/newsfirstlive-kannada/media/media_files/2025/09/09/darshan-6-2025-09-09-11-51-10.jpg)
ಆರೋಪಿ ದರ್ಶನ್
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೇಸ್ ಸಂಬಂಧ ದರ್ಶನ್ ( Actor Darshan) ಅಂಡ್​ ಗ್ಯಾಂಗ್​ ಸೆಂಟ್ರಲ್ ಜೈಲು ಸೇರಿ ಒಂದು ತಿಂಗಳ ಮೇಲಾಯ್ತು. ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಕಾರ್ಪೆಟ್, ಕಂಬಳಿ, ಮಗ್ಗು ಕೊಟ್ಟಿದ್ದೇವೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಪಂಜರದ ಹಕ್ಕಿಯಾಗಿರುವ ದರ್ಶನ್​ಗೆ ಜೈಲಲ್ಲಿ ಜೊತೆಗಿರೋ ಶಿಷ್ಯಂದಿರು ಗುರುಭಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಹಗಲೊತ್ತಲ್ಲಿ ದರ್ಶನ್ ಕುಳಿತುಕೊಂಡಾಗ ಗೋಡೆಗೆ ಒರಗಲು ಅಥವಾ ಮಲಗಲು ತಮಗೆ ನೀಡಿದ ಕಂಬಳಿ ಕಾರ್ಪೆಟ್ ನೀಡಿ ಗುರು ಭಕ್ತಿ ಮೆರೆದಿದ್ದಾರೆ. ಕಂಬಳಿಯನ್ನೇ ಮಡಚಿ ಗೋಡೆಗೆ ಒರಗಿಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಹೀಗಿದ್ರೂ ದರ್ಶನ್ ದೇಹಕ್ಕೆ ಕಂಬಳಿ, ಕಾರ್ಪೆಟ್ ಸರಿಹೊಂದದೆ ಪರದಾಡುವಂತಾಗಿದೆ ಎನ್ನಲಾಗಿದೆ.
ಮಾತ್ರವಲ್ಲದೇ ರಾತ್ರಿ ವೇಳೆ ಕಂಬಳಿ ಮತ್ತು ಕಾರ್ಪೆಟ್​ ಶಿಷ್ಯರಿಗೆ ಬೇಡವೆಂದಿದ್ದು ಅವರೇ ಬಳಸಲು ಸೂಚಿಸಲಾಗಿದೆ. ದರ್ಶನ್​ ವಾಕಿಂಗ್ ಹೋದಾಗ, ಬ್ಯಾರಕ್​ನಲ್ಲಿ ಕುಳಿತಾಗ ಜೊತೆಗಿರುವ ಶಿಷ್ಯಂದಿರ ಸಹಾಯ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಥೆ ಆಧರಿತ ಮತ್ತು ಆಧ್ಯಾತ್ಮಿಕ ಎರಡು ಪುಸ್ತಕಗಳನ್ನು ಪಡೆದು ಇನ್ನುಳಿದ ಸಮಯದಲ್ಲಿ ಪುಸ್ತಕವನ್ನ ಓದಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಊಟ ವಿಚಾರಕ್ಕೆ ಬಂದರೆ ದರ್ಶನ್ ಅನ್ನ ಸಾಂಬರ್, ಮುಂದೆ ಹೊಂದಾಣಿಕೆ ಆಗದೆ ಬರೀ ಚಪಾತಿ ಪಲ್ಯ ಹೆಚ್ಚು ಸೇವನೆ ಮಾಡ್ತಿದ್ದಾರೆ. ಬೇಕರಿಯಲ್ಲಿ ಮಿಕ್ಷರ್, ಬಿಸ್ಕೆಟ್, ಸ್ವೀಟ್ಸ್ ಪಡೆದಿದ್ದಾರೆ. ರೈಸ್ ಬಿಟ್ಟು, ಚಪಾತಿಯೇ ಹೆಚ್ಚು ಕೊಡಲು ಜೈಲಾಧಿಕಾರಿಗಳಲ್ಲೊ ಮನವಿ ಮಾಡಿದ್ದಾರೆ. ಸ್ವಲ್ಪ ತೂಕದಲ್ಲಿಯೂ ದರ್ಶನ್​ ಇಳಿಕೆಯಾಗಿದ್ದಾರೆ. ದರ್ಶನ್ ದೇಹಕ್ಕೆ ಜೈಲೂಟ ಸರಿಹೊಂದದೆ ಪರದಾಡುವಂತಾಗಿದೆ. ಇದೆಲ್ಲದರ ನಡುವೆ ಪಂಜರದಿಂದ ಹೊರಗೆ ಬರೋಕೆ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:ಹ್ಯಾರಿಸ್ ರೌಫ್, ಫರ್ಹಾನ್​​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..! ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.