/newsfirstlive-kannada/media/media_files/2026/03/06/upsc-result-3-2026-03-06-15-45-26.jpg)
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಮೊದಲನೇ ಱಂಕ್ ಪಡೆದು ಇಡೀ ದೇಶದ ಗಮನ ಸೆಳೆದಿದ್ದಾರೆ. ಐಎಎಸ್ (IAS), ಐಪಿಎಸ್ (IPS) ಹಾಗೂ ಐಎಫ್‌ಎಸ್ (IFS) ಅಧಿಕಾರಿಯಾಗುವ ಕನಸು ಹೊತ್ತು ಓದುತ್ತಿರುವ ಲಕ್ಷಾಂತರ ಯುವಜನತೆಗೆ ಇವರ ಈ ಸಾಧನೆ ದೊಡ್ಡ ಸ್ಫೂರ್ತಿಯಾಗಿದೆ.
ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಹಾಗೂ ವಿಷಯಗಳ ಮೇಲಿನ ಸ್ಪಷ್ಟತೆ (Conceptual clarity) ಇದ್ದರೆ ಯುಪಿಎಸ್‌ಸಿಯಂತಹ ಕಠಿಣ ಪರೀಕ್ಷೆಯಲ್ಲೂ ಅಗ್ರಸ್ಥಾನಕ್ಕೇರಬಹುದು ಎಂಬುದನ್ನು ಅನುಜ್ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಓದಿನಲ್ಲಿ ಮುಂದಿದ್ದ ಇವರು, ಪ್ರತಿಷ್ಠಿತ ‘ವಜಿರಾಮ್ ಅಂಡ್ ರವಿ’ (Vajiram and Ravi) ಸಂಸ್ಥೆಯ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದ (Interview Guidance Program) ವಿದ್ಯಾರ್ಥಿಯಾಗಿದ್ದರು.
ಅನುಜ್ ಅಗ್ನಿಹೋತ್ರಿ ಹಿನ್ನೆಲೆ ಮತ್ತು ಶಿಕ್ಷಣ
2025ರ ಯುಪಿಎಸ್‌ಸಿ ಟಾಪರ್ ಅನುಜ್ ಅಗ್ನಿಹೋತ್ರಿ ಅವರು ಮೂಲತಃ ರಾಜಸ್ಥಾನದ ಚಿತ್ತೋರ್‌ಗಢ (Chittorgarh) ಜಿಲ್ಲೆಯವರು. ಇವರ ಅತ್ಯುನ್ನತ ಸಾಧನೆಯಿಂದಾಗಿ ಅವರ ತವರು ಜಿಲ್ಲೆ ಮತ್ತು ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಇದನ್ನೂ ಓದಿ: UPSC CSE 2025 ಅಂತಿಮ ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್..!
/filters:format(webp)/newsfirstlive-kannada/media/media_files/2026/03/06/upsc-result-2-2026-03-06-15-22-09.jpg)
ಬಾಲ್ಯದಿಂದಲೇ ಶೈಕ್ಷಣಿಕವಾಗಿ ಬಲವಾದ ತಳಹದಿ ಹೊಂದಿದ್ದ ಇವರು, ತಮ್ಮ 10ನೇ ತರಗತಿಯನ್ನು 'ಅಟಾಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್'ನಲ್ಲಿ (Atomic Energy Central School) ಪೂರೈಸಿದರು. ಬಳಿಕ ಶಿಕ್ಷಣ ನಗರಿ ಕೋಟಾದ 'ಎಂ.ಬಿ. ಪಬ್ಲಿಕ್ ಸೀನಿಯರ್ ಸೆಕೆಂಡರಿ ಸ್ಕೂಲ್'ನಲ್ಲಿ 12ನೇ ತರಗತಿ ಮುಗಿಸಿದರು.
ಏಮ್ಸ್‌ನಲ್ಲಿ ವೈದ್ಯಕೀಯ ಪದವಿ
ಶಾಲಾ ಶಿಕ್ಷಣದ ನಂತರ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಜ್, ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಜೋಧ್‌ಪುರದ ಏಮ್ಸ್ (AIIMS Jodhpur) ನಲ್ಲಿ ಎಂಬಿಬಿಎಸ್ (MBBS) ಪದವಿ ಪಡೆದರು.
ಡಾಕ್ಟರ್ ಆಗಿದ್ದರೂ ಐಎಎಸ್‌ನತ್ತ ಒಲವು ಏಕೆ?
ವೈದ್ಯಕೀಯ ವೃತ್ತಿಯಲ್ಲಿ ಉಜ್ವಲ ಭವಿಷ್ಯವಿದ್ದರೂ, ಸಾರ್ವಜನಿಕ ಆಡಳಿತದ ಮೂಲಕ ವಿಸ್ತಾರವಾಗಿ ದೇಶಸೇವೆ ಮಾಡುವ ಮಹದಾಸೆ ಅನುಜ್ ಅವರಿಗಿತ್ತು. ಇದೇ ಕಾರಣಕ್ಕಾಗಿ ಎಂಬಿಬಿಎಸ್ ಮುಗಿಸಿದ ಬಳಿಕ ಅವರು ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಕೊಂಡರು.
ಒಬ್ಬ ವೈದ್ಯಕೀಯ ವಿದ್ಯಾರ್ಥಿಯಿಂದ ಯುಪಿಎಸ್‌ಸಿ ಟಾಪರ್ (AIR 1) ಆಗುವವರೆಗಿನ ಇವರ ಪ್ರಯಾಣ, ಸಾರ್ವಜನಿಕ ಸೇವೆಯ ಮೇಲಿರುವ ಅವರ ಬದ್ಧತೆ, ಶಿಸ್ತು ಹಾಗೂ ಸಮರ್ಪಣಾ ಭಾವವನ್ನು ಎತ್ತಿ ತೋರಿಸುತ್ತದೆ. ವರ್ಷಗಳ ಕಾಲ ಛಲ ಬಿಡದೆ ಓದಿ, ಇಂದು ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿರುವ ಡಾ. ಅನುಜ್ ಅಗ್ನಿಹೋತ್ರಿ ಇದೀಗ ದೇಶದ ಲಕ್ಷಾಂತರ ಯುವಕರ ಪಾಲಿನ ರೋಲ್ ಮಾಡೆಲ್ ಆಗಿದ್ದಾರೆ.
ಇದನ್ನೂ ಓದಿ:UPSC ಫಲಿತಾಂಶ: ಕರ್ನಾಟಕದ 20 ಅಭ್ಯರ್ಥಿಗಳು ತೇರ್ಗಡೆ; ಕಿರಣ್ ಕಮಾಟೆ ರಾಜ್ಯಕ್ಕೆ ಟಾಪರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us