ಬಡ ವಿದ್ಯಾರ್ಥಿಗಳಿಗೆ ಬೆಳಕಾದ NIOS.. ಕರ್ನಾಟಕಕ್ಕೆ ಗುಡ್​​ನ್ಯೂಸ್​..!

ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಅಡಿ ಕರ್ನಾಟಕದಲ್ಲಿ ದಾಖಲಾತಿ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 120% ಹೆಚ್ಚಳವಾಗಿದ್ದು ಇದು ನೂತನ ದಾಖಲೆಯಾಗಿದೆ.

author-image
Ganesh Kerekuli
NIOS
Advertisment

ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಅಡಿ ಕರ್ನಾಟಕದಲ್ಲಿ ದಾಖಲಾತಿ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 120% ಹೆಚ್ಚಳವಾಗಿದ್ದು ಇದು ನೂತನ ದಾಖಲೆಯಾಗಿದೆ.  ಮದರಸಾಗಳಿಂದ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದೇ ಈ ದಾಖಲೆಗೆ ಪ್ರಮುಖ ಕಾರಣ..  

‘NIOS’ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ.. ಪ್ರತಿಯೊಬ್ಬರಿಗೂ ಶಿಕ್ಷಣ ನೀಡೋ ಸಂಸ್ಥೆ.. ಕ್ರೀಡೆಯಲ್ಲಿ ಬೆಳೆಯುವ ವಿದ್ಯಾರ್ಥಿಗಳಿಗಂತೂ ಆಶಾಕಿರಣ, ಬಡವರ್ಗದ ಪೋಷಕರಿಗೆ ಬೆಳಕಾಗ್ತಿದ್ದ ಸಂಸ್ಥೆ.. ಇದೇ ‘NIOS’ ಸಂಸ್ಥೆ ಇದೀಗ ಕರ್ನಾಟಕದಲ್ಲಿ ದಾಖಲಾತಿ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ.. 

ಇದನ್ನೂ ಓದಿ: ವಿಶ್ವವಿದ್ಯಾಲಯದ ನಿರ್ಲಕ್ಷ್ಯ.. 11 ತಿಂಗಳು ಕಳೆದರೂ B.Ed ಫಲಿತಾಂಶ ಇಲ್ಲ, ವಿದ್ಯಾರ್ಥಿಗಳು ಆಕ್ರೋಶ

ಕರ್ನಾಟಕದಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ದಾಖಲೆಯ ಪ್ರಮಾಣದಲ್ಲಿ ನೊಂದಣಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ 120% ರಷ್ಟು ಹೆಚ್ಚಳವಾಗಿದೆ.. ಅದ್ರಲ್ಲೂ ಮದರಸಾಗಳಿಂದ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದೇ ಈ ದಾಖಲೆಗೆ ಕಾರಣ ಆಗಿದ್ಯಂತೆ.. 

‘NIOS’ ಪ್ರವೇಶಾತಿ 120% ಏರಿಕೆ

  • 2025-26ನೇ ಏಪ್ರಿಲ್ ಪರೀಕ್ಷೆಗೆ 10,100 ಸ್ಟೂಡೆಂಟ್ಸ್​​ ನೋಂದಣಿ 
  • 2024-25ನೇ ಸಾಲಿನಲ್ಲಿ 4,715 ಇದ್ದ ದಾಖಲಾತಿಗಿಂತ ಏರಿಕೆ ಆಗಿದೆ
  • 2023-24ರಲ್ಲಿ 4,477 & 2022-23ರಲ್ಲಿ 4,369 ಸ್ಟೂಡೆಂಟ್ಸ್ ಹಾಜರು
  • 2021-22ರಲ್ಲಿ 5,566 ವಿದ್ಯಾರ್ಥಿಗಳು ಪರೀಕ್ಷೆ, 120% ರಷ್ಟು ಹೆಚ್ಚಳ
  • ಇದಕ್ಕೆ ಕಾರಣ ಸರ್ಕಾರಿ ಇಲಾಖೆಗಳೊಂದಿಗೆ ಮಾಡಿರುವ ಒಡಂಬಡಿಕೆ 
  • ನಾವು ಸರ್ಕಾರದ 3 ಇಲಾಖೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ
  • ಅದರಲ್ಲಿ ಒಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೊಂದಿಗೆ ಒಪ್ಪಂದ
  • ಮದ್ರಸಾಗಳ 5,172ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ 
  • ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಸ್ವಾಮಿನಾಥನ್ ವಿ ಈ ಬಗ್ಗೆ ಹೇಳಿಕೆ

ಇದಿಷ್ಟೇ ಅಲ್ದೆ ಶಾಲೆಗೆ ಹೋಗದ ಮಕ್ಕಳನ್ನು ದಾಖಲಿಸಲು NIOS, ಸಮಗ್ರ ಶಿಕ್ಷಣ ಕರ್ನಾಟಕದೊಂದಿಗೆ ಸಹ ಪಾಲುದಾರಿಕೆ ಹೊಂದಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಚನಾತ್ಮಕ ಶಿಕ್ಷಣ ನೀಡಲಾಗುತ್ತೆ. ಒಟ್ಟಾರೆ ಸರ್ಕಾರಿ ಇಲಾಖೆಗಳ ಬೆಂಬಲದೊಂದಿಗೆ NIOS ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡ್ತಿರೋದಂತು ಸುಳ್ಳಲ್ಲ.

ಇದನ್ನೂ ಓದಿ: ಬಾಲಕನ ಕತೆ ಕೇಳಿ ಮರುಗಿದ ಸುರೇಶ್ ಕುಮಾರ್.. ಬೆಂಗಳೂರಲ್ಲಿ ಹೃದಯ ಮಿಡಿದ ಸ್ಟೋರಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

NIOS
Advertisment