newsfirstkannada.com

ದುನಿಯಾ ವಿಜಯ್​ಗೆ ನೋಟಿಸ್​ ಕೊಡಲು ಸಿಸಿಬಿ ಪೊಲೀಸರ ಸಿದ್ಧತೆ.. ಅಷ್ಟಕ್ಕೂ ಅವರೇನು ಮಾಡಿದ್ರು?

Share :

Published August 24, 2024 at 11:23am

    ದುನಿಯಾ ವಿಜಯ್​ಗೆ ಎದುರಾಯ್ತಾ ಸಂಕಷ್ಟ?

    ಸಿಸಿಬಿ ನೋಟಿಸ್​ ಕೊಡಲು ಮುಂದಾಗಿರೋದೇಕೆ?

    ನಟನನ್ನ ಕರೆಸಲು ಹೇಳಿದ ಸಿಸಿಬಿ ಜಂಟಿ ಆಯುಕ್ತರು

ಬೆಂಗಳೂರು: ‘ಭೀಮ’ ನಟ ದುನಿಯಾ ವಿಜಯ್​ಗೆ ಸಿಸಿಬಿ ಪೊಲೀಸರು ನೋಟಿಸ್ ಕೊಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಚಾಮರಾಜ ಪೇಟೆ ಸಿಸಿಬಿ ಕಚೇರಿಯ ಕೂಗಳತೆ ದೂರದಲ್ಲಿಯೇ ಮಾದಕವಸ್ತು ಸೇವನೆ ಮಾಡುತ್ತಿದ್ದಾರೆ ಎಂದು ದುನಿಯಾ ವಿಜಯ್​ ಹೇಳಿದ್ದರು. ಇದೀಗ ನಟನ ಹೇಳಿಕೆಯ ವಿಚಾರವಾಗಿ ಸಿಸಿಬಿ ನೋಟಿಸ್​ ಕೊಡಲು ಮುಂದಾಗಿದ್ದಾರೆ.

ಭೀಮ ಸಿನಿಮಾದ ರಿಲೀಸ್​ ಬಳಿಕ ನಟ ದುನಿಯಾ ವಿಜಯ್​ ಚಾಮರಾಜಪೇಟೆ ಬಳಿ ಸ್ಥಳವೊಂದರ ಮೇಲೆ ದಾಳಿ ಮಾಡಿದ್ದರು. ಮಾದಕವಸ್ತು ಸೇವನೆಗೆ ಬಳಸುವ ಸಿರೀಂಜ್ ಸೇರಿ ಕೆಲ ವಸ್ತುಗಳನ್ನ ನಟ ಪತ್ತೆ ಮಾಡಿದ್ದರು.

ಇದನ್ನೂ ಓದಿ: ಮಿಡ್​ನೈಟ್​​ ನಟಿಯ ಮೇಲೆ ಹಲ್ಲೆಗೆ ಯತ್ನ.. ಬೈಕಿನಲ್ಲಿ ಬಂದು ಕಾರಿನ ಗಾಜು ಪುಡಿ ಮಾಡಿದ ದುಷ್ಕರ್ಮಿಗಳ

ಇವಿಷ್ಟು ಅಲ್ಲದೆ, ನಗರದ ಕೆಲ ಮೆಡಿಕಲ್ ಶಾಪ್​​ಗಳಲ್ಲಿ ಟೈಡಾಲ್ ಮಾತ್ರೆಯನ್ನ ಮಾದಕ ವ್ಯಸನಿಗಳಿಗೆ ಮಾರಾಟ ಮಾಡ್ತಿದ್ದಾರೆಂದು ಫೇಸ್​ಬುಕ್ ಲೈವ್​ನಲ್ಲಿ ದುನಿಯಾ ವಿಜಯ್ ತಿಳಿಸಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದಿದ್ದರು.

ಇದನ್ನೂ ಓದಿ: DASARA 2024: ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ನಂಬರ್ ಒನ್! ಆನೆಗಳ ತೂಕ ಮತ್ತು ಆರೋಗ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತರವರು, ನಟ ದುನಿಯಾ ವಿಜಯ್​​ ಅವರನ್ನ ಕರೆಸಿ ಅವರ ಬಳಿ ಇರೋ ಮಾಹಿತಿ ಕಲೆಹಾಕಬೇಕು. ಮಾದಕವಸ್ತು ಅಡ್ಡೆಗಳ ಮೇಲೆ ದಾಳಿ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ವಕೀಲ‌ ನಾರಾಯಣಸ್ವಾಮಿಯವರು ನಗರ ಪೊಲೀಸ್ ಆಯುಕ್ತ ದಯಾನಂದ್ ರಿಗೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುನಿಯಾ ವಿಜಯ್​ಗೆ ನೋಟಿಸ್​ ಕೊಡಲು ಸಿಸಿಬಿ ಪೊಲೀಸರ ಸಿದ್ಧತೆ.. ಅಷ್ಟಕ್ಕೂ ಅವರೇನು ಮಾಡಿದ್ರು?

https://newsfirstlive.com/wp-content/uploads/2024/01/DUNIYA_VIJAY-2.jpg

Load More