/newsfirstlive-kannada/media/media_files/2025/11/26/school-2025-11-26-11-30-34.jpg)
ರಾಜ್ಯ ಪಠ್ಯಕ್ರಮದತ್ತ ನಮ್ಮ ವಿದ್ಯಾರ್ಥಿಗಳು ಸನ್ನಿಹಿತವಾಗೋ ಕಾಲ ಹತ್ತಿರವಾಗಿದೆ. ಸ್ಟೇಟ್​ ಎಜುಕೇಷನ್​​​ ಪಾಲಿಸಿಗೆ (SEP) ಅಂತಿಮ ವರದಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಹೊಸ ಹೆಜ್ಜೆ ಇಟ್ಟಿದ್ದು, ಕರ್ನಾಟಕದಲ್ಲಿ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿಯನ್ನ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರಕ್ಕೆ ತರಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ನಾವು ಯಾಕೆ ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುತ್ತೇವೆ..?
ನಮ್ಮ ರಾಜ್ಯದಲ್ಲಿ ಸ್ಟೇಟ್​ ಎಜುಕೇಷನ್​ಗಿಂತ, ನ್ಯಾಷನಲ್​ ಎಜುಕೇಷನ್​ ಪಾಲಿಸಿ ಹೇರಿಕೆ ಹೆಚ್ಚಾಗಿತ್ತು. ಇದೀಗ ಈ ನೀತಿಗೆ ಕರ್ನಾಟಕ ಸೆಡ್ಡು ಹೊಡೆದಿದೆ. ರಾಜ್ಯ ಪಠ್ಯಕ್ರಮಕ್ಕೆ ಒತ್ತುಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾಗಿ ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಡಿ ಇಟ್ಟಿದೆ.
ಅಂತಿಮ ವರದಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್
- ಮುಂದಿನ ವರ್ಷದಿಂದಲೇ ಪೂರ್ಣ ಪ್ರಮಾಣದಲ್ಲಿ SEP ಜಾರಿ ಸಾಧ್ಯತೆ
- ಈಗಾಗಲೇ ರಾಜ್ಯ ಸರ್ಕಾರಕ್ಕೆ SEP ವಿಸ್ತೃತ ವರದಿ ಸಲ್ಲಿಸಿರುವ ಆಯೋಗ
- ಪ್ರಮುಖಾಂಶಗಳ ವರದಿ ಸಂಪುಟ ಸಭೆ ಮುಂದಿಡಲು ಸಿಎಂ ಸೂಚನೆ
- ಸಿಎಂ ಸೂಚನೆ ಹಿನ್ನೆಲೆ ವರದಿ ತಯಾರಿಸಿದ ಉನ್ನತ ಶಿಕ್ಷಣ ಇಲಾಖೆ
- ಮುಂದಿನ ವರ್ಷದ ಸಚಿವ ಸಂಪುಟ ಸಭೆಯಲ್ಲಿ SEP ಅಂಗೀಕಾರ ಸಾಧ್ಯತೆ
- ಕಳೆದ ವರ್ಷದಿಂದಲೇ ರಾಜ್ಯದಲ್ಲಿ ಎಸ್​ಇಪಿ ಅನುಷ್ಠಾನಕ್ಕೆ ಬರಬೇಕಿತ್ತು
- ಆದ್ರೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಲು ಇವರೆಗೂ ಸಾಧ್ಯವಾಗಿಲ್ಲ
- ಇದ್ರಿಂದ ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಸಂಕಷ್ಟ
ಏನೆಲ್ಲಾ ಪರಿಷ್ಕರಣೆ?
ಸರ್ಕಾರಿ, ಅನುದಾನಿತ ಶಾಲಾ - ಕಾಲೇಜಿನಲ್ಲಿ SEP ಕಡ್ಡಾಯ ಅಳವಡಿಕೆ. ಸರ್ಕಾರಿ & ಅನುದಾನಿತ ಶಾಲಾ ಕಾಲೇಜಿನಲ್ಲಿ NEP ಅಳವಡಿಸುವಂತಿಲ್ಲ. ICSC & CBSC ಶಾಲಾ - ಕಾಲೇಜುಗಳಿಗೆ ರಾಜ್ಯ ಪಠ್ಯಕ್ರಮಕ್ಕೆ ಒತ್ತಡ ಹೇರುವಂತಿಲ್ಲ. ICSC ಮತ್ತು CBSC ಉಳಿದಂತೆ ಎಲ್ಲಾ ಶಾಲೆಗಳಿಗೆ SEP ಕಡ್ಡಾಯಗೊಳಿಸುವುದು. ಈ ಹಿಂದಿನ ರಾಜ್ಯ ಪಠ್ಯಕ್ರಮದ ನಿಯಮಗಳೇ ಬಹುತೇಕ ಅನ್ವಯವಾಗಲಿದೆ.
SEP ಪಠ್ಯಕ್ರಮ ಪದವಿ 3 ವರ್ಷ, ಸ್ನಾತಕೋತ್ತರ 2 ವರ್ಷ, ವೃತ್ತಿಪರ ಕೋರ್ಸ್ 4 ವರ್ಷ, ಉನ್ನತ ಶಿಕ್ಷಣದಲ್ಲಿ ದ್ವಿಭಾಷಾ ಬೋಧನೆಗೆ ಒತ್ತು, ಶಾಲೆ ಬಿಟ್ಟ, ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಮುಕ್ತ ಶಾಲಾ ವ್ಯವಸ್ಥೆ ಮುಂತಾದ ವಿಷಗಳು ಒಟ್ಟುಗೂಡಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಯಾವ ಮಟ್ಟಿಗಿನ ಸಕಾರಾತ್ಮಕ ಪರಿಣಾಮ ಬೀರುತ್ತೆ ಕಾದು ನೋಡಬೇಕಿದೆ.
ಇದನ್ನೂ ಓದಿ:‘ಮದುವೆ ನಡೆಯುತ್ತದೆ..’ ಪಾಲಶ್ ಮುಚ್ಚಲ್ ತಾಯಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us