/newsfirstlive-kannada/media/media_files/2026/03/06/upsc-2026-03-06-17-30-48.jpg)
ಬೆಂಗಳೂರು: ದೇಶದ ಅತ್ಯುನ್ನತ ಹಾಗೂ ಕಠಿಣ ಪರೀಕ್ಷೆ ಎಂದೇ ಪರಿಗಣಿಸಲಾಗುವ ಕೇಂದ್ರ ಲೋಕಸೇವಾ ಆಯೋಗದ (UPSC) 2025-26ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ದೇಶದಾದ್ಯಂತ ಒಟ್ಟು 958 ಅಭ್ಯರ್ಥಿಗಳು ಐಎಎಸ್ (IAS), ಐಪಿಎಸ್ (IPS), ಐಎಫ್ಎಸ್ (IFS) ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ದೇಶಕ್ಕೆ ಅನುಜ್ ಅಗ್ನಿಹೋತ್ರಿ ಫಸ್ಟ್
ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅನುಜ್ ಅಗ್ನಿಹೋತ್ರಿ (Anuj Agnihotri) ಅವರು ಪ್ರಥಮ ರ‍್ಯಾಂಕ್ (AIR 1) ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ:ಕಲರ್ಸ್ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ; ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಬರ್ತಿದೆ ಹೊಸ ಕತೆ
/filters:format(webp)/newsfirstlive-kannada/media/media_files/2026/03/06/upsc-2-2026-03-06-17-33-08.jpg)
ರಾಜ್ಯಕ್ಕೆ ಕಿರಣ್ ಕಮಾಟೆ ಟಾಪರ್!
ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 22 ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರಲ್ಲಿ ಕಿರಣ್ ಕಮಾಟೆ (Kiran Kamate) ಅವರು ಅಖಿಲ ಭಾರತ ಮಟ್ಟದಲ್ಲಿ 53ನೇ ಱಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಮೊದಲ ಱಂಕ್ (State Topper) ಪಡೆದು ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹಾಗೆಯೇ, 82ನೇ ಱಂಕ್ ಪಡೆದ ಸಂದೀಪ್ ಬಡಾದ್ ಅವರು ರಾಜ್ಯಕ್ಕೆ ದ್ವಿತೀಯ ಟಾಪರ್ ಆಗಿದ್ದಾರೆ.
'ಇಂಡಿಯಾ ಫಾರ್ ಐಎಎಸ್' ಐತಿಹಾಸಿಕ ಸಾಧನೆ
ಕರ್ನಾಟಕದ ಪಾಲಿಗೆ ಈ ಬಾರಿಯ ಫಲಿತಾಂಶದಲ್ಲಿ ಅತಿ ದೊಡ್ಡ ಅಚ್ಚರಿ ಮತ್ತು ಹೆಮ್ಮೆಯ ವಿಷಯವೆಂದರೆ ಅದು ಬೆಂಗಳೂರಿನ ಕೋಚಿಂಗ್ ಸಂಸ್ಥೆಯೊಂದರ ಅಸಾಧಾರಣ ಸಾಧನೆ. ರಾಜ್ಯದಿಂದ ಯುಪಿಎಸ್‌ಸಿ ಪಾಸ್ ಮಾಡಿದ 22 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 19 ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ವಿಜಯನಗರದಲ್ಲಿರುವ 'ಇಂಡಿಯಾ ಫಾರ್ ಐಎಎಸ್' (INDIA 4 IAS) ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ.
ಇದನ್ನೂ ಓದಿ: ಡೆಪ್ಯುಟಿ ಕಲೆಕ್ಟರ್ ಹುದ್ದೆಯಲ್ಲಿದ್ಕೊಂಡೇ ದೇಶಕ್ಕೇ 2ನೇ ಱಂಕ್ -ಮಹಿಳಾ ಟಾಪರ್ ರಾಜೇಶ್ವರಿ ಯಾರು..?
