newsfirstkannada.com

ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

Share :

Published May 12, 2024 at 10:06am

  ಮಾಡು ಇಲ್ಲವೇ ಮಡಿ ಪಂದ್ಯ, ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ!

  4ನ್ನು ಗೆದ್ದಿರುವ RCBಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್

  ರಾಜಸ್ಥಾನ ರಾಯಲ್ಸ್​ ಗೆಲುವಿಗಾಗಿ RCB ಹಾಗೂ ಫ್ಯಾನ್ಸ್ ಪ್ರಾರ್ಥನೆ

ಐಪಿಎಲ್​ನ ಮೋಸ್ಟ್​ ಎಕ್ಸೈಟ್ಮೆಂಟ್ ಪಂದ್ಯಗಳಿ​​ಗೆ ಇಂದಿನ ಸೂಪರ್ ಸಂಡೇ ಸಾಕ್ಷಿಯಾಗ್ತಿದೆ. 2 ಪಂದ್ಯಗಳು ನಡೆಯುತ್ತಿದ್ದು, ನಾಲ್ಕು ತಂಡಗಳ ಹೋರಾಡ್ತಿವೆ. ಆದ್ರೆ, ಇಂದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಿರ್ಧಾರವಾಗ್ತಿರೋದು ಮಾತ್ರ ಆರ್​​ಸಿಬಿಯ ಭವಿಷ್ಯ. ಎರಡು ತಂಡಗಳ ಪಾಲಿಗೆ ಇಂದು ಆರ್​​ಸಿಬಿ ಎದುರಾಳಿಯಾಗಿದೆ.

ಇಂದು ಚೆನ್ನೈ, ಡೆಲ್ಲಿ V/S ಆರ್​ಸಿಬಿ ದಂಗಲ್​..!

ಐಪಿಎಲ್​ನ ಸೂಪರ್ ಸಂಡೇಯ ಸೂಪರ್​​​ ಫೈಟ್​ಗೆ ಕ್ಷಣಗಣನೆ ಶುರುವಾಗಿದೆ. 4 ತಂಡಗಳ ನಡುವಿನ ಬಿಗ್ ಬ್ಯಾಟಲ್.. ಫ್ಯಾನ್ಸ್​ ಕ್ಯುರಿಯಾಸಿಟಿ ಹೆಚ್ಚಿಸಿದೆ. ನಾನಾ.. ನೀನಾ ಎಂದು ಹೋರಾಟಕ್ಕೆ ಇಳಿಯುತ್ತಿರುವ 4 ತಂಡಗಳ ಪೈಕಿ 3 ತಂಡಗಳಿಗೆ ಈ ದಿನ ಮೋಸ್ಟ್ ಕ್ರೂಶಿಯಲ್.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ಗೆ ರಾಜಸ್ಥಾನ ರಾಯಲ್ಸ್ ಸವಾಲ್ ಎದುರಾಗುತ್ತಿದೆ. ಉಭಯ ತಂಡಗಳ ಹೋರಾಟಕ್ಕೆ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ಈ ಪಂದ್ಯದಲ್ಲಿ ಚೆನ್ನೈನ ಪ್ರತ್ಯಕ್ಷ ಎದುರಾಳಿ ರಾಜಸ್ಥಾನ​ ಆಗಿದ್ರೂ, ಪರೋಕ್ಷ ಎದುರಾಳಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿದೆ. ಯಾಕಂದ್ರೆ, ಈ ಪಂದ್ಯದ ಫಲಿತಾಂಶ ಆರ್​ಸಿಬಿ ಭವಿಷ್ಯವನ್ನ ನಿರ್ಧರಿಸಲಿದೆ.

ಚೆನ್ನೈ ಕಿಂಗ್ಸ್​ ಗೆದ್ದರೆ ನುಚ್ಚು ನೂರಾಗಲಿದೆ RCB ಕನಸು

ಕಳೆದ ಪಂದ್ಯದಲ್ಲಿ ಗುಜರಾತ್​ ಎದುರು ಸೋತ ಚೆನ್ನೈ, ತವರಿನಲ್ಲಿ ಗೆಲ್ಲೋ ರಣೋತ್ಸಾಹದಲ್ಲಿದೆ. ಆದ್ರೆ, ಬ್ಯಾಕ್ ಟು ಬ್ಯಾಕ್ ಸೋತಿರೋ ರಾಜಸ್ಥಾನ, ಚೆನ್ನೈಗೆ ಚೆನ್ನೈನಲ್ಲೇ ಚಮಕ್ ನೀಡೋ ಲೆಕ್ಕಾಚಾರದಲ್ಲಿದೆ. ಇದರೊಂದಿಗೆ ಪ್ಲೇ-ಆಫ್​​ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಮುಂದಾಗಿವೆ. ಈ ಪಂದ್ಯದಲ್ಲಿ ಚೆನ್ನೈ ಸೋತ್ರೆ ಆರ್​​ಸಿಬಿಗೆ ಪ್ಲಸ್​ ಪಾಯಿಂಟ್​ ಆಗಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್​ ಗೆಲುವಿಗಾಗಿ ಆರ್​​ಸಿಬಿ ಫ್ಯಾನ್ಸ್​ ಇನ್ನಿಲ್ಲದ ಪ್ರಾರ್ಥನೆ ಮಾಡ್ತಿದ್ದಾರೆ.

