Advertisment

Weak Knees; ಮೊಣಕಾಲು ನೋವು ಇದ್ದರೂ ನೀವು ಓಡಬಹುದಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

author-image
Gopal Kulkarni
Updated On
ನಿತ್ಯ ಸಾಯಂಕಾಲ ಈ ವ್ಯಾಯಾಮಗಳನ್ನು ಮಾಡುವ ರೂಢಿ ಇಟ್ಟುಕೊಳ್ಳಿ, ತೂಕವನ್ನು ಕಳೆದುಕೊಳ್ಳಿ
Advertisment
  • ಮೊಣಕಾಲು ನೋವು ಇರುವವರು ಬೆಳಗ್ಗೆ ಜಾಗಿಂಗ್ ಮಾಡಬಹುದಾ?
  • ಈ ಬಗ್ಗೆ ಎಲುಬು ಕೀಲು ತಜ್ಞರು ನೀಡುವ ಅಭಿಪ್ರಾಯಗಳೇನು ಗೊತ್ತಾ
  • ಸ್ಥೂಲ ಕಾಯದವರು ಬೆಳಗ್ಗೆ ರನ್ನಿಂಗ್ ಮಾಡುವುದರಿಂದ ಇದೆ ಅಪಾಯ

ಬೆಳಗ್ಗೆ ಎದ್ದು ರನ್ನಿಂಗ್ ಅಥವಾ ಜಾಗಿಂಗ್ ಮಾಡುವುದು ಅನೇಕರ ಬದುಕಿನ ಒಂದು ಭಾಗ. ದೇಹದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಸದೃಢವಾಗಿ ಇಟ್ಟುಕೊಳ್ಳಲು ಎಲ್ಲರೂ ಬಯಸುತ್ತಾರೆ. ಹೀಗಾಗಿ ನಿತ್ಯ ಒಂದಲ್ಲ ಒಂದು ರೀತಿಯ ವ್ಯಾಯಾಮಕ್ಕೆ ತಮ್ಮ ದೇಹವನ್ನು ಒಡ್ಡುತ್ತಾರೆ. ಆದ್ರೆ ಅನೇಕ ಸಮಸ್ಯೆಗಳು ನಮಗೆ ದೈನಂದಿನ ವ್ಯಾಯಾಮದಿಂದ ದೂರವಾಗುವಂತೆ ಮಾಡುತ್ತವೆ. ಉದಾಹರಣೆಗೆ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡರೆ ಕೆಲವರು ಜಾಗಿಂಗ್​ನ್ನು ಬಿಟ್ಟು ಬಿಡುತ್ತಾರೆ. ಮ್ಯಾರಥಾನ್​ನಂತಹ ಕಾರ್ಯಕ್ರಮದಲ್ಲೂ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಾರೆ. ಆದ್ರೆ ಈ ರೀತಿ ಸಮಸ್ಯೆಯಿಂದ ಬಳಲುವವರು ಜಾಗಿಂಗ್ ಅಥವಾ ರನ್ನಿಂಗ್ ಮಾಡಲು ಆತಂಕಪಡಬೇಕಿಲ್ಲಾ ಎನ್ನುತ್ತಾರೆ ಎಲುಬು ಕೀಲು ತಜ್ಞರು.

Advertisment

ಇದನ್ನೂ ಓದಿ:ಆಲಿಯಾ ಭಟ್​​ಗೆ ಇದ್ಯಾ ಈ ಮನೋರೋಗ? ಮದುವೆಯ ವೇಳೆ ಮೇಕಪ್​ ಮ್ಯಾನ್​ಗೆ ಬಿಗ್​ ಶಾಕ್​!

ಮೊಣಕಾಲು ನೋವು ಇರುವವರು ಜಾಗಿಂಗ್ ಹಾಗೂ ರನ್ನಿಂಗ್ ಮಾಡಬಾರದು ಅಂತ ನಿಮ್ಮ ಯೋಚನೆ ಇದ್ದಲ್ಲಿ ಅದು ತಪ್ಪು ಅನ್ನುತ್ತಾರೆ ಎಲುಬು ಕೀಲುಗಳ ತಜ್ಞ ಡಾ ಅಖಿಲೇಶ್ ಯಾದವ್. ನೀವು ಜಾಗಿಂಗ್ ಮಾಡುವುದು ತಪ್ಪಲ್ಲ. ಆದ್ರೆ ಹೇಗೆ ಮಾಡಬೇಕು ಅಂತ ತಿಳಿದುಕೊಳ್ಳದೇ ಮಾಡುವುದೇ ತಪ್ಪು ಹಾಗೂ ಅದು ಕೊಂಚ ಅಪಾಯ ತಂದೊಡ್ಡಬಲ್ಲದು ಎನ್ನುತ್ತಾರೆ. ಇದು ಕೊಂಚ ಅಪಾಯಕಾರಿ ಆದ್ರೆ ಅಸಾಧ್ಯವಾದದ್ದಲ್ಲ ಎನ್ನುತ್ತದೆ ಹಾರ್ವರ್ಡ್ ಮೆಡಿಕಲ್ ಸ್ಕೂಲ್​ನ ಒಂದು ಅಧ್ಯಯನ.

