/newsfirstlive-kannada/media/media_files/2025/11/30/students-computer-science-2025-11-30-14-18-30.jpg)
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾರ್ವಜನಿಕ ಶಾಲೆಗಳಿಗೆ ಕಂಪ್ಯೂಟರ್ ವಿಜ್ಞಾನ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ. ದೇಶದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಜೊತೆಗೂಡಿ ಈ ಯೋಜನೆ ಜಾರಿ ತರೋಕೆ ಇಲಾಖೆ​ ಪ್ಲಾನ್ ಮಾಡಿದೆ.
2026-27ನೇ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಿಂದ ಪ್ರಾರಂಭವಾಗುವ ವಿದ್ಯಾರ್ಥಿಗಳಿಗೆ, ಕಂಪ್ಯೂಟರ್ ವಿಜ್ಞಾನವನ್ನು ಒಂದು ವಿಷಯವಾಗಿ ಪರಿಚಯಿಸೋಕೆ ರಾಜ್ಯ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್​ ವಿಷಯಕ್ಕೆಂದೇ ಪ್ರತ್ಯೇಕ ಶಿಕ್ಷಕರಾಗಲಿ, ಪಠ್ಯ ಪುಸ್ತಕಗಳ ಸೌಲಭ್ಯವಾಗಲಿ ಇಲ್ಲ. ಈ ಕೊರತೆಯನ್ನ ನೀಗಿಸಲು ಶಿಕ್ಷಣ ಇಲಾಖೆ KPS ಒಳಗೆ ಕಂಪ್ಯೂಟರ್ ವಿಜ್ಞಾನ ಬೋಧನೆಗಾಗಿ ನಿರ್ದಿಷ್ಟ ಕೇಡರ್ ರಚಿಸಲು ಯೋಜಿಸಿದೆ.
ಇದನ್ನೂ ಓದಿ: 2 ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.2 ರಷ್ಟು ಬೆಳವಣಿಗೆ: ಕಳೆದ 6 ತ್ರೈಮಾಸಿಕದಲ್ಲೇ ಅತ್ಯಧಿಕ ಬೆಳವಣಿಗೆ!
ಶಿಕ್ಷಕರಿಗಿರಬೇಕಾದ ಅರ್ಹತೆಗಳೇನು?
- ಕಂಪ್ಯೂಟರ್ ವಿಜ್ಞಾನ, ಮಾಹಿತಿ ವಿಜ್ಞಾನ, ಬಿಸಿಎ
- ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್​ಸಿ ಅರ್ಹತೆ
- ತಮ್ಮ ಭಾಷೆಗಳಲ್ಲಿ ಕನ್ನಡವನ್ನೂ ಒಂದಾಗಿ ಅಧ್ಯಯನ
- ಕನ್ನಡ ಪ್ರಮಾಣಪತ್ರ ಕೋರ್ಸ್​ನಲ್ಲಿ ಉತ್ತೀರ್ಣ
ಕೆಪಿಎಸ್​ನಲ್ಲಿ ಕಂಪ್ಯೂಟರ್ ಸೈನ್ಸ್​ ಪಠ್ಯಕ್ರಮವನ್ನ ಜಾರಿಗೊಳಿಸುವ ಸಂಬಂಧ ಮುಂದಿನ ವಾರವೇ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಐಐಟಿ ಬಾಂಬೆ ಜೊತೆ ಚರ್ಚೆ ನಡೆಸಲಿದೆಯಂತೆ. ಇದಾದ ಬಳಿಕ ಐಐಟಿ ಮದ್ರಾಸ್ ಜೊತೆಯೂ ಸಭೆ ನಡೆಸೋಕೆ ಇಲಾಖೆ ನಿರ್ಧರಿಸಿದೆ.
ಒಟ್ಟಾರೆ KPS ಶಾಲೆಗಳನ್ನು ಒಂದೇ ಸೂರಿನಡಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಗಳಾಗಿ ಪರಿವರ್ತಿಸುವ ದೃಷ್ಟಿಯಿಂದ, ರಾಜ್ಯ ಶಿಕ್ಷಣ ಇಲಾಖೆ ಈ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us