ಚೆನ್ನೈ ಸೋಲಿನ ಜೊತೆ ತವರಿನಲ್ಲಿ ಗೆಲ್ಲೋ ಚಾಲೆಂಜ್.!

ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಾರ್ಥನೆ ಮಾಡ್ತಿರುವ ಆರ್​ಸಿಬಿ, ನಂತರದ ಪಂದ್ಯದಲ್ಲಿ ರಿಯಲ್ ಚಾಲೆಂಜ್​ ಎದುರಿಸಲಿದೆ. ತವರಿನ ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎದುರು ತೊಡೆ ತಟ್ಟಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇಬೇಕಿದೆ. ಈಗ ಸತತ 4 ಪಂದ್ಯಗಳನ್ನ ಗೆದ್ದಿರುವ ರೆಡ್ ಆರ್ಮಿಗೆ 5ನೇ ಪಂದ್ಯ ಗೆಲ್ಲೋದು ನಿಜಕ್ಕೂ ಬಿಗ್ ಟಾಸ್ಕ್.. ಯಾಕಂದ್ರೆ, ಈ ಪಂದ್ಯ ಡೆಲ್ಲಿ ಪಾಲಿಗೂ ಡು ಆರ್​​ ಡೈ ಕದನವಾಗಿದೆ.

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ಬ್ಯಾಟ್ಸ್​ಮನ್​ಗಳಾಗ್ತಾರಾ ಗೆಲುವಿನ ರೂವಾರಿಗಳು..?

ಇವತ್ತು ಆರ್​ಸಿಬಿಯ ಗೆಲುವಿನ ಕನಸು ನಿಂತಿರೋದೆ ತಂಡದ ಬ್ಯಾಟರ್​ಗಳ ಮೇಲಾಗಿದೆ. ಚಿನ್ನಸ್ವಾಮಿಯ ಬ್ಯಾಟಿಂಗ್​ ಫ್ರೆಂಡ್ಲಿ ಗ್ರೌಂಡ್​ನಲ್ಲಿ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್​ ವೈಲೆಂಟ್ ಆಗಬೇಕಿದೆ. ಮಿಡಲ್​ ಆರ್ಡರ್​ನಲ್ಲಿ ರಜತ್​ ಪಾಟಿದಾರ್​ ರಾಕ್ಷಸನಂತೆ ಸಿಡಿಯಬೇಕು. ಕ್ಯಾಮರೂನ್ ಗ್ರೀನ್ ಕಮಾಲ್ ಮಾಡಬೇಕು. ದಿನೇಶ್ ಕಾರ್ತಿಕ್ ದಂಡಯಾತ್ರೆ ನಡೆಸಬೇಕು. ಹೀಗಾದರಷ್ಟೇ ಡೇಂಜರಸ್ ಡೆಲ್ಲಿಗೆ ಟಕ್ಕರ್ ನೀಡಬಹುದಾಗಿದೆ. ಇಲ್ಲ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

ಮಳೆಯಾದರೆ ಆರ್​ಸಿಬಿ ಕಥೆ ಗೋವಿಂದ..!

ಒಂದ್ಕಡೆ ಗೆಲುವಿನ ಪ್ರಾರ್ಥನೆ ನಡೆಸ್ತಿರುವ ಆರ್​ಸಿಬಿಗೆ ಮಳೆರಾಯನೂ ಕಂಟಕವಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಮಳೆರಾಯನ ಆರ್ಭಟ ಸಿಲಿಕಾನ್​​ ಸಿಟಿಯಲ್ಲಿ ಜೋರಾಗಿದೆ. ಇಂದೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಅಕಸ್ಮಾತ್ ಇಂದು ಮಳೆರಾಯ ಅವಕೃಪೆ ತೋರಿ ಪಂದ್ಯ ರದ್ದಾದ್ರೆ, ಆರ್​ಸಿಬಿಯ ಪ್ಲೇ-ಆಫ್ ಕನಸು ನುಚ್ಚು ನೂರಾಗಲಿದೆ. ಇಂದಿನ ಸೂಪರ್ ಸಂಡೇ, ಬ್ಲಾಕ್​ ಬಸ್ಟರ್​​​ ಕದನಗಳಿಗೆ ಸಾಕ್ಷಿಯಾಗಲಿದೆ. ಪ್ಲೇ ಆಫ್​ ದೃಷ್ಟಿಯಿಂದ ಇಂದಿನ ರಣಕಣ ಮಹತ್ವ ಪಡೆದಿದ್ದು, ಅಭಿಮಾನಿಗಳಿಗಂತೂ ಭರ್ಜರಿ ಟ್ರೀಟ್​ ಕಾದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

https://newsfirstlive.com/wp-content/uploads/2024/05/VIRAT_SANJU.jpg

Load More