newsfirstkannada.com

ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಇಸ್ರೋ ಸಜ್ಜು; ಏನೆಲ್ಲಾ ಸಿದ್ಧತೆ ನಡೆದಿದೆ?

Share :

Published August 21, 2024 at 6:08am

    ಶಶಿಯ ಅಂಗಳದಲ್ಲಿ ಮತ್ತೊಂದು ಇತಿಹಾಸ ಬರೆಯಲು ಇಸ್ರೋ ಸಜ್ಜು

    ಸದ್ಯದಲ್ಲೇ ಚಂದ್ರನತ್ತ ನೆಗೆಯಲಿದೆ ಭಾರತದ ಇನ್ನೊಂದು ಉಪಗ್ರಹ..!

    ಚಂದ್ರಯಾನ 4, 70 ಉಪಗ್ರಹ ಉಡಾವಣೆ, 5 ವರ್ಷದಲ್ಲಿ ಸಹಸ್ರ ಯೋಜನೆ

ನವದೆಹಲಿ: ಚಂದ್ರಯಾನ 3ರ ಬಳಿಕ ಇಸ್ರೋ ಈಗ ಗಗನಯಾನದ ಸಿದ್ಧತೆಯಲ್ಲಿದೆ. ಇಸ್ರೋ ಬತ್ತಳಿಕೆಯಲ್ಲಿ ಬರೀ ಗಗನಯಾನವೊಂದೆ ಇಲ್ಲ, ಮತ್ತೆ ಚಂದ್ರನ ಅಂಗಳಕ್ಕೆ ಕಾಲಿಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಭಾರಿ ಸಿದ್ಧತೆಯಲ್ಲಿದೆ. ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಚಂದ್ರಯಾನದ ಮುಂದಿನ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಚಂದ್ರಯಾನ-4 ಮತ್ತು ಚಂದ್ರಯಾನ-5 ಯೋಜನೆಯನ್ನು ಕೈಗೆ ತೆಗೆದುಕೊಳ್ಳಲಿದ್ದೇವೆ. ಈಗಾಗಲೇ ಡಿಸೈನ್ ರೆಡಿಯಾಗಿದ್ದು. ಕೆಲವೇ ದಿನಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 3 ಅಡಿ ಉದ್ದದ ಹಾವನ್ನೇ ಕಚ್ಚಿ ಬಿಸಾಕಿದ 1 ವರ್ಷದ ಪೋರ.. ಬಾಲಕನಿಗೆ ಆಮೇಲೆ ಏನಾಯ್ತು?

ಚಂದ್ರಯಾನ 4 ನಲ್ಲಿ ಹಲವು ಗುರಿಗಳನ್ನು ಇಟ್ಟುಕೊಳ್ಳಲಾಗಿದೆ. ಹೊಸ ಯೋಜನೆಯಲ್ಲಿ ಚಂದ್ರನ ಅಂಗಳದಲ್ಲಿ ಸಾಫ್ಟ್​ ಲ್ಯಾಂಡ್ ಮಾಡಲಿರುವ ರೋವರ್​ ಚಂದ್ರನ ಅಂಗಳದಿಂದ ಕಲ್ಲು ಮತ್ತು ಮಣ್ಣುಗಳನ್ನು ಸಂಗ್ರಹ ಮಾಡಿ ಭೂಮಿಗೆ ತರಲಿದೆ ಎಂದು ಸೋಮನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಇದೆಂಥಾ ಯಡವಟ್ಟು.. ರೊಚ್ಚಿಗೆದ್ದ ಗ್ರಾಹಕರಿಂದ ಬುದ್ಧಿ ಕಲಿತ ಝೊಮ್ಯಾಟೊ ಕಂಪನಿ; ಅಸಲಿಗೆ ಆಗಿದ್ದೇನು?
ಬರೀ ಇಷ್ಟು ಮಾತ್ರವಲ್ಲ, ನಾವು ಬರುವ ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ತರಬೇಕಾದ ಸರಣಿ ಯೋಜನೆಗಳನ್ನು ಹೊಂದಿದ್ದೇವೆ ಎಂದು ಸೋಮನಾಥ್ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟು 70 ಸ್ಯಾಟ್​ಲೈಟ್​ಗಳನ್ನ ನಭಕ್ಕೆ ಚಿಮ್ಮಿಸುವ ಉದ್ದೇಶವನ್ನು ಹೊಂದಿದ್ದೇವೆ ಅದರಲ್ಲಿ ನಾಲ್ಕು NAVIC ಉಪಗ್ರಹಗಳಿರಲಿವೆ. ಅವು ನೆವಿಗೇಷನ್ ಸಿಸ್ಟಮ್​ಗೆ ತುಂಬಾ ಅನುಕೂಲಕರ ಸಮಯ ಮತ್ತು ಸೇವೆಗಳ ಬಗ್ಗೆ ನೌಕಾದಳಕ್ಕೆ ಉಪಯುಕ್ತವಾಗಲಿವೆ. ಇದಾದ ಬಳಿಕ INSAT-4D ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಹವಾಮಾನ ವರದಿಯನ್ನು ನಿಖರವಾಗಿ ತಿಳಿಸಲು ಸಹಕಾರಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಹೇಳಿದ್ದಾರೆ.

ಓಸಿಯನ್​ಸ್ಯಾಟ್​ ಸೆಟ್​ಲೈಟ್ ಉಡಾವಣೆಗೂ ಕೂಡ ಇಸ್ರೋ ಯೋಜನೆಯನ್ನು ಹಾಕಿಕೊಂಡಿದೆ. ಚಂದ್ರಯಾನ-4ಗೆ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ. 2028ರಲ್ಲಿ ಚಂದ್ರಯಾನ -4 ಉಪಗ್ರಹದ ಉಡವಾಣೆ ಆಗುವುದು ಎಂದಿದ್ದಾರೆ. ಬರುವ ದಿನಗಳಲ್ಲಿ ಒಟ್ಟು 70 ಉಪಗ್ರಹಗಳು, ಗಗನಯಾನ ಹಾಗೂ ಚಂದ್ರಯಾನ-4 ಮತ್ತು 5 ರೀತಿಯ ಬೃಹತ್ ಯೋಜನೆಗಳನ್ನು ಇಸ್ರೋ ಹಾಕಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಇಸ್ರೋ ಸಜ್ಜು; ಏನೆಲ್ಲಾ ಸಿದ್ಧತೆ ನಡೆದಿದೆ?

https://newsfirstlive.com/wp-content/uploads/2024/08/CHANDRAYANA-4-and-5.jpg

Load More