/newsfirstlive-kannada/media/media_files/2025/09/23/sahibzada-farhan-2025-09-23-10-06-16.jpg)
ಏಷ್ಯಾಕಪ್​​ನ ಸೂಪರ್​ ಫೋರ್​ನಲ್ಲಿ ಸೆಪ್ಟೆಂಬರ್ 21 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಪಾಕಿಸ್ತಾನ ಆಟಗಾರರು, ಮೈದಾನದಲ್ಲಿ ಟೆರರ್ ರೀತಿಯಲ್ಲಿ ನಡೆದುಕೊಂಡರು. ಇದೀಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಸಿಸಿಐ ದೂರು ನೀಡಿದೆ.
ಪಾಕಿಸ್ತಾನದ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಶಾಹಿಬ್​​ಜಾದ ಫರ್ಹಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಂಪ್ಲೆಂಟ್ ನೀಡಿದೆ. ಮ್ಯಾಚ್​ ರೆಫ್ರಿ, ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೈದಾನದಲ್ಲಿ ಪ್ರಚೋದನಾಕಾರಿ ವರ್ತನೆಗಳು ನಿಲ್ಲಬೇಕು. ಇವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಸಿಸಿಐ ಡಿಮ್ಯಾಂಡ್ ಮಾಡಿದೆ.
ಬರೀ ಕಿರಿಕ್ ಮಾಡಿದ್ದ ಪಾಕಿಗಳು..!
ಮ್ಯಾಚ್​ ವೇಳೆ ಭಾರತೀಯ ಆಟಗಾರರನ್ನು ಕೆರಳುವಂತೆ ಪಾಕಿಸ್ತಾನದ ಆಟಗಾರರು ನಡೆದುಕೊಂಡರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಆಟಗಾರರು ತಮ್ಮ ಆಟದ ಮೂಲಕ ತೋರಿಸಿದರು. ಅದರಲ್ಲೂ ಹೆಚ್ಚಾಗಿ ರೌಫ್ ಮತ್ತು ಫರ್ಹಾನ್ ಕೆಟ್ಟ ರೀತಿಯಲ್ಲಿ ವರ್ತಿಸಿದ್ದರು. ಇವರ ವಿರುದ್ಧ ಈಗಾಗಲೇ ಆಕ್ರೋಶಗಳು ವ್ಯಕ್ತವಾಗಿದ್ದವು. ಇದೀಗ ಬಿಸಿಸಿಐ ಕೇಸ್ ದಾಖಲಿಸಿದೆ.
ಇದನ್ನೂ ಓದಿ:ಉಗ್ರನಂತೆ ಪೋಸ್, ಆಮೇಲೆ ಬಿಲ ಸೇರಿದ​.. ಭಾರತ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?
ಏನೇ ಆದ್ರೂ ನಾಯಿ ಬಾಲ ಡೊಂಕೇ. ಈ ಗಾದೆ ಮಾತು ಪಾಕ್​ಗೆ ಸರಿಯಾಗಿ ಅನ್ವಯಿಸುತ್ತೆ. ಭಯೋತ್ಪಾದಕ ಕೃತ್ಯಗಳಿಂದಲೇ ಪಾಕ್​​​, ಕುಖ್ಯಾತಿ ಪಡೆದಿದೆ. ಪಾಕ್ ಆಟಗಾರರೂ ಒಂತರಾ ಈ ಟೆರರಿಸ್ಟ್​ಗಳಂತೆ ಆಡ್ತಿದ್ದಾರೆ. ಅರ್ಧಶತಕದ ಬಳಿಕ ಸಾಹಿಬ್‌ಜಾದಾ ಫರ್ಹಾನ್ ಸಂಭ್ರಮಿಸಿದ ರೀತಿ ಈತ ಟೆರೆರಿಸ್ಟೋ ಅಥವಾ ಆಟಗಾರನೋ ಅನ್ನೋ ಅನುಮಾನ ಹುಟ್ಟಿಸಿದೆ.
ಮೊದಲ ಪಂದ್ಯದ ಸೋಲಿನ ಹತಾಶೆಯಲ್ಲಿದ್ದ ಪಾಕ್, ಸೂಪರ್​-4ನಲ್ಲಾದರು ಗೆದ್ದು ಮಾನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಪಾಕ್​ ಬೌಲಿಂಗ್ ದಾಳಿಯನ್ನು ಗಿಲ್, ಅಭಿಷೇಕ್ ಶರ್ಮಾ ಚಿಂದಿ ಉಡಾಯಿಸಿದರು. ಇವರಿಬ್ಬರ ಆರ್ಭಟ ಅರಗಿಸಿಕೊಳ್ಳಲಾಗದ ಶಾಹೀನ್ ಆಫ್ರಿದಿ, ಶುಭ್​ಮನ್ ಗಿಲ್​​​ ಮೇಲೆ ಸ್ಲೆಡ್ಜಿಂಗ್​ಗೆ ನಿಂತರು. ಕಾಲು ಕೆರೆದುಕೊಂಡು ಬಂದ್ರೆ ನಮ್ಮ ಹುಡುಗ್ರು ಸುಮ್ಮನೇ ಬಿಡ್ತಾರಾ? ಹಾರಿಸ್ ರೌಫ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಶುಭ್​ಮನ್ ಬೌಂಡರಿ ಬಾರಿಸಿದ್ದರು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಅಭಿಷೇಕ್ ಹಾಗೂ ಹ್ಯಾರಿಸ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.