/newsfirstlive-kannada/media/media_files/2025/08/12/pavitra-gowda-tatoo-2025-08-12-19-49-45.jpg)
ಪವಿತ್ರ ಗೌಡ
ರೇಣುಕಾಸ್ವಾಮಿ ಪ್ರಕರಣದ (Renukaswamy case) ಮೊದಲ ಆರೋಪಿ ಪವಿತ್ರಾ ಗೌಡ (Pavitra Gowda) ಫೋಟೋ ಅಭಿಮಾನಿ ಕೈಯಲ್ಲಿ ಅರಳಿದೆ. ಅದನ್ನು ನೋಡಿದ ಪವಿತ್ರ ಗೌಡ ತುಂಬಾನೇ ಖುಷಿಯಾಗಿದ್ದು, ಇನ್ಸ್ಟಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ಅಭಿಮಾನಿಯೊಬ್ಬ ತನ್ನ ಬಲಗೈನ್ನ ಗುಟ್ಟಾಗಿ ಬಿಳಿ ಬಣ್ಣದ ಕಾಗದದಿಂದ ಸುತ್ತಿಕೊಂಡು ನಗು ಬೀರುತ್ತ ಪವಿತ್ರ ಗೌಡ ಇದ್ದಲ್ಲಿಗೆ ಬರುತ್ತಾನೆ. ಪವಿತ್ರ ಗೌಡರ ಬಳಿ ಕೂರುತ್ತಿದ್ದಂತೆಯೇ, ‘ಕೈಯಲ್ಲಿ ಏನು’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ, ‘ನೋಡಿ.. ನಿಮ್ಗೆ ಗೊತ್ತಾಗುತ್ತೆ ’ ಎಂದಿದ್ದಾನೆ.
ಇದನ್ನೂ ಓದಿ: ರೋಹಿತ್ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್ ಪ್ಲೇಟ್..!
ಆಗ ಇಬ್ಬರು ನಗುತ್ತಾರೆ. ನಂತರ ಪವಿತ್ರ ಗೌಡ, ಕೈಯಲ್ಲಿ ಏನಿದೆ ಎಂದು ಪೇಪರ್ ತೆಗೆದು ನೋಡ್ತಾರೆ. ನೋಡ್ತಿದ್ದಂತೆಯೇ.. ಪವಿತ್ರ ಗೌಡ ಜೋರಾಗಿ ನಗ್ತಾರೆ. ಆಗ ಆತ, ‘ಚೆನ್ನಾಗಿದ್ಯಾ ಅಕ್ಕಾ’ ಎಂದು ಕೇಳ್ತಾರೆ. ಅದಕ್ಕೆ ಉತ್ತರಿಸುವ ಪವಿತ್ರ ಗೌಡ.. ಆತನ ಭುಜಕ್ಕೆ ಹೊಡೆದಯ ‘ಸಖತ್ ಆಗಿದೆ’ ಎಂದು ನಕ್ಕಿದ್ದಾರೆ.
ನಂತರ ಖುಷಿಯಿಂದ ತಲೆ ಕೈಯಿಂದ ಚಚ್ಚಿಕೊಳ್ಳುವ ಪವಿತ್ರ ಗೌಡ, ಮತ್ತೆ ಜೋರಾಗಿ ನಕ್ಕಿದ್ದಾರೆ. ಆಗ ಮತ್ತೆ ‘ಚೆನ್ನಾಗಿದ್ಯಾ ಅಕ್ಕಾ’ ಎಂದು ಕೇಳ್ತಾನೆ. ಅದಕ್ಕೆ ನಗುವ ಪವಿತ್ರ ಗೌಡ, ‘ಏನು ಹೇಳಲಿ ನಾನು?, ಏನೋ ಇಲ್ಲಿ ಮಾತಾಡಬೇಕು ತಾನೇ’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಕ್ಸಸ್ ಕಂಡ ಗಿಲ್ಗೆ ಬಂಪರ್ ಬಹುಮಾನ.. ಸದ್ದಿಲ್ಲದೇ ಪಟ್ಟಾಭಿಷೇಕಕ್ಕೆ ಬಿಸಿಸಿಐ ಸಿದ್ಧತೆ..!
ಪವಿತ್ರ ಗೌಡ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿ, ಅದರ ಕೆಳಗೆ ‘ಅಕ್ಕಾ’ ಎಂದು ಇಂಗ್ಲಿಷನ್ನಲ್ಲಿ ಬರೆಸಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಇನ್ನು, ‘ಸಾರಥಿ’ ಅನ್ನೋ ಇನ್ಸ್ಟಾದಲ್ಲಿ ಕೂಡ ವಿಡಿಯೋ ಶೇರ್ ಆಗಿದ್ದು, ಅದರಲ್ಲಿ ಅಕ್ಕನ ಪ್ರೀತಿ ಅಂದ್ರೆ ಮಾರ್ಗದರ್ಶನ ಕಾಳಜಿ ಮತ್ತು ಅಸಿಮಿತ ಸಹನೆಗಳ ಮಿಶ್ರಣ ಎಂದು ಬರೆಯಲಾಗಿದೆ.
ಇದನ್ನೂ ಓದಿ:ಶುಭ್ಮನ್ ಗಿಲ್ಗೆ ಆಫರ್ ಮೇಲೆ ಆಫರ್.. ಯುವರಾಜನಿಗೆ ಒಲಿಯುತ್ತಾ ಈ ಪಟ್ಟ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