/newsfirstlive-kannada/media/post_attachments/wp-content/uploads/2024/10/KOHLI-DHONI-ROHIT.jpg)
ಮೆಗಾ ಆಕ್ಷನ್ಗೂ ಮುನ್ನ ಐಪಿಎಲ್ನ ಫೀವರ್ ಜೋರಾಗಿದೆ. ರಿಟೈನ್-ರಿಲೀಸ್ನ ಲೆಕ್ಕಾಚಾರ ಫ್ರಾಂಚೈಸಿಗಳ ವಲಯದಲ್ಲಿ ಜೋರಾದಂತೆ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗ್ತಿದೆ. ಇದ್ರ ನಡುವೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ನ ರಾಯಲ್ ಚಾಲೆಂಜರ್ಸ್ ಮೀರಿಸಿದೆ. ಕಪ್ ಗೆಲ್ಲದಿದ್ರೆ ಏನಂತೆ ಪಾಪ್ಯುಲಾರಿಟಿ ವಿಚಾರ ಬಂದ್ರೆ ಆರ್ಸಿಬಿ ಕಿಂಗ್ ಅನ್ನೋದು ಮತ್ತೆ ಪ್ರೂವ್ ಆಗಿದೆ.
ಐಪಿಎಲ್ ಮೆಗಾ ಹರಾಜಿಗೆ ಕೌಂಟ್ಡೌನ್ ಶುರುವಾಗಿದೆ. ಫ್ರಾಂಚೈಸಿಗಳೆಲ್ಲಾ ರಿಟೈನ್-ರಿಲೀಸ್ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿವೆ. ಐಪಿಎಲ್ ಆರಂಭಕ್ಕೆ ಇನ್ನೂ 6 ತಿಂಗಳು ಬಾಕಿಯಿದೆ. ಆದ್ರೂ ಅಭಿಮಾನಿಗಳ ವಲಯದಲ್ಲಿ ಮಿಲಿಯನ್ ಡಾಲರ್ ಟೂರ್ನಿಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.
ಫ್ರಾಂಚೈಸಿಗಳ ಫ್ಯಾನ್ಸ್ ನಡುವೆ ವಾರ್ ಶುರು
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್-ರಿಲೀಸ್ನ ಲೆಕ್ಕಾಚಾರ ಫ್ರಾಂಚೈಸಿಗಳ ವಲಯದಲ್ಲಿ ಮಾತ್ರವಲ್ಲ. ಫ್ಯಾನ್ಸ್ ವಲಯದಲ್ಲೂ ಜೋರಾಗಿ ನಡೀತಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಅದೇ ಚರ್ಚೆ. ಫ್ಯಾನ್ಸ್ ನಡುವೆ ಬಿಸಿಬಿಸಿ ಚರ್ಚೆ ನಡೀತಾ ಇರೋದ್ರಿಂದ ಏನ್ ಆಗ್ತಿದ್ಯೂ ಇಲ್ವೋ ಗೊತ್ತಿಲ್ಲ. ಫ್ರಾಂಚೈಸಿಗಳಿಗಂತೂ ಒಂದು ಲೆಕ್ಕದಲ್ಲಿ ಲಾಭವೇ ಆಗ್ತಿದೆ. ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.
ಇದನ್ನೂ ಓದಿ:ರಿಟೈನ್ ರೂಲ್ ಅಧಿಕೃತ ಘೋಷಣೆ; ಆರ್ಸಿಬಿ ಉಳಿಸಿಕೊಳ್ಳುವ 5 ಆಟಗಾರರು ಇವರೇ..!
ಇನ್ಸ್ ಸ್ಟಾಗ್ರಾಂನಲ್ಲಿ RCBಯೇ ಸಿಕ್ಕಾಪಟ್ಟೆ ಸ್ಟ್ರಾಂಗ್
ಐಪಿಎಲ್ ಆರಂಭವಾಗಿ 18 ಸೀಸನ್ಗಳಾಯ್ತು. ಆದ್ರೆ, ಈವರೆಗೆ ಒಂದೇ ಒಂದು ಬಾರಿಯೂ ಆರ್ಸಿಬಿ ಕಪ್ ಗೆದ್ದಿಲ್ಲ. ಪ್ರತಿ ಬಾರಿ ಕಪ್ ನಮ್ದೇ ಅಂತಾ ಸೀಸನ್ ಸ್ಟಾರ್ಟ್ ಮಾಡೋ ಆರ್ಸಿಬಿ ಅಂತ್ಯದಲ್ಲಿ ಅನುಭವಿಸೋದು ನಿರಾಸೆಯನ್ನ.. ಕಪ್ ಗೆದ್ದಿಲ್ಲ ಅಂದ್ರೂ ಆರ್ಸಿಬಿಯ ಪಾಪ್ಯುಲಾರಿಟಿ ಯಾವ ತಂಡಕ್ಕೂ ಕಮ್ಮಿಯಿಲ್ಲ.. ಇನ್ಸ್ಸ್ಟಾಗ್ರಾಂವೊಂದರಲ್ಲೇ ಆರ್ಸಿಬಿಯ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 15 ಮಿಲಿಯನ್ ಗಡಿ ದಾಟಿದೆ.
