Advertisment

6 ಮಕ್ಕಳು, 13 ಮೊಮ್ಮಕ್ಕಳು.. ಇಬ್ಬರು ಪತ್ನಿಯರು.. ನಕ್ಷತ್ರಗಳಂತೆ ತುಂಬಿದೆ ಧರ್ಮೇಂದ್ರ ಕುಟುಂಬ..!

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ. 6 ಮಕ್ಕಳು ಮತ್ತು 13 ಮೊಮ್ಮಕ್ಕಳೊಂದಿಗೆ, ಧರ್ಮೇಂದ್ರ ಅವರ ಸಂತೋಷದ ಕುಟುಂಬವು ನಕ್ಷತ್ರಗಳಿಂದ ತುಂಬಿದ ಕುಟುಂಬವನ್ನು ಹೊಂದಿದೆ. ಕುಟುಂಬದ ಕಂಪ್ಲೀಟ್ ವಿವರ ಇಲ್ಲಿದೆ.

author-image
Ganesh Kerekuli
Dharmendra (1)
Advertisment

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Veteran actor Dharmendra) ಸಿನಿಮಾ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಿದ್ದರು. 89 ವರ್ಷದ ಧರ್ಮೇಂದ್ರ ಈಗ ಈ ಜಗತ್ತಿನಲ್ಲಿ ಇಲ್ಲ. ಅವರು ಒಂದು ಪೂರ್ಣ ಕುಟುಂಬ ಬಿಟ್ಟು ಹೋಗಿದ್ದಾರೆ. 
ಧರ್ಮೇಂದ್ರ ಅಗಲಿಕೆಯ ಸುದ್ದಿ ಅವರ ಅಭಿಮಾನಿಗಳು ಮತ್ತು ಇಡೀ ಚಿತ್ರರಂಗವನ್ನು ಆಘಾತಕ್ಕೀಡು ಮಾಡಿದೆ. ಧರ್ಮೇಂದ್ರ 65 ವರ್ಷಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದ್ದರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೂಪರ್​​ ಹಿಟ್ ಚಿತ್ರಗಳನ್ನು ನೀಡಿದ್ದರು. 

Advertisment

2 ಮದುವೆ

ಧರ್ಮೇಂದ್ರ ಎರಡು ಬಾರಿ ವಿವಾಹವಾಗಿದ್ದರು. ಮೊದಲ ಪತ್ನಿಯ ಹೆಸರು ಪ್ರಕಾಶ್ ಕೌರ್. ಮತ್ತು  ಎರಡನೇ ಪತ್ನಿಯ ಹೆಸರು ಹೇಮಾ ಮಾಲಿನಿ. ಹೇಮಾ ಮಾಲಿನಿಯೊಂದಿಗಿನ ಅವರ ವಿವಾಹವು ಆ ಸಮಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. 

ಪ್ರಕಾಶ್ ಕೌರ್ ಜೊತೆ ಮದುವೆ

ಧರ್ಮೇಂದ್ರ ಅವರ ಕುಟುಂಬದ ಬಹುತೇಕ ಸದಸ್ಯರು ಬಾಲಿವುಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 1954 ರಲ್ಲಿ ಪ್ರಕಾಶ್ ಕೌರ್ (Prakash Kaur) ಅವರನ್ನು ವಿವಾಹವಾದರು. ಆಗ ಧರ್ಮೇಂದ್ರಗೆ ಕೇವಲ 19 ವರ್ಷ ಆಗಿತ್ತು ಅಷ್ಟೇ. ಈ ಪ್ರಕಾಶ್ ಕೌರ್ ಮತ್ತು ಧರ್ಮೇಂದ್ರ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. 

ಇದನ್ನೂ ಓದಿ: ಸರ್ಕಾರ ನನ್ನ ಮಾತು ಕೇಳದಿದ್ರೆ ಸಂಸತ್​ನಿಂದ ಜಿಗಿಯುವೆ ಎಂದಿದ್ದ ಧರ್ಮೇಂದ್ರ

Advertisment

dharamendra and hema malini marriage contraversy (1)

ಅಜಯ್ ಸಿಂಗ್ ಡಿಯೋಲ್ (Sunny Deol), ವಿಜಯ್ ಸಿಂಗ್ ಡಿಯೋಲ್ (Bobby Deol), ವಿಜೇತ ಡಿಯೋಲ್ (Vijeta Deol) ಮತ್ತು ಅಜಿತಾ ಡಿಯೋಲ್ (Ajita Deol)) ಎಂಬ ಮಕ್ಕಳಿದ್ದಾರೆ. ಸನ್ನಿ ಮತ್ತು ಬಾಬಿ ತಮ್ಮ ತಂದೆ ಹಾದಿಯನ್ನೇ ತುಳಿದರು. ಅವರು ಹಿಂದಿ ಚಿಂತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜೇತಾ ಮತ್ತು ಅಜಿತಾ ಸಿನಿಮಾ ರಂಗದಿಂದ ದೂರವಿದ್ದಾರೆ. ಸಿನಿಮಾ, ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಿಂದ ದೂರವಿದ್ದಾರೆ. 

