದು ಸ್ಲೋ ಪಾಯ್ಸನ್​ನ್ನು ಉಣಿಸುತ್ತಿದ್ದಾರೆ ವ್ಯಾಪಾರಿಗಳು.
ಇದನ್ನೂ ಓದಿ:Trending ನಲ್ಲಿದೆ ಬೆಂಡೆಕಾಯಿ ನೆನೆಯಿಟ್ಟು ನೀರು ಕುಡಿಯುವ ವಿಡಿಯೋ; ನಿಜಕ್ಕೂ ಇದರಿಂದ ಚರ್ಮದ ಕಾಂತಿ ಹೆಚ್ಚುತ್ತಾ?
ಕಾರ್ಬೈಡ್, ಅದರಲ್ಲೂ ವಿಶೇಷವಾಗಿ ಕ್ಯಾಲ್ಸಿಯಂ ಕಾರ್ಬೈಡ್​ ಕೆಮಿಕಲ್​ ಮೂಲಕ ಬಾಳೆ ಕಾಯಿಗಳನ್ನು ಅವಧಿ ಪೂರ್ಣವೇ ಹಣ್ಣುಗಳನ್ನಾಗಿ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕ್ಯಾಲ್ಸಿಯಂ ಕಾರ್ಬೈಡ್​ ಕೆಮಿಕಲ್ ಮೂಲಕವೇ ಬಾಳೆ ಕಾಯಿಗಳು ಈಗ ಹಣ್ಣಾಗುತ್ತಿವೆ.ಕ್ಯಾಲ್ಸಿಯಂ ಕಾರ್ಬೈಡ್​ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬ್ಯಾನ್ ಆಗಿರುವ ಕೆಮಿಕಲ್. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಕೆಮಿಕಲ್ ಎಂದೇ ಗುರುತಿಸಲಾಗುತ್ತೆ. ಇದು ದೇಹದೊಳಗೆ ಹೋಗುವುದರಿಂದ ಕ್ಯಾನ್ಸರ್​ ಮತ್ತು ಹಲವು ಅಪಾಯಕಾರಿ ರೋಗಗಳಿಗೆ ತುತ್ತಾಗುವ ಸಂಭವವಿದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಬಾಳೆಹಣ್ಣು ತಿನ್ನುವ ಮೊದಲು ಕೊಂಚ ಹುಷಾರಾಗಿರಿ. ನೈಸರ್ಗಿಕವಾಗಿ ಹಣ್ಣಾದ ಬಾಳೆ ನಿಮ್ಮ ಆಯ್ಕೆ ಆಗಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us