/newsfirstlive-kannada/media/media_files/2026/01/25/dolly-dhananjaya-2026-01-25-16-42-30.jpg)
ಬೆಂಗಳೂರು: ಸಾಮಾನ್ಯವಾಗಿ ಭಾನುವಾರ ಬಂತೆಂದರೆ ಮಾಂಸಪ್ರಿಯರಿಗೆ ಹಬ್ಬ. ಇದೀಗ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಅವರ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಂಸಹಾರ ಸೇವನೆಯ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಾಲಿ ಹಾಕಿರುವ ಪೋಸ್ಟ್​ ಚರ್ಚೆಗೆ ವೇಗ ಪಡೆದುಕೊಂಡಿದೆ.
ಏನಿದು ‘ಹ್ಯಾಪಿ ಸಂಡೇ’ ವಿವಾದ?
ನಟ ಧನಂಜಯ್ ಮಾಂಸಾಹಾರ ಸೇವಿಸುತ್ತಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಧನಂಜಯ್ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಲಿಂಗಾಯತ ಧರ್ಮದ ಸಂಪ್ರದಾಯದ ಪ್ರಕಾರ ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ನೆಟ್ಟಿಗರು, "ಲಿಂಗಾಯತರಾಗಿ ಮಾಂಸಹಾರ ಸೇವಿಸುವುದು ಸರಿಯೇ?" ಎಂದು ಪ್ರಶ್ನಿಸಿದ್ದಾರೆ. ಧರ್ಮದ ಚೌಕಟ್ಟಿನಲ್ಲಿ ಮಾಂಸಹಾರ ಸೇವನೆಯನ್ನು ವಿರೋಧಿಸಿ ಕೆಲವರು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಧನಂಜಯ್ ಬೆನ್ನಿಗೆ ನಿಂತಿದ್ದಾರೆ.
ಪರ-ವಿರೋಧದ ವಾದಗಳು
ವಿರೋಧಿಸುವವರ ವಾದ: "ಲಿಂಗಾಯತ ಧರ್ಮದಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ. ಒಬ್ಬ ಸೆಲೆಬ್ರಿಟಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಾದವರು ಈ ರೀತಿ ಫೋಟೋ ಹಾಕುವುದು ಸಂಪ್ರದಾಯಕ್ಕೆ ವಿರುದ್ಧ" ಎಂಬುದು ಕೆಲವರ ಆಕ್ಷೇಪ.
ಬೆಂಬಲಿಸುವವರ ವಾದ: "ಆಹಾರ ಪದ್ಧತಿ ಎನ್ನುವುದು ವೈಯಕ್ತಿಕ ವಿಚಾರ. ಯಾರು ಏನು ತಿನ್ನಬೇಕು ಎಂಬುದು ಅವರ ಇಷ್ಟ. ಧರ್ಮ ಮತ್ತು ಆಹಾರವನ್ನು ಬೆರೆಸುವುದು ತಪ್ಪು. ಕಾಯಕವೇ ಕೈಲಾಸ ಎಂದು ನಂಬುವ ಧರ್ಮದಲ್ಲಿ ವ್ಯಕ್ತಿಯ ಹಸಿವು ಮತ್ತು ಆಸಕ್ತಿಗೆ ಗೌರವ ನೀಡಬೇಕು" ಎಂದು ಡಾಲಿ ಅಭಿಮಾನಿಗಳು ಸಪೋರ್ಟ್ ಮಾಡುತ್ತಿದ್ದಾರೆ.
ಡಾಲಿಯ ಸೈಲೆಂಟ್ ರಿಯಾಕ್ಷನ್?
ಈ ಚರ್ಚೆಗಳು ನಡೆಯುತ್ತಿದ್ದರೂ ಧನಂಜಯ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಟ್ರೋಲ್ ಅಥವಾ ಚರ್ಚೆಗಳಿಗೆ ಡಾಲಿ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದರು. ಈಗಿನ ‘ಹ್ಯಾಪಿ ಸಂಡೇ’ ಪೋಸ್ಟ್ ಕೂಡ ಇಂತಹ ಚರ್ಚೆಗಳಿಗೆ ನೀಡಿದ ಒಂದು ಸೂಕ್ಷ್ಮ ಉತ್ತರವೇ? ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಬಸವಣ್ಣನವರ ತತ್ವ ಮತ್ತು ಇಂದಿನ ಆಧುನಿಕ ಜೀವನಶೈಲಿಯ ನಡುವೆ ಅಡುಗೆ ಮನೆಯ ಆಹಾರದ ವಿಚಾರ ಈಗ ಬೀದಿ ಚರ್ಚೆಯಾಗಿ ಪರಿಣಮಿಸಿದೆ. ಡಾಲಿ ಧನಂಜಯ್ ಅವರ ಈ ಪೋಸ್ಟ್ ಸದ್ಯಕ್ಕೆ ಸ್ಯಾಂಡಲ್‌ವುಡ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ‘ಹಾಟ್ ಟಾಪಿಕ್’ ಆಗಿ ಮುಂದುವರಿದಿದೆ.
ಇದನ್ನೂ ಓದಿ: ಕಾಫಿನಾಡಿನ ಸತ್ಯಹರಿಶ್ಚಂದ್ರ! ಕೊಟ್ಟ ಮಾತಿನಂತೆ ತೋಟ ಕಡಿದು ಊರಿಗೆ ರಸ್ತೆ ನಿರ್ಮಿಸಿಕೊಟ್ಟ ಮಾಲೀಕ!
Happy Sunday❤️ pic.twitter.com/pffj1QFJa5
— Dhananjaya (@Dhananjayaka) January 25, 2026
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us