newsfirstkannada.com

ಬೇರೆ, ಬೇರೆ ಆದ ಮೇಲೂ ಮತ್ತೆ ಮುಖಾಮುಖಿ ಆಗ್ತಿದ್ದಾರೆ ಚಂದನ್, ನಿವೇದಿತಾ; ಯಾಕೆ ಗೊತ್ತಾ?

Share :

Published June 9, 2024 at 4:47pm

Update June 9, 2024 at 4:48pm

  ಇವರಿಬ್ಬರ ಡಿವೋರ್ಸ್​ನಿಂದ ಮುಂದಿನ ಸಿನಿಮಾಗೆ ತೊಂದರೆ ಆಗಬಹುದಾ?

  ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡಿದ್ದೇಕೆ ಜೋಡಿ

  ಈ ಕ್ಯೂಟ್​ ಜೋಡಿ ಮಧ್ಯೆ ದಿಢೀರ್ ಏನಾಯ್ತು ಅಂತ ಗೊಂದಲ ಸೃಷ್ಟಿ

ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ನಾಡಿನ ಜನತೆಗೆ ಶಾಕ್ ಕೊಟ್ಟಿತ್ತು. ಅನ್ನೋನ್ಯವಾಗಿ ಕಾಣಿಸಿಕೊಂಡ ಈ ಕ್ಯೂಟ್​ ಜೋಡಿ ಮಧ್ಯೆ ದಿಢೀರ್ ಅಂತ ಏನಾಯ್ತು ಅನ್ನೋ ಗೊಂದಲ ಎಲ್ಲೆಡೆ ಕಾಡಿತ್ತು.‌ ಆದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಮುರಿದು ಬಿದ್ದಿದೆ. ಮೊನ್ನೆಯಷ್ಟೇ ಫ್ಯಾಮಿಲಿ ಕೋರ್ಟಿನಿಂದ ಡಿವೋರ್ಸ್ ಮಂಜೂರಾಗಿದ್ದು, ಕೆರಿಯರ್ ರೂಪಿಸಿಕೊಳ್ಳುವ ಉದ್ದೇಶದಿಂದ ದೂರ ಆಗ್ತಿದ್ದೇವೆ ಎಂಬ ಕಾರಣ ಕೊಟ್ಟಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

ಗಾಯಕ ಚಂದನ್​ ಶೆಟ್ಟಿ ಹಾಗೂ ಬಿಗ್​ ಬಾಸ್​ ಸ್ಪರ್ಧಿ ನಿವೇದಿತಾ ಗೌಡ ಅವರು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಪರಿಚಯಗೊಂಡು, ನಂತರ ಆ ಪರಿಚಯ ಪ್ರೀತಿಗೆ ತಿರುಗಿ, ಕೊನೆಗೆ ಇಬ್ಬರೂ ಮದುವೆ ಆದರು. ನಿವೇದಿತಾ ಅವರಿಗೆ ದಸರಾ ವೇದಿಕೆ ಮೇಲೆ ಚಂದನ್​ ಪ್ರಪೋಸ್​ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೊಂದು ಅದ್ಭುತ ಕ್ಷಣವಾಗಬೇಕಿತ್ತಾದರೂ, ಕಾಂಟ್ರವರ್ಸಿಯಿಂದಾಗಿ ನಿವೇದಿತಾ ನೊಂದುಕೊಂಡರು. 2020ರಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ಮದುವೆಯನ್ನು ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಮಾಡಿದ್ದರು. ಈ ತಾರಾ ಜೋಡಿ ರಾಜ-ರಾಣಿ ಸೇರಿದಂತೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೆನ್ಸೇಷನ್​​ ಕ್ರಿಯೇಟ್ ಮಾಡಿದ್ದರು.

ಇದನ್ನೂ ಓದಿ: ಬಿಯರ್​ ಖರೀದಿಸುವಾಗ ಬಾರ್​ನಲ್ಲೇ ತಗ್ಲಾಕೊಂಡ ಮಗ.. ಬೆಪ್ಪಾದ ಅಪ್ಪ ಮಾಡಿದ್ದೇನು ಗೊತ್ತಾ?

ಆದರೆ, ನಿವೇದಿತಾ ಮತ್ತು ಚಂದನ್ ಡಿವೋರ್ಸ್ ಕೊಟ್ಟ ಬಳಿಕ ಮತ್ತೆ ಒಬ್ಬರಿಗೊಬ್ಬರು ಭೇಟಿ ಆಗೋದಿಲ್ವ? ಮತ್ತೆ ಇವರು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದಿಲ್ವಾ ಅಂತೆಲ್ಲಾ ಅನುಮಾನಿಗಳಲ್ಲಿ ಹೀಗೊಂದು ಅನುಮಾನ ಮೂಡಿದೆ. ಹೌದು, ನಿವೇದಿತಾ ಮತ್ತು ಚಂದನ್ ಡಿವೋರ್ಸ್ ಬಳಿಕ ಮತ್ತೆ ಮುಖಾಮುಖಿಯಾಗಲಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಏನೆಂದರೆ  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇವರಿಬ್ಬರು ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಪುನೀತ್ ಶ್ರೀನಿವಾಸ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

ಚಂದನ್ ಮತ್ತು ನಿವೇದಿತಾ ಒಟ್ಟಿಗೆ ನಟಿಸುತ್ತಿರುವ ಈ ಹೊಸ ಸಿನಿಮಾಗೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ವಿಚ್ಛೇದನ ತೆಗೆದುಕೊಂಡ ಬಳಿಕವೂ ನಿವೇದಿತಾ ಮತ್ತು ಚಂದನ್ ಶೆಟ್ಟಿ ಶೂಟಿಂಗ್‌ ಸೆಟ್​ನಲ್ಲಿ ಭೇಟಿಯಾಗಲಿದ್ದಾರೆ. ಈ ಬಗ್ಗೆ ಖುದ್ದು ನಿರ್ದೇಶಕ ಪುನೀತ್ ಅವರು ಹೇಳಿಕೊಂಡಿದ್ದಾರೆ. ಇದೇ ಜೂನ್ 14ರಿಂದ ಮುಂದಿನ ಶೆಡ್ಯೂಲ್ ಚಿತ್ರೀಕರಣ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಒಟ್ಟು 8 ದಿನಗಳ ಶೂಟಿಂಗ್ ಬ್ಯಾಲೆನ್ಸ್ ಇದ್ದು, ಅದನ್ನು ಮುಗಿಸಿಕೊಡುವುದಕ್ಕೆ ನಿವೇದಿತಾ ಮತ್ತು ಚಂದು ಸಿದ್ಧರಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇರೆ, ಬೇರೆ ಆದ ಮೇಲೂ ಮತ್ತೆ ಮುಖಾಮುಖಿ ಆಗ್ತಿದ್ದಾರೆ ಚಂದನ್, ನಿವೇದಿತಾ; ಯಾಕೆ ಗೊತ್ತಾ?

https://newsfirstlive.com/wp-content/uploads/2024/06/nivi-and-chandu1.jpg

Load More