newsfirstkannada.com

ನೀವೂ ದಿನನಿತ್ಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಹಾಗಾದ್ರೇ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೀರಾ, ಎಚ್ಚರ!

Share :

Published May 9, 2024 at 9:00am

Update May 9, 2024 at 6:12am

  ಹೊಸ ಸಂಶೋಧನೆ ಮೂಲಕ ಬಂತು ಕಾರು ಚಾಲಕರಿಗೆ ಆಘಾತಕಾರಿ ಸುದ್ದಿ

  ಬಿಸಿಲಿನ ಶಾಖದಿಂದ ಕಾರಿನ ವಸ್ತುಗಳಿಂದ ರಾಸಾಯನಿಕ ಬಿಡುಗಡೆ ಆಗುತ್ತೆ

  ಇಂತಹ ಕ್ಯಾನ್ಸರ್​ ರೋಗದಿಂದ ಪ್ರಯಾಣಿಕರನ್ನು ಪಾರು ಮಾಡುವುದು ಹೇಗೆ?

ನಿಮ್ಮ ಮನೆಯಲ್ಲಿ ಕಾರ್​ ಇದ್ಯಾ? ಆ ಕಾರಿನಲ್ಲಿ ನೀವು ಪ್ರತಿನಿತ್ಯ ಪ್ರಯಾಣಿಸುತ್ತಿದ್ದೀರಾ? ಹಾಗಾದರೇ ನೀವು ಕೂಡ ಈ ಸ್ಟೋರಿ ಓದಲೇಬೇಕು. ಹೌದು, ಜನರು ತಮ್ಮ ಕಾರಿನಲ್ಲಿ ಇರುವಾಗ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ಉಸಿರಾಡುತ್ತಾರೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ: ಆನ್​ಲೈನ್​ಲ್ಲಿ ಆರ್ಡರ್​ ಮಾಡಿದ್ದು ವೆಜ್​​​.. ಆದರೆ ಬಂದಿದ್ದು ನಾನ್​ ವೆಜ್​; ಯುವತಿಗೆ ₹50 ಲಕ್ಷ ಪರಿಹಾರ?

ಇದೀಗ ಎಲ್ಲಿ ನೋಡಿದರೂ ಕಾರ್​ಗಳದ್ದೇ ಜಮಾನ. ಈಗ ಇನ್ನೊಂದು ಹೊಸ ಟ್ರೆಂಡ್​ ಶುರುವಾಗಿದೆ. ಅದುವೇ ಎಲೆಕ್ಟ್ರಿಕ್, ಸಿಎನ್​ಜಿ, ಹಾಗೂ ಹೈಬ್ರಿಡ್​ ಕಾರುಗಳ ಹವಾ. ಜನ ಈ ರೀತಿ ಕಾರುಗಳನ್ನು ಓಡಿಸೋವಾಗ ನಾವು ಪರಿಸರಕ್ಕೆ ಹಾನಿ ಮಾಡ್ತಿಲ್ಲ. ನಮ್ಮಿಂದ ಯಾವುದೇ ಮಾಲಿನ್ಯ ಉಂಟಾಗುತ್ತಿಲ್ಲ ಅಂತ ಅಂದುಕೊಂಡಿದ್ದಾರೆ. ಆದ್ರೆ ಈ ರೀತಿಯ ಕಾರುಗಳಿಂದ ಪರಿಸರ ಉಳಿಯುತ್ತೆ. ಆದ್ರೆ ಈ ರೀತಿಯ ಕಾರುಗಳಿಂದ ನಿಮಗೆ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳು ಬರಬಹುದು ಎಚ್ಚರ.

ಇದನ್ನೂ ಓದಿ: ‘ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ 3-4 ಆತ್ಮಹತ್ಯೆ’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ JDS ನಾಯಕ

