/newsfirstlive-kannada/media/media_files/2026/01/21/exam-2026-01-21-10-40-20.jpg)
SSLC .. PUC.. ಪ್ರತಿಯೊಬ್ಬರ ಜೀವನದ ಬಹು ಮುಖ್ಯ ಘಟ್ಟಗಳು.. ಆದ್ರೆ ಈ ಮಧ್ಯೆಯೇ SSLC ಮೊದಲ ಪೂರ್ವ ಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಂಚಲನಕ್ಕೆ ಕಾರಣ ಆಗಿತ್ತು. ಈ ಬೆನ್ನಲ್ಲೇ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಅಲರ್ಟ್​ ಆಗಿ ಪರೀಕ್ಷೆ ಸಮಯವನ್ನೇ ಬದಲಾಯಿಸಲು ಡಿಸೈಡ್ ಮಾಡಿಕೊಂಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ.. ಶಿಕ್ಷಣ ಇಲಾಖೆ ಫುಲ್ ಅಲರ್ಟ್..!
ಪ್ರಶ್ನೆ ಪತ್ರಿಕೆ ಸೋರಿಕೆಯನ್ನ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಒಂದು ನಿರ್ಧಾರಕ್ಕೆ ಬಂದಿದೆ. ಸಾಮಾನ್ಯವಾಗಿ 10 ಗಂಟೆಗೆ ನಡೆಯುತ್ತಿದ್ದ ಪರೀಕ್ಷೆಯನ್ನ 11 ಗಂಟೆಗೆ ಮಾಡೋಕೆ ತೀರ್ಮಾನ ಮಾಡಿದೆ. ಈ ಮೂಲಕ ಎರಡನೇ ಪೂರ್ವ ಭಾವಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
/filters:format(webp)/newsfirstlive-kannada/media/media_files/2025/08/11/sslc_exams-1-2025-08-11-09-54-00.jpg)
ಹೊಸ ನಿಯಮ ಏನು?
ಜನವರಿ 27ರಿಂದ ಫೆಬ್ರವರಿ 2ರವೆರೆಗೆ 2ನೇ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ.. ಪರೀಕ್ಷೆ ನಡೆಯುವ ದಿನದಂದು ಬೆಳಿಗ್ಗೆ 9:30 ಕ್ಕೆ ಮುಖ್ಯೋಪಾಧ್ಯಾಯರು ಶಾಲಾ ಲಾಗಿನ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.. ಬೆಳಗ್ಗೆ 10 ಗಂಟೆಯೊಳಗೆ ಪ್ರಶ್ನೆ ಪತ್ರಿಕೆಗಳ ಪ್ರಿಂಟಿಂಗ್ ಮಾಡಿಕೊಳ್ಳಬೇಕು. 10:30 ರ ವೇಳೆಗೆ ಪ್ರಶ್ನೆ ಪತ್ರಿಕೆಗಳು ವಿತರಣೆಗೆ ಸಿದ್ಧವಿರಬೇಕು. 10:50 ಕ್ಕೆ ಪರೀಕ್ಷಾ ಕೊಠಡಿಗಳನ್ನು ತಲುಪಬೇಕು. ಆದ್ರೂ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ತಮ್ಮ ತರಗತಿಗಳಲ್ಲಿ ಹಾಜರಿರಬೇಕು. ಪರೀಕ್ಷೆ ಆರಂಭಕ್ಕೂ ಮುನ್ನ ಅಂದರೆ ಬೆಳಗ್ಗೆ 9 ರಿಂದ 10:30 ರವರೆಗೆ ಶಾಲೆಯಲ್ಲಿ ಸಾಮಾನ್ಯ ತರಗತಿಗಳು ನಡೆಯಲಿವೆ.
ತಪ್ಪಿದ್ರೆ ಯಾವ ಕ್ರಮ?
ಪ್ರಶ್ನೆ ಪತ್ರಿಕೆ ಸೋರಿಕೆಯಾದಲ್ಲಿ ಪ್ರಿನಿಪಾಲ್, ನೋಡಲ್ ಶಿಕ್ಷಕರು, BEO ಮತ್ತು ಜಿಲ್ಲಾ ಉಪನಿರ್ದೇಶಕರೇ ಹೊಣೆಯಾಗಿರುತ್ತಾರೆ. ಅಂತಹ ಪ್ರಕರಣಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ. ಮೊದಲ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಯಡವಟ್ಟಾಗಿತ್ತು. ಮುಂದೆ ನಡೆಯೋ ಎರಡನೇ ಪೂರ್ವ ಭಾವಿ ಪರೀಕ್ಷೆಯಾದ್ರೂ ಹೇಗೆ ನಡೆಯುತ್ತೆ? ಕಾದು ನೋಡ್ಬೇಕಿದೆ.
ಇದನ್ನೂ ಓದಿ: ಬಿಗ್​ ಬಾಸ್​ 12ರಲ್ಲಿ ಕಾವ್ಯ ಪ್ರಕಾರ ಯಾರ್ಯಾರು ಹೆಂಗೆಂಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us