RCB ಮುಂದೆ 5 ಬಾರಿಯ ಚಾಂಪಿಯನ್ ಮುಂಬೈ ಏನಿಲ್ಲ
ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ನ ಸಕ್ಸಸ್ಫುಲ್ ಫ್ರಾಂಚೈಸಿ. 5 ಬಾರಿ ಟ್ರೋಫಿ ಗೆದ್ದ ತಂಡ. ಪಾಪ್ಯುಲಾರಿಟಿ ವಿಚಾರಕ್ಕೆ ಬಂದ್ರೆ, ಕಪ್ ಗೆಲ್ಲದ ಆರ್ಸಿಬಿ ಮುಂದೆ ಮುಂಬೈ ಏನಿಲ್ಲ.. ಏನೇನಿಲ್ಲ.. ಇನ್ಸ್ಸ್ಟಾಗ್ರಾಂನಲ್ಲೇ ಆರ್ಸಿಬಿಗೆ ಹೋಲಿಸಿದ್ರೆ, 1 ಮಿಲಿಯನ್ ಕಡಿಮೆ ಫಾಲೋವರ್ಸ್ ಮುಂಬೈಗಿದ್ದಾರೆ. 14.1 ಮಿಲಿಯನ್ ಫಾಲೋವರ್ಸ್ನ ಮುಂಬೈ ಹೊಂದಿದೆ.
ಚೆನ್ನೈ ಸೂಪರ್ ‘ಕಿಂಗ್’.!
ಐಪಿಎಲ್ ಇತಿಹಾಸದ ಮೋಸ್ಟ್ ಸಕ್ಸಸ್ ಫುಲ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ಇನ್ಸ್ಸ್ಟಾಗ್ರಾಂನಲ್ಲಿ ರಿಯಲ್ ಕಿಂಗ್ ಆಗಿ ಮೆರೆದಾಡ್ತಿದೆ. ಬರೋಬ್ಬರಿ 16 ಮಿಲಿಯನ್ ಪಾಲೋವರ್ಸ್ ಚೆನ್ನೈ ತಂಡವನ್ನ ಹಿಂಬಾಲಿಸ್ತಿದ್ದಾರೆ. ಐಪಿಎಲ್ನ 10 ಫ್ರಾಂಚೈಸಿಗಳ ಪೈಕಿ ಅತಿ ಹೆಚ್ಚು ಹಿಂಬಾಲಕರನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಂದಿದೆ.
ಇದನ್ನೂ ಓದಿ:ಧೋನಿಗಾಗಿ ಐಪಿಎಲ್ ನಿಯಮವೇ ಬದಲಾಗುತ್ತಾ..? ಈ ಚರ್ಚೆ ಹಿಂದಿರೋ ನಿಜವಾದ ಕಾರಣ ಏನು..?
3 ತಂಡಗಳದ್ದೇ ದರ್ಬಾರ್.. ಉಳಿದವು ಸೈಲೆಂಟ್
ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್.. ಐಪಿಎಲ್ನಲ್ಲಿ ಈ ಮೂರ ತಂಡಗಳ ಪಂದ್ಯಕ್ಕಿರೋ ಕ್ರೇಜ್ ಬೇರೆ ಯಾವ ತಂಡಕ್ಕೂ ಇರಲ್ಲ.. ಹಾಗೇ ಸೋಷಿಯಲ್ ಮೀಡಿಯಾಗಳಲ್ಲೂ ಅಷ್ಟೇ ಈ ಮೂರು ತಂಡಗಳದ್ದೇ ದರ್ಬಾರ್.! ಇವ್ರ ಹೊರತಾಗಿ ಉಳಿದ ತಂಡಗಳ ಫಾಲೋವರ್ಸ್ ಸಂಖ್ಯೆ 10 ಮಿಲಿಯನ್ ಗಡಿಯನ್ನೂ ದಾಟಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ 6.4 ಮಿಲಿಯನ್
ಫಾಲೋವರ್ಸ್ ಹೊಂದಿರೋದೆ ಹೈಯೆಸ್ಟ್..!
ಸೋಷಿಯಲ್ ಮೀಡಿಯಾದ ಫಾಲೋವರ್ಸ್ ಸಂಖ್ಯೆ ಹೆಚ್ಚಾದ್ರೆ ಏನ್ ಲಾಭ ಅನ್ಕೋಬೇಡಿ. ಕೋಟಿ-ಕೋಟಿ ಸುರಿಯೋ ಫ್ರಾಂಚೈಸಿಗಳಿಗೆ ಇದೂ ಒಂದು ಆದಾಯದ ಮೂಲವೇ. ಇಲ್ಲಿ ಹಾಕೋ ಪೋಸ್ಟ್ಗಳಿಂದ ಹಣಗಳಿಸೋದು ಮಾತ್ರವಲ್ಲ. ತಂಡಕ್ಕೆ ಬರೋ ಸ್ಪಾನ್ಸರ್ಗಳು ಕೂಡ ಈ ಪಾಪ್ಯುಲಾರಿಟಿಯನ್ನೂ ಗಮನಿಸಿಯೇ ಟೈ ಅಪ್ ಮಾಡಿಕೊಳ್ಳೋದು. ಐಪಿಎಲ್ ಅಂದ್ರೆ ಮಿಲಿಯನ್ ಡಾಲರ್ ಟೂರ್ನಿ ಅನ್ನೋದು ಸುಮ್ಮನೆ ಅಲ್ಲ. ಇಲ್ಲಿ ಪ್ರತಿಯೊಂದು ವಿಚಾರದಲ್ಲೂ ಝಣ ಝಣ ಕಾಂಚಾಣದ ಸದ್ದು ಇದ್ದೆ ಇರುತ್ತೆ.
ಇದನ್ನೂ ಓದಿ:LSGಗೆ ಬೇಕೇಬೇಕು ಕೆಎಲ್ ರಾಹುಲ್; ಕನ್ನಡಿಗನ ಉಳಿಸಿಕೊಳ್ಳಲು ಇದೆ ಮೂರು ಕಾರಣ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್