ಹೇಮಾ ಮಾಲಿನಿ ಜೊತೆ ಮದುವೆ

1980ರಲ್ಲಿ ಧರ್ಮೇಂದ್ರ ಹೇಮಾ ಮಾಲಿಯನ್ನು (Hema Malini) ಮದುವೆಯಾದರು. ಧರ್ಮೇಂದ್ರ, ಮೊದಲ ಪತ್ನಿ ಪ್ರಕಾಶ್ ಕೌರ್​ಗೆ ವಿಚ್ಛೇದನ ನೀಡದೇ ಹೇಮಾ ಮಾಲಿನಿ ಮದುವೆ ಆಗಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಶಾ ಡಿಯೋಲ್ (Esha deol) ಮತ್ತು ಅಹಾನಾ ಡಿಯೋಲ್ (Ahana Deol). ಇಶಾ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರೆ, ಅಹಾನಾ ಮದುವೆಯ ನಂತರ ವಿದೇಶದಲ್ಲಿದ್ದಾರೆ. ಇಶಾ ಡಿಯೋಲ್ ತನ್ನ ಪತಿ ಭರತ್ ತಖ್ತಾನಿಯಿಂದ ವಿಚ್ಛೇದನ ಪಡೆದಿದ್ದಾರೆ. 

ಇದನ್ನೂ ಓದಿ: ಬಾಲಿವುಡ್​​ನ ದಂತಕತೆ ಧರ್ಮೇಂದ್ರ ಇನ್ನಿಲ್ಲ..

dharamendra and hema malini marriage contraversy

ಧರ್ಮೇಂದ್ರ ಮಕ್ಕಳು ಮತ್ತು ಮೊಮ್ಮಕ್ಕಳು

ಧರ್ಮೇಂದ್ರ ಹಿರಿಯ ಮಗ ಸನ್ನಿ ಡಿಯೋಲ್ 1984ರಲ್ಲಿ ಪೂಜಾ ಡಿಯೋಲ್ ಅವರನ್ನು ವಿವಾಹವಾದರು. ದಂಪತಿಗೆ ಕರಣ್ ಡಿಯೋಲ್ (Karan Deol) ಮತ್ತು ರಾಜ್‌ವೀರ್ ಡಿಯೋಲ್ (Rajveer Deol) ಎಂಬ ಗಂಡು ಮಕ್ಕಳಿದ್ದಾರೆ. ಇಬ್ಬರೂ ಸಿನಿಮಾ ರಂಗದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಧರ್ಮೇಂದ್ರ ಅವರ ಕಿರಿಯ ಮಗ ಬಾಬಿ ಡಿಯೋಲ್ 1996 ರಲ್ಲಿ ತಾನ್ಯಾ ಡಿಯೋಲ್ (Tanya Deol) ​ರನ್ನು ವಿವಾಹವಾದರು. ಅವರಿಗೆ ಆರ್ಯಮಾನ್ ಡಿಯೋಲ್ (Aryaman Deol) ಮತ್ತು ಧರಂ ಡಿಯೋಲ್ (Dharam deol) ಎಂಬ ಗಂಡು ಮಕ್ಕಳಿದ್ದಾರೆ.

Advertisment

ಇದನ್ನೂ ಓದಿ: ಹೇಮಾಮಾಲಿನಿ ಮದುವೆಯಾಗಲು ಧರ್ಮೇಂದ್ರ ಇಸ್ಲಾಂಗೆ ಮತಾಂತರವಾಗಿದ್ರಾ? ಧರ್ಮೇಂದ್ರ, ಹೇಮಾ ಮಾಲಿನಿ ಈ ಬಗ್ಗೆ ಹೇಳಿದ್ದೇನು?

Dharmendra (3)

ಅಜಿತಾ, ಕಿರಣ್ ಚೌಧರಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ನಿಕಿತಾ ಚೌಧರಿ ಮತ್ತು ಪ್ರಿಯಾಂಕಾ ಚೌಧರಿ. ವಿಜೇತಾ, ವಿವೇಕ್ ಗಿಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೂ ಇಬ್ಬರು ಮಕ್ಕಳಿದ್ದಾರೆ - ಒಬ್ಬ ಮಗಳು ಪ್ರೇರಣಾ ಗಿಲ್ ಮತ್ತು ಇನ್ನೊಬ್ಬ ಸಾಹಿಲ್ ಗಿಲ್.

ಇಶಾ ಮತ್ತು ಅಹಾನಾ ಮಕ್ಕಳು

ಧರ್ಮೇಂದ್ರ ಅವರಿಗೆ ಹೇಮಾ ಮಾಲಿನಿಯಿಂದ ಪಡೆದ ಇಬ್ಬರು ಹೆಣ್ಮಕ್ಕಳಿದ್ದಾರೆ. ಇಶಾ ಮತ್ತು ಅಹಾನಾ ಡಿಯೋಲ್. ಇಶಾ ಉದ್ಯಮಿ ಭರತ್ ತಖ್ತಾನಿಯನ್ನು ವಿವಾಹವಾದರು. ಆದರೆ ಅವರು 2024ರಲ್ಲಿ ಬೇರ್ಪಟ್ಟಿದ್ದಾರೆ. ಇಶಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರ ರಾಧ್ಯಾ ಮತ್ತು ಮಿರಾಯಾ. ಅಹಾನಾ 2014ರಲ್ಲಿ ಉದ್ಯಮಿ ವೈಭವ್ ವೋಹ್ರಾ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಒಂದು ಮಗು, ಇಬ್ಬರು ಹೆಣ್ಮಕ್ಕಳು. 

Advertisment

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmendra
Advertisment
Advertisment
Advertisment