newsfirstkannada.com

IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

Share :

Published May 12, 2024 at 11:04am

Update May 12, 2024 at 11:05am

    ಹಾದಿ ಸುಗಮವಿಲ್ಲ.. ಸವಾಲುಗಳನ್ನು ದಾಟಬೇಕು ಈ ತಂಡಗಳು

    ಬೇರೆ ವಿಧಿಯಿಲ್ಲ.. ಇವಿಷ್ಟು ಪಂದ್ಯಗಳನ್ನು ಜಯಿಸಿದರೆ ಕನಸು ನನಸು

    ಆರ್​ಸಿಬಿ ಮುಂದಿರೋ ಸವಾಲುಗಳೇನು ಗೊತ್ತಾ? ಈ ಸ್ಟೋರಿ ಓದಿ

IPL 2024ರಲ್ಲಿ ಪ್ಲೇ ಆಫ್​ ಹಾದಿ ಹಿಡಿಯಲು ತಂಡಗಳು ಸರ್ಕಸ್​ ಮಾಡುತ್ತಿವೆ. ಅದರಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​, ಆರ್​ಸಿಬಿ ಮತ್ತು ಡೆಲ್ಲಿ ತಂಡ ಟ್ರೋಫಿ ಗೆಲ್ಲುವ ಕನಸು ಕಂಡಿದ್ದು, ಅದಕ್ಕಾಗಿ ಹೋರಾಡುತ್ತಿವೆ. ಆದರೆ ಅದಕ್ಕೂ ಮುನ್ನ ಪ್ಲೇ ಆಫ್​ ಕನಸು ನನಸಾಗಿಸಲು ಹೋರಾಡಬೇಕಿದೆ.

ಚೆನ್ನೈ ಸೂಪರ್​ ಕಿಂಗ್ಸ್​

ಹಾಲಿ ಚಾಂಪಿಯನ್ಸ್​ ಸಿಎಸ್​ಕೆ (+0.491) ಪಾಯಿಂಟ್​ನೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರುತುರಾಜ್​ ಗಾಯಕ್ವಾಡ್​ ನಾಯಕತ್ವದ ತಂಡ ತವರಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಲು ನಿರ್ಧರಿಸಿದ್ದಾರೆ. ಮೇ18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವಿರುದ್ಧದ ಲೀಗ್​​ನಲ್ಲಿ ಪಂದ್ಯ ಎದುರಿಸಲಿದ್ದಾರೆ.

ಸಿಎಸ್​ಕೆ ತನ್ನೆದುರಿನ ಎರಡು ಪಂದ್ಯ ಗೆದ್ದರೆ 16 ಅಂಕ ತಲುಪುವ ಸಾಧ್ಯತೆ ಇದೆ. ಆದರೆ ಡೆಲ್ಲಿ ಮತ್ತು ಲಕ್ನೋ ಭಾರೀ ಪೈಪೋಟಿ ನೀಡುವ ಕಾರಣ ಸಿಎಸ್​ಕೆ ಮುಂದೆ ದೊಡ್ಡ ಸವಾಲಿದೆ.

ಒಂದು ವೇಳೆ ಸಿಎಸ್​ಕೆ ಎರಡು ಪಂದ್ಯದಲ್ಲಿ ಸೋತರೆ 12 ಪಾಯಿಂಟ್​ನಲ್ಲಿ ಉಳಿಯುತ್ತಾರೆ. ಆ ಮೂಲಕ ಹೊರಗುಳಿಯುತ್ತಾರೆ. ಲಕ್ನೋ ಮತ್ತು ಡೆಲ್ಲಿ 14 ಅಂಕ ತಲುಪುತ್ತಾರೆ.

ಡೆಲ್ಲಿ ತಂಡದ ಕತೆ ಏನು?

ರಿಷಬ್​ ಪಂತ್​ ನಾಯಕತ್ವದ ಡೆಲ್ಲಿ ಪ್ರಸ್ತುತ 12ನೇ ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಆದರೆ ನೆಟ್​​ ರನ್​ ರೇಟ್​ನಲ್ಲಿ 0.316ನಲ್ಲಿದೆ. ಆದರೆ ಈ ವಿಚಾರದಲ್ಲಿ ಹೋಲಿಕೆ ಮಾಡಿದರೆ ಆರ್​ಸಿಬಿ ಮತ್ತು ಲಕ್ನೋ ತಂಡ ಮುಂದಿದೆ.

ಡೆಲ್ಲಿ ಎರಡು ಪಂದ್ಯವನ್ನು ಗೆದ್ದರೆ 16 ಅಂಕವನ್ನು ತಲುಪಬಹುದು. ಆದರೆ ನೇರ ಅರ್ಹತೆ ಪಡೆಯಬೇಕಾದರೆ ಸಿಎಸ್​ಕೆ ತಂಡ ಒಂದು ಪಂದ್ಯವನ್ನು ಸೋಲಬೇಕು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಫಾಫ್ ಡು ಪ್ಲೇಸಿಸ್​ ನಾಯಕತ್ವದ ಆರ್​ಸಿಬಿ ತಂಡ ಮುಂದಿನ ಎಲ್ಲಾ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ಕಾರಣ ಒಂದು ಪಂದ್ಯ ಸೋತರು ಆರ್​ಸಿಬಿ ರೇಸ್​ನಿಂದ ಹಿಂದೆ ಉಳಿಯಲಿದೆ. ಸದ್ಯ ಬೆಂಗಳೂರು ತಂಡ ಸಿಎಸ್​ಕೆ, ಎಸ್​​ಆರ್​ಹೆಚ್​, ಡೆಲ್ಲಿ ಕ್ಯಾಪಿಟಲ್​, ಲಕ್ನೋ ತಂಡವನ್ನು ಬೆನ್ನಟ್ಟಿ ಗೆಲುವು ತನ್ನದಾಗಿಸಿಕೊಳ್ಳಬೇಕು.

