Advertisment

ಒಂದೇ ಕುಟುಂಬದಲ್ಲಿ 2 ಸಂಭ್ರಮ: ಮೊದಲ ಪ್ರಯತ್ನದಲ್ಲೇ ವೈಭವ್ ಸೂರ್ಯವಂಶಿ ಚಿಕ್ಕಪ್ಪನಿಂದ UPSC ಸಾಧನೆ..!

ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್ ಸೂರ್ಯವಂಶಿ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್, ಈಗ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC) ಭರ್ಜರಿ ಜಯ ಸಾಧಿಸಿದ್ದಾರೆ.

author-image
Ganesh Kerekuli
Abhishek Chauhan (2)
Advertisment

ಪ್ರತಿಭೆ ಮತ್ತು ಪರಿಶ್ರಮ ಒಂದೇ ಕುಟುಂಬದಲ್ಲಿ ಮೇಳೈಸಿದರೆ ಎಂತಹ ಅದ್ಭುತಗಳು ನಡೆಯುತ್ತವೆ ಎಂಬುದಕ್ಕೆ ಈ ಕುಟುಂಬವೇ ಸಾಕ್ಷಿ. ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೈಭವ್ ಸೂರ್ಯವಂಶಿ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್, ಈಗ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC) ಭರ್ಜರಿ ಜಯ ಸಾಧಿಸಿದ್ದಾರೆ.

Advertisment

ಮೊದಲ ಪ್ರಯತ್ನದಲ್ಲೇ 102ನೇ ಱಂಕ್! 

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅಭಿಷೇಕ್ ಚೌಹಾಣ್ ಅವರು ಅಖಿಲ ಭಾರತ ಮಟ್ಟದಲ್ಲಿ 102ನೇ ಱಂಕ್ ಗಳಿಸಿದ್ದಾರೆ. ವಿಶೇಷವೆಂದರೆ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಠಿಣವೆನಿಸುವ ಈ ಪರೀಕ್ಷೆಯನ್ನು ಮೊದಲ ಬಾರಿಯೇ ಭೇದಿಸಿರುವುದು ಅವರ ಅಸಾಧಾರಣ ಬೌದ್ಧಿಕ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಇದನ್ನೂ ಓದಿ: ಗೂಗಲ್ ಸಿಇಓ ಸುಂದರ್ ಪಿಚ್ಚೈಗೆ 692 ಮಿಲಿಯನ್ ಡಾಲರ್ ಸಂಬಳ, ಇನ್ಸೆಂಟೀವ್ ನೀಡಲು ಕಂಪನಿ ನಿರ್ಧಾರ!

Abhishek Chauhan (1)

ಬಿಹಾರದವರಾದ 13 ವರ್ಷದ ವೈಭವ್ ಸೂರ್ಯವಂಶಿ, ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 1.10 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಲ್ಲದೆ, ಭಾರತದ ಅಂಡರ್-19 ತಂಡದಲ್ಲೂ ಆಡುತ್ತಿದ್ದಾರೆ.

Advertisment

ಕ್ರೀಡೆ ಮತ್ತು ಶಿಕ್ಷಣದ ಸಂಗಮ

ಒಂದೆಡೆ ಸೊಸೆ (ವೈಭವ್) ಕ್ರೀಡಾ ಲೋಕದಲ್ಲಿ ಭಾರತದ ಭರವಸೆಯ ಆಟಗಾರನಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಚಿಕ್ಕಪ್ಪ (ಅಭಿಷೇಕ್) ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ಒಂದೇ ಕುಟುಂಬದ ಇಬ್ಬರು ಸದಸ್ಯರು ದೇಶದ ಎರಡು ಅತ್ಯುನ್ನತ ಕ್ಷೇತ್ರಗಳಲ್ಲಿ (ಕ್ರಿಕೆಟ್ ಮತ್ತು ಐಎಎಸ್) ಅಲ್ಪಾವಧಿಯಲ್ಲೇ ಇಂತಹ ದೊಡ್ಡ ಮಟ್ಟದ ಯಶಸ್ಸು ಕಂಡಿರುವುದು ಸೋಜಿಗವೇ ಸರಿ.

Abhishek Chauhan

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಅಭಿಷೇಕ್ ಚೌಹಾಣ್ ಅವರ ಈ ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಒಂದು ಕುಟುಂಬದಲ್ಲಿ ಕ್ರಿಕೆಟ್ ಸ್ಟಾರ್ ಮತ್ತು ಐಎಎಸ್ ಅಧಿಕಾರಿ ಇರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಒಂದೇ ಱಂಕ್, ಒಂದೇ ರೋಲ್ ನಂಬರ್! ಒಂದೇ ಹೆಸರಿನ ಇಬ್ಬರು ‘ಆಕಾಂಕ್ಷಾ’ಗಳ ಮಧ್ಯೆ ಫೈಟ್​..! UPSC ಯಡವಟ್ಟು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Chauhan Vaibhav Suryavanshi
Advertisment
Advertisment
Advertisment