/filters:format(webp)/newsfirstlive-kannada/media/media_files/2026/03/06/upsc-1-2026-03-06-17-33-24.jpg)
ರಾಜ್ಯದಿಂದ ಆಯ್ಕೆಯಾದವರಲ್ಲಿ ಸಿಂಹಪಾಲು ಕೇವಲ ಒಂದೇ ಸಂಸ್ಥೆಯಿಂದ ಬಂದಿರುವುದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ಈ ಅಕಾಡೆಮಿಯ ಗುಣಮಟ್ಟ, ಪರಿಣಿತರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಸತತ ಶ್ರಮವನ್ನು ಸಾಬೀತುಪಡಿಸಿದೆ.
ಯುಪಿಎಸ್‌ಸಿ ತೇರ್ಗಡೆಯಾದ ಕರ್ನಾಟಕದ 22 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ:
53ನೇ ಱಂಕ್ - ಕಿರಣ್ ಕಮಾಟೆ
82ನೇ ಱಂಕ್ - ಸಂದೀಪ್ ಬಡಾದ್
169ನೇ ಱಂಕ್ - ಶ್ರೇಯಾಂಶ್ ಗೋಮ್ಸ್
310ನೇ ಱಂಕ್ - ಚಿನ್ಮಯೀ ಪಿ.
389ನೇ ಱಂಕ್ - ಮನೋಜ್ ಜಿ. ಎಸ್.
436ನೇ ಱಂಕ್ - ಎ. ಮಧು
462ನೇ ಱಂಕ್ - ವರುಣ್ ಗೌಡ ಪಿ.
469ನೇ ಱಂಕ್ - ನಿವೇದಿತಾ ಸಿ. ಭಾವಿಮಣಿ
504ನೇ ಱಂಕ್ - ವಿಶಾಖ ಕದಂ
525ನೇ ಱಂಕ್ - ಸೂರಜ್ ಕೆ. ಎಲ್.
554ನೇ ಱಂಕ್ - ಧನಂಜಯ ಆರ್.
556ನೇ ಱಂಕ್ - ಉಲ್ಲಾಸ್ ಎಂ. ಎಸ್.
622ನೇ ಱಂಕ್ - ಮುತ್ತೇಶ್ ಗೌಡ ಎ. ಎಸ್.
641ನೇ ಱಂಕ್ - ಸಾಗರ್ ಎ.
660ನೇ ಱಂಕ್ - ಪಾಂಡುರಂಗ ಎಸ್. ಕಂಬಳಿ
661ನೇ ಱಂಕ್ - ಚಂದನ್ ವೈ.
664ನೇ ಱಂಕ್ - ಬಸವರಾಜ್ ಎಂ. ಜವಳಿ
720ನೇ ಱಂಕ್ - ಪ್ರವೀಣ ಹೆಚ್. ಟಿ.
732ನೇ ಱಂಕ್ - ಯತೀಶ್ ಎಂ. ಎ.
739ನೇ ಱಂಕ್ - ಬಸವರಾಜ್ ಎಂ. ಪಾಟೀಲ್
786ನೇ ಱಂಕ್ - ಅನಿರುದ್ಧ್ ಕಟ್ಟಿಮನಿ
880ನೇ ಱಂಕ್ - ಚಂದ್ರಶೇಖರ್
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ಈ ಎಲ್ಲ ಕರುನಾಡಿನ ಕುವರ-ಕುವರಿಯರಿಗೆ ರಾಜ್ಯದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ ಸಂಪೂರ್ಣ ಫಲಿತಾಂಶವನ್ನು ವೀಕ್ಷಿಸಬಹುದು.
ಇದನ್ನೂ ಓದಿ: ದೊಡ್ಡಣ್ಣ ಅಮೆರಿಕಾದ ಡೂಮ್ಸ್ ಡೇ ಮಿಸೈಲ್ ಟೆಸ್ಟ್ ರಹಸ್ಯ ಏನು? ಈ ಮಿಸೈಲ್ ಶಕ್ತಿ ಸಾಮರ್ಥ್ಯ ಎಂಥದ್ದು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us