ಮತ್ತೊಂದೆಡೆ ನಿನ್ನೆ ಗುಜರಾತ್​ ತಂಡದ ವಿರುದ್ಧ ಸೋತ ಸಿಎಸ್​ಕೆ ತಂಡ ಕನಿಷ್ಟ ಒಂದು ಸೋಲನ್ನಾದರು ಅನುಭವಿಸಬೇಕು. ಬೆಂಗಳೂರು ತಂಡಕ್ಕೂ ಮೊದಲು ಸಿಎಸ್​ಕೆ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಸದ್ಯ ಸಿಎಸ್​ಕೆ ನೆಟ್​​ ರನ್​ ರೇಟ್​​ +0.491 ಇದ್ದು, ಆರ್​ಸಿಬಿ ರನ್​ ರೇಟ್​ +0.217 ಇದೆ.

ಅತ್ತ ಪ್ಲೇ ಆಫ್​ ರೇಸ್​ನಲ್ಲಿ ಲಕ್ನೋ ತಂಡವು ಇದೆ. 12 ಪಂದ್ಯಗಳಲ್ಲಿ 6 ಗೆಲುವು ತನ್ನದಾಗಿಸಿಕೊಂಡಿದೆ. ಹಾಗಾಗಿ 12 ಅಂಕಗಳನ್ನು ಈ ತಂಡ ಪಡೆದುಕೊಂಡಿದೆ. ಇನ್ನು 2 ಲೀಗ್​ ಪಂದ್ಯ ಬಾಕಿಯಿದ್ದು, ಒಂದು ಪಂದ್ಯದಲ್ಲಿ ಸೋತರು ಆರ್​ಸಿಬಿ ದಾರಿ ಕೊಂಚ ಸುಲಭವಾಗಲಿದೆ. ಒಂದು ವೇಳೆ ಲಕ್ನೋ ಮುಂದಿನ 2 ಪಂದ್ಯ ಗೆದ್ದರೆ ಆರ್​ಸಿಬಿ ಪ್ರಯಾಣ ಸುಖಾಂತ್ಯ ಕಾಣಲಿದೆ.

ಇದನ್ನೂ ಓದಿ:ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಡೆಲ್ಲಿ ಕ್ಯಾಪಿಟಲ್​ ತಂಡ 12 ಪಂದ್ಯಗಳಲ್ಲಿ 6 ಗೆಲುವು ಪಡೆದು 4ನೇ ಅಗ್ರಸ್ಥಾನದಲ್ಲಿದೆ. ಈ ತಂಡ ಕೂಡ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಳ್ಳಬೇಕಿದೆ. ಡೆಲ್ಲಿ ತಂಡ ಲಕ್ನೋ ಮತ್ತು  ಆರ್​ಸಿಬಿ ವಿರುದ್ಧ ಆಡಲಿದ್ದು, ಈ ಸಮಯದಲ್ಲಿ ಲಕ್ನೋವನ್ನು ಸೋಲಿಸಿದರೆ ಆರ್​ಸಿಬಿಗೆ ಲಾಭವಾಗಿಲಿದೆ.

ಆರ್​ಸಿಬಿ ಮನಸ್ಸು ಮಾಡಿದರೆ ಹೈದರಾಬಾದ್​ ತಂಡವನ್ನು 4 ಅಥವಾ 5ನೇ ಸ್ಥಾನದಲ್ಲೇ ಉಳಿಸುವಂತೆ ಮಾಡಬಹುದು. ಆದರೆ ಕಾವ್ಯ ಮಾರನ್ ಮಾಲಿಕತ್ವದ ತಂಡ ಎಲ್ಲಾ ಉಳಿದ ಎಲ್ಲಾ ಪಂದ್ಯ ಸೋತರೆ ಆರ್​ಸಿಬಿಗೆ ಇದರಿಂದ ಲಾಭವಿದೆ. ಸದ್ಯ ಹೈದರಾಬಾದ್​ ಬಲಶಾಲಿಯಾಗಿರುವ ತಂಡವಾಗಿದ್ದು, ಸಮಯ, ಸಂದರ್ಭಗಳೇ ಇವೆಲ್ಲವನ್ನು ನಿರ್ಣಯಿಸಬೇಕಿದೆ.

ಇದನ್ನೂ ಓದಿ: KKR ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ.. ಕಣ್ಣೀರು ಹಾಕುತ್ತಾ ಅಭಿಮಾನಿ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ?

ಆರ್​ಸಿಬಿ ಪ್ಲೇ ಆಫ್​ಗೆ ಬರಲು ಕಠಿಣ ಸವಾಲುಗಳು ಮುಂದಿವೆ. ಇವೆಲ್ಲವನ್ನು ದಾಟಿ ಮುಂದೆ ಬರಲು ಫ್ಯಾನ್ಸ್​ ಕಾದು ಕುಳಿತ್ತಿದ್ದಾರೆ. ಆದರೆ ಆಟಗಾರರ ಕ್ಷಮತೆಯ ಮೇಲೆ ಪಂದ್ಯದ ಸೋಲು, ಗೆಲುವು ನಿರ್ಣಯವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

https://newsfirstlive.com/wp-content/uploads/2024/05/Play-off.jpg

Load More