ಇದನ್ನೂ, ನೀವು ನಂಬೋಲೆ ಕಷ್ಟವಾಗಿದ್ರೂ ಕೂಡ ಇದು ಸತ್ಯ ಅಂತ ಹೇಳ್ತಾ ಇದೆ ಒಂದು ಸಂಶೋಧನೆ. 2015 ಮತ್ತು 2022 ರ ನಡುವಿನ 101 ಎಲೆಕ್ಟ್ರಿಕ್, ಗ್ಯಾಸ್ ಮತ್ತು ಹೈಬ್ರಿಡ್ ಕಾರುಗಳ ಕ್ಯಾಬಿನ್ ಗಾಳಿಯನ್ನು ಈ ಸಂಶೋಧನೆ ಸ್ಟಡಿ ಮಾಡಿದೆ. ಇದರ ಪ್ರಕಾರ, 99% ಕಾರುಗಳು TCIPP ಎಂಬ ಜ್ವಾಲೆಯ ನಿವಾರಕವನ್ನು ಅಂದ್ರೆ FIRE RETARDERSಗಳನ್ನು ಒಳಗೊಂಡಿರುವುದನ್ನು ಅವರು ಕಂಡುಕೊಂಡಿದ್ದಾರೆ. TCIPP TDCIPP ಮತ್ತು TCEP, ಇವುಗಳನ್ನು ಕಾರ್ಸಿನೋಜೆನಿಕ್ ಅಂದ್ರೆ ಕ್ಯಾನ್ಸರ್​ಕಾರಕ ಎಂದು ಪರಿಗಣಿಸಲಾಗಿದೆ. ಜೊತೆಗೆ ಇವುಗಳೆಲ್ಲವೂ ಕೂಡ ಕ್ಯಾನ್ಸರ್​​ ಜೊತೆಗೆ ನರ ಸಂಬಂಧಿತ ಹಾಗೂ ಸಂತಾನೋತ್ಪತಿ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಅಂದಾಜಿಸಿದ್ದಾರೆ.

ಎಲೆಕ್ಟ್ರಿಕ್, ಸಿಎನ್​ಜಿ ಕಾರುಗಳಿಂದ ಕ್ಯಾನ್ಸರ್​​ ಬರುತ್ತಾ?

ಎಲೆಕ್ಟ್ರಿಕ್, ಗ್ಯಾಸ್ ಮತ್ತು ಹೈಬ್ರಿಡ್ ಕಾರುಗಳನ್ನು ತಯಾರು ಮಾಡುವಾಗ ಈ ರೀತಿಯ ರಾಸಾಯನಿಕಗಳನ್ನು ಕಾರಿನಲ್ಲಿ ಯಾವುದಾದ್ರು ಬೆಂಕಿ ಅವಘಡ ಸಂಭವಿಸಿದ್ರೆ, ಅದನ್ನು ನಂದಿಸೋದಕ್ಕೆ ಕಾರಿನ ಮುಂಭಾಗದಲ್ಲಿ ಇವುಗಳನ್ನು ತುಂಬಿಸಲಾಗಿರುತ್ತೆ. ಜೊತೆಗೆ ಬೇಸಿಗೆಯಲ್ಲಿ ಶಾಖವು ಕಾರಿನ ವಸ್ತುಗಳಿಂದ ರಾಸಾಯನಿಕಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆಂದು ಕೂಡ ಹೇಳಲಾಗಿದೆ. ಅದರಲ್ಲೂ ವಿಶೇಷವಾಗಿ ದೀರ್ಘ ಕಾಲ ಪ್ರಯಾಣಿಸುವ ಚಾಲಕರಿಗೆ ಮತ್ತು ಮಕ್ಕಳು ಜಾಸ್ತಿ ಉಸಿರಾಡುವುದರಿಂದ ಅವರಿಗೆ ಹೆಚ್ಚು ತೊಂದರೆ ಸಂಭವಿಸುತ್ತೆ ಎಂದು ಈ ಸಂಶೋಧನೆ ಹೇಳಿದೆ. ಹಾಗಿದ್ರೆ ಈ ತೊಂದರೆಯಿಂದ ಪ್ರಯಾಣಿಕರನ್ನು ಪಾರು ಮಾಡೋದಕ್ಕೆ ಕಾರು ಕಂಪನಿಗಳು ಯಾವ ರೀತಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು ಎಂದರೆ, ಫೈರ್ ರಿಟಾರ್ಡರ್ಸ್ ಪ್ರಮಾಣವನ್ನು ಕಾರುಗಳಲ್ಲಿ ತುಂಬಿಸುವುದನ್ನು ಕಡಿಮೆ ಮಾಡಿದರೇ ಒಂದು, ಅಗ್ನಿ ಅವಘಡದಿಂದ ಬಜಾವ್​ ಆಗಬಹುದು. ಮತ್ತೊಂದು, ಪ್ರಯಾಣಿಕರು ಹಾಗೂ ಚಾಲಕರು ಕೂಡ ಸೇಫ್​ ಆಗಿ ಇರಬಹುದು ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವೂ ದಿನನಿತ್ಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಹಾಗಾದ್ರೇ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೀರಾ, ಎಚ್ಚರ!

https://newsfirstlive.com/wp-content/uploads/2024/05/car_1.jpg

Load More