ಜಾಬ್‌ ಆಫರ್‌ ಬಂದಾಗ ಮೊದಲು ನೀವು ಮಾಡಬೇಕಾಗಿದ್ದು ಏನು..?

ಕೆಲಸಕ್ಕೆಂದು ಇಂಟರ್ವ್ಯೂಗೆ ಹೋದಾಗ ಹೆಚ್ಚಿನವರಿಗೆ ಟೆಕ್ನಿಕಲ್ ಪ್ರಶ್ನೆಗಳ ಬಗ್ಗೆ ಭಯವಿರುವುದಿಲ್ಲ. ಆದರೆ, "ಕೆಲಸ ಯಾಕೆ ಚೇಂಜ್ ಮಾಡ್ತಿದ್ದೀರಾ?" ಎಂದು ಕೇಳಿದಾಗ ಮಾತ್ರ ಸ್ಯಾಲರಿ ಹೈಕ್ ಬೇಕು ಅಂದುಬಿಟ್ಟರೆ ಎಲ್ಲಿ ಇಂಪ್ರೆಷನ್ ಹಾಳಾಗುತ್ತದೋ ಎಂಬ ಟೆನ್ಷನ್ ಶುರುವಾಗುತ್ತದೆ.

author-image
Ganesh Kerekuli
ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ
Advertisment

ಜಾಬ್ ಸರ್ಚ್ ಮಾಡುವಾಗ ಪ್ರಾಮಾಣಿಕತೆ ಇರಲಿ, ಆದರೆ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಿಕೊಳ್ಳಲು ಹೆದರಬೇಡಿ. ಇಂಟರ್ವ್ಯೂ ಪ್ರಶ್ನೆಗಳಿಗೆ ಪಟಪಟನೆ ಆನ್ಸರ್ ಮಾಡಿ 'ಸೈ' ಎನಿಸಿಕೊಳ್ಳಲು ಸೂಕ್ತ ಪ್ರಿಪರೇಷನ್ ತುಂಬಾ ಇಂಪಾರ್ಟೆಂಟ್. ನಿಮ್ಮಲ್ಲಿರುವ ಟ್ಯಾಲೆಂಟ್ ಮತ್ತು ಸ್ಕಿಲ್ಸ್ ಅನ್ನು ಸರಿಯಾಗಿ ಪ್ರೆಸೆಂಟ್ ಮಾಡಿದರೆ ಮಾತ್ರ ಒಳ್ಳೆಯ ಕೆರಿಯರ್ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದ್ರೆ ಇಂಟರ್ವ್ಯೂಗೆ ಹೋದಾಗ ನೆನಪಿನಲ್ಲಿ ಇಡಲೇಬೇಕಾದ ಕೆಲವು ವಿಚಾರಗಳು ಇಲ್ಲಿದೆ.

ಕೆಲಸಕ್ಕೆಂದು ಇಂಟರ್ವ್ಯೂಗೆ ಹೋದಾಗ ಹೆಚ್ಚಿನವರಿಗೆ ಟೆಕ್ನಿಕಲ್ ಪ್ರಶ್ನೆಗಳ ಬಗ್ಗೆ ಭಯವಿರುವುದಿಲ್ಲ. ಆದರೆ, "ಕೆಲಸ ಯಾಕೆ ಚೇಂಜ್ ಮಾಡ್ತಿದ್ದೀರಾ?" ಎಂದು ಕೇಳಿದಾಗ ಮಾತ್ರ ಸ್ಯಾಲರಿ ಹೈಕ್ ಬೇಕು ಅಂದುಬಿಟ್ಟರೆ ಎಲ್ಲಿ ಇಂಪ್ರೆಷನ್ ಹಾಳಾಗುತ್ತದೋ ಎಂಬ ಟೆನ್ಷನ್ ಶುರುವಾಗುತ್ತದೆ. ಹಳೆಯ ಆಫೀಸ್ ಬಗ್ಗೆ ನೆಗೆಟಿವ್ ಆಗಿ ಹೇಳುವುದು ಕೂಡ ರಿಸ್ಕ್ ಎನಿಸುತ್ತದೆ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್ ಆಗಿ ಉತ್ತರಿಸುವುದು ಹೇಗೆ ಎಂಬುದು ಗೊತ್ತಿರಬೇಕು.

ಇದನ್ನೂ ಓದಿ: ನೆಲಮಂಗಲದಲ್ಲಿ ಪ್ಲಾಸ್ಟಿಕ್‌ ಗನ್‌ ತೋರಿಸಿ ರಾಬರಿ.. ಸಿನಿಮಾ ಸ್ಟೈಲ್‌ನಲ್ಲಿ ಬಂದು ಚಿನ್ನಾಭರಣ ದರೋಡೆ..

ಜಾಬ್ ಚೇಂಜ್ ಮಾಡಲು ಬಾಸ್ ಕಿರಿಕಿರಿ ಅಥವಾ ಕೊಲೀಗ್ಸ್ ಗಾಸಿಪ್ ಕಾರಣವಾಗಿದ್ದರೂ, ಅದನ್ನು ಇಂಟರ್ವ್ಯೂನಲ್ಲಿ ಹೇಳುವುದು ಸರಿಯಲ್ಲ. ಯಾರ ಬಗ್ಗೆಯೂ ನೆಗೆಟಿವ್ ಆಗಿ ಕಮೆಂಟ್ ಮಾಡಬೇಡಿ. ಬೇರೆಯವರ ಬಗ್ಗೆ ಕಂಪ್ಲೇಂಟ್ ಮಾಡಿದರೆ ನೀವು ಟೀಮ್ ಜೊತೆ ಹೊಂದಿಕೊಳ್ಳದ ವ್ಯಕ್ತಿ ಎಂಬ ಮೆಸೇಜ್ ರವಾನೆಯಾಗುತ್ತದೆ. ಅದರ ಬದಲು, ಹೊಸ ಜಾಬ್‌ಗೆ ಬೇಕಾದ ಸ್ಕಿಲ್ಸ್ ನಿಮ್ಮಲ್ಲಿದೆ ಎಂದು ತೋರಿಸಲು ಈ ಪ್ರಶ್ನೆಯನ್ನು ಒಂದು ಆಪರ್ಚುನಿಟಿಯಾಗಿ ಬಳಸಿಕೊಳ್ಳಿ.

