newsfirstkannada.com

ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು.. ಪ್ರಾಂಶುಪಾಲ, ಮುಖ್ಯ ಶಿಕ್ಷಕ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

Share :

Published May 12, 2024 at 1:04pm

Update May 12, 2024 at 2:17pm

  ಪಲ್ಟಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜು

  ಮದುವೆ ಆರತಕ್ಷತೆ ಕಾರ್ಯಕ್ರಮ ಮುಗಿಸಿ ಬರುವಾಗ ನಡೆದ ದುರ್ಘಟನೆ

  ಓರ್ವ ಕಾಲೇಜು ಪ್ರಾಂಶುಪಾಲ, ಓರ್ವ ಪ್ರೌಢ ಶಾಲೆಯ ಶಿಕ್ಷಕ ಸಾವು

ತುಮಕೂರು: ಚಲಿಸುತ್ತಿದ್ದ ಕಾರು‌ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್ ಬಳಿ ನಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರೂ ಶಿಕ್ಷಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಶಿಕ್ಷಕರ ಸ್ಥಿತಿ ಗಂಭೀರವಾಗಿದೆ.

ತುಮಕೂರಿನಿಂದ ಮದುವೆ ಆರತಕ್ಷತೆ ಕಾರ್ಯಕ್ರಮ ಮುಗಿಸಿ ಪಾವಗಡಕ್ಕೆ ವಾಪಸ್ಸು ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪಾವಗಡ ಸರ್ಕಾರಿ ಜೂನಿಯರ ಕಾಲೇಜಿನ ಪ್ರೌಢಶಾಲಾ ವಿಭಾಗ ಪ್ರಾಂಶುಪಾಲ ಓ. ಧನಂಜಯ(58). ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀ ಕೃಷ್ಣ(49) ಮೃತರಾಗಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಇಂದು ಮಳೆ ಬಂದ್ರೆ RCB ಭವಿಷ್ಯ?

ಶಿಕ್ಷಕರುಗಳಾದ ನರಸಿಂಹ ಮತ್ತು ವೆಂಕಟಾಚಲಪತಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು.. ಪ್ರಾಂಶುಪಾಲ, ಮುಖ್ಯ ಶಿಕ್ಷಕ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/05/Tumkur-accident-2.jpg

Load More