publive-image

ಇದನ್ನೂ ಓದಿ:ಬಾ ಗುರು ಕಾಫಿ ಕುಡಿ.. ಪ್ರತಿ ದಿನ 3 ಕಪ್ coffee ಕುಡಿದ್ರೆ ನಿಮಗೆ ಬರೋಬ್ಬರಿ 5 ಲಾಭ; ತಪ್ಪದೇ ಈ ಸ್ಟೋರಿ ಓದಿ!

Advertisment

ಜಾಗಿಂಗ್ ಮಾಡುವುದರಿಂದ ನಮ್ಮ ದೇಹ ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಹಾಕುತ್ತದೆ. ಹೀಗಾಗಿ ಮೊಣಕಾಲು ನೋವು ಇದ್ದು ನೀವು ಸ್ಥೂಲಕಾಯದವರು (ದಪ್ಪ ದೇಹದವರು) ಆಗಿದ್ದರೆ, ಜಾಗಿಂಗ್ ಮಾಡುವುದು ಕೊಂಚ ಅಪಾಯವೇ ಸರಿ. ಯಾಕಂದ್ರೆ ಜಾಗ್ ಮಾಡುವಾಗ ನಿಮ್ಮ ದೇಹದ ಸಂಪೂರ್ಣ ಭಾರ ಮೊಣಕಾಲಿನ ಮೇಲೆ ಬೀಳುತ್ತದೆ, ಹೀಗಾಗಿ ಜಾಗಿಂಗ್ ಮಾಡುವುದು ಕೊಂಚ ಅಪಾಯಕಾರಿ.  ಈ ತರ ಸ್ಥೂಲಕಾಯ ಇರುವ ವ್ಯಕ್ತಿಗಳು ತುಂಬಾ ಜಾಗರೂಕರಾಗಿರಬೇಕು. ಯಾಕಂದ್ರೆ ಜಾಗಿಂಗ್ ವೇಳೆ ನಿಮ್ಮ ದೇಹದ ಭಾರ ನಾಲ್ಕೈದು ಪಟ್ಟು ಒತ್ತಡವನ್ನು ಮೊಣಕಾಲು ಹಾಗೂ ಅದರ ಕೀಲಿನ ಮೇಲೆ ಹಾಕುತ್ತದೆ ಎನ್ನುತ್ತಾರೆ ಡಾ ಅಖಿಲೇಶ್​.

ಇದನ್ನೂ ಓದಿ:ಖಿನ್ನತೆಗೂ ಅಲ್ಜಮೈರ್​ಗೂ ಇದೆಯಾ ನಂಟು? ಹೊಸ ಅಧ್ಯಯನ ತೆರೆದಿಟ್ಟಿದೆ ಭಯಾನಕ ಮಾಹಿತಿ!

ಅಶಕ್ತ ಮೊಣಕಾಲು ಹೊಂದಿದವರು ತುಂಬಾ ಎಚ್ಚರಿಕೆಯಿಂದ ಜಾಗಿಂಗ್ ಮಾಡಬೇಕು. ಯಾಕಂದ್ರೆ ಈ ರೀತಿ ಸಮಸ್ಯೆ ಇರುವವರ ಮೊಣಕಾಲು ಜಾಗಿಂಗ್ ಹಾಗೂ ರನ್ನಿಂಗ್​​ ಸಹಿಸಿಕೊಳ್ಳಲು ಬೇಕಾದಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಮುಂದೆ ದೀರ್ಘಕಾಲದ ಸ್ನಾಯು ಸೆಳೆದಂತಹ ಸಮಸ್ಯೆಗಳು ನಿಮಗೆ ಕಾಡಬಹುದು. ಹೀಗಾಗಿ ರನ್ನಿಂಗ್​ ಜಾಗಿಂಗ್​ ಮಾಡುವ ಬದಲು ಮೊದಲು ಮೊಣಕಾಲಿಗೆ ಶಕ್ತಿ ತುಂಬುವಂತಹ ವ್ಯಾಯಾಮಗಳನ್ನು ಮಾಡಬೇಕು. ಎಲುಬು ಕೀಲು ವೈದ್ಯರು ನೀಡುವ ಸಲಹೆಯನ್ನು ಪಡೆದು. ಅವರ ಸಲಹೆಯ ಪ್ರಕಾರ ಮೊದಲು ಮೊಣಕಾಲಿಗೆ ಶಕ್ತಿ ತುಂಬಿಕೊಂಡು ಬಳಿಕ ಜಾಗಿಂಗ್ ಹಾಗೂ ರನ್ನಿಂಗ್ ಮಾಡಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment