/newsfirstlive-kannada/media/media_files/2025/11/24/dharmendra-2-2025-11-24-14-29-34.jpg)
ಬಾಲಿವುಡ್​ನ ಹಿ-ಮ್ಯಾನ್ ಧಮೇಂದ್ರ (89) ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶೋಲೆಯ ವೀರೂ ಇಹಲೋಕ ತ್ಯಜಿಸಿದ್ದಾರೆ.
300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಧರ್ಮೇಂದ್ರ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ರು. 2004ರಿಂದ 2009ರವರೆಗೆ ಲೋಕಸಭೆ ಸದಸ್ಯರಾಗಿದ್ದರು. ರಾಜಸ್ಥಾನದ ಬಿಕಾನೇರ್​ನಿಂದ ಬಿಜೆಪಿಯಿಂದ ಸ್ಪರ್ಧಿಸಿ 15ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಬಾಲಿವುಡ್​​ನ ದಂತಕತೆ ಧರ್ಮೇಂದ್ರ ಇನ್ನಿಲ್ಲ..
/filters:format(webp)/newsfirstlive-kannada/media/media_files/2025/11/11/dharmendra-2025-11-11-09-43-13.jpg)
2004ರಲ್ಲಿ ಬಿಜೆಪಿಯ ‘ದಿ ಶೈನಿಂಗ್ ಇಂಡಿಯಾ ಅಭಿಯಾನದಿಂದ’ ತೀವ್ರ ಪ್ರಭಾವಿತರಾಗಿದ್ದ ಧರ್ಮೇಂದ್ರ, ಶತ್ರುಘ್ನ ಸಿನ್ಹಾ ಜೊತೆಗೂಡಿ ಎಲ್.ಕೆ.ಅಡ್ವಾಣಿ ಭೇಟಿಯಾಗಿ ಬೆಂಬಲ ಘೋಷಿಸಿದ್ರು. ಬಿಜೆಪಿ ಧರ್ಮೇಂದ್ರ ಅವರನ್ನ ರಾಜಸ್ಥಾನದ ಬಿಕಾನೇರ್​ದಿಂದ ಟಿಕೆಟ್ ನೀಡಿತ್ತು.
2004ರ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಶೋಲೆ ಸಿನಿಮಾ ಸ್ಟೈಲ್​ನಲ್ಲಿ ಹೊಡೆದ ಒಂದು ಡೈಲಾಗ್ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ರಾಜಸ್ಥಾನದ ಬಿಕಾನೇರ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧರ್ಮೇಂದ್ರ ಚುನಾವಣಾ ಪ್ರಚಾರದ ವೇಳೆ ‘ಸರ್ಕಾರ ನನ್ನ ಮಾತು ಕೇಳದಿದ್ರೆ ಸಂಸತ್​ನ ಛಾವಣಿಯಿಂದ ಜಿಗಿಯುತ್ತೇನೆ’ ಎಂದು ಹೇಳಿದ್ದರು.
ಚುನಾವಣೆಯಲ್ಲಿ ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮೇಶ್ವರ್ ಲಾಲ್ ದುಡಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ರಾಮೇಶ್ವರ್ ಲಾಲ್​ ವಿರುದ್ಧ ಧರ್ಮೇಂದ್ರ 60 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ:ದೆಹಲಿಯ ಮಾಲಿನ್ಯ ವಿರುದ್ಧ ಪ್ರತಿಭಟನೆ : ಇದ್ದಕ್ಕಿದ್ದಂತೆ ನಕ್ಸಲ್ ಪರ ಘೋಷಣೆ! ಏಕೆ ಹೀಗಾಯ್ತು?
/filters:format(webp)/newsfirstlive-kannada/media/media_files/2025/11/24/dharmendra-4-2025-11-24-14-32-50.jpg)
ಲೋಕಸಭೆ ಪ್ರವೇಶಿಸಿದ ಬಳಿಕ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡರು. ಬಿಕಾನೇರ್​ನಲ್ಲಿ ಅಪರೂಪಕ್ಕೆ ಜನರನ್ನು ಭೇಟಿಯಾಗುತ್ತಿದ್ದರು. ಸಂಸತ್​ನಲ್ಲೂ ಅವರ ಹಾಜರಾತಿ ಅತ್ಯಂತ ಕಳಪೆ ಎಂಬ ಆರೋಪ ಕೇಳಿ ಬಂದಿತ್ತು. ಸಂಸದರಾದ ಬಳಿಕವೂ ಅವರು ಚಿತ್ರೀಕರಣದಲ್ಲೇ ಇರುತ್ತಿದ್ದರು ಎಂಬ ಆರೋಪವಿತ್ತು.
2009ರಲ್ಲಿ ತಮ್ಮ ಸಂಸದ ಸ್ಥಾನದ ಅವಧಿ ಬಳಿಕ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ್ರು. ಆ ಬಳಿಕ ರಾಜಕೀಯ ತನಗೆ ಸರಿಯಾದ ಜಾಗವಲ್ಲ ಎಂದು ಒಮ್ಮೆ ಹೇಳಿಕೊಂಡಿದ್ದರು.
ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್ ‘ನಮ್ಮ ತಂದೆಗೆ ರಾಜಕೀಯ ಇಷ್