ಹೈರಿಂಗ್ ಮ್ಯಾನೇಜರ್ಸ್ ಯಾವಾಗಲೂ ಕ್ಯಾಂಡಿಡೇಟ್ಸ್‌ನಲ್ಲಿ 'ರೆಡ್ ಫ್ಲ್ಯಾಗ್' ಇದೆಯೇ ಎಂದು ಚೆಕ್ ಮಾಡುತ್ತಿರುತ್ತಾರೆ. ನೀವು ಹಳೆಯ ಆಫೀಸ್ ಬಗ್ಗೆ ಕಂಪ್ಲೇಂಟ್ ಮಾಡುತ್ತಾ ಹೋದರೆ ಅವರಿಗೆ ನಿಮ್ಮ ಮೇಲೆ ನೆಗೆಟಿವ್ ಒಪಿನಿಯನ್ ಬರುತ್ತದೆ. ಅವರಿಗೆ ಬೇಕಾಗಿರುವುದು ಆ ರೋಲ್‌ಗೆ ಸೂಕ್ತವಾದ ಮೈಂಡ್‌ಸೆಟ್ ಮತ್ತು ಕೆಲಸ ಮಾಡುವ ಛಾತಿ ಇರುವ ವ್ಯಕ್ತಿ. ಆದ್ದರಿಂದ ನಿಮ್ಮ ಪಾಸಿಟಿವ್ ಆ್ಯಟಿಟ್ಯೂಡ್ ಬಗ್ಗೆ ಅವರಿಗೆ ಭರವಸೆ ಮೂಡಿಸಿ.

ಇದನ್ನೂ ಓದಿ:ಕಾಲೇಜುಗಳಲ್ಲಿ ಜಾತಿ ನಿಂದನೆಗೆ ಯುಜಿಸಿ ಕಡಿವಾಣ : ಹೊಸ ನಿಯಮಕ್ಕೆ ಪ್ರಬಲ ಜಾತಿಗಳ ತೀವ್ರ ವಿರೋಧ

ಒಂದು ವೇಳೆ ಕಂಪನಿಯ ಮೌಲ್ಯಗಳು ನಿಮ್ಮ ಐಡಿಯಾಲಜಿಗೆ ಮ್ಯಾಚ್ ಆಗದಿದ್ದರೆ, ಅದನ್ನು ಸುಂದರವಾಗಿ ವಿವರಿಸಿ. ಹಳೆಯ ಆಫೀಸ್ ಬಗ್ಗೆ ದೂರು ನೀಡುವ ಬದಲು, ಹೊಸ ಕಂಪನಿಯ ವಿಷನ್ ಮತ್ತು ನಿಮ್ಮ ಕೆರಿಯರ್ ಗೋಲ್ಸ್ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂದು ತಿಳಿಸಿ. ಈ ಹೊಸ ರೋಲ್‌ನಲ್ಲಿ ನೀವು ಕಲಿಯಬಹುದಾದ ಹೊಸ ಸ್ಕಿಲ್ಸ್ ಮತ್ತು ನಿಮ್ಮ ಪ್ರೊಫೆಷನಲ್ ಗ್ರೋತ್ ಬಗ್ಗೆ ಹೆಚ್ಚು ಫೋಕಸ್ ಮಾಡಿ ಮಾತನಾಡಿ.

ಬರೀ ನಿಮ್ಮ ಪರ್ಸನಲ್ ಗ್ರೋತ್ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ ಇಂಟರ್ವ್ಯೂವರ್ ಮೇಲೆ ನೆಗೆಟಿವ್ ಇಂಪ್ರೆಷನ್ ಬೀಳಬಹುದು. ನಿಮ್ಮಿಂದ ಕಂಪನಿಯ ಡೆವಲಪ್‌ಮೆಂಟ್ ಹೇಗೆ ಆಗುತ್ತದೆ ಮತ್ತು ಕ್ಲೈಂಟ್ಸ್ ಜೊತೆ ಲಾಂಗ್ ಟರ್ಮ್ ರಿಲೇಷನ್‌ಶಿಪ್ ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ. ನೀವು ಯಾವುದೇ ಚಾಲೆಂಜ್ ಎದುರಿಸಲು ರೆಡಿ ಇದ್ದೀರಿ ಎಂಬ ಕಾನ್ಫಿಡೆನ್ಸ್ ಅವರಿಗೆ ನಿಮ್ಮ ಉತ್ತರದ ಮೂಲಕ ತಲುಪಲಿ.

ಇದನ್ನೂ ಓದಿ:ಕಾಲೇಜುಗಳಲ್ಲಿ ಜಾತಿ ನಿಂದನೆಗೆ ಯುಜಿಸಿ ಕಡಿವಾಣ : ಹೊಸ ನಿಯಮಕ್ಕೆ ಪ್ರಬಲ ಜಾತಿಗಳ ತೀವ್ರ ವಿರೋಧ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Job eduction interview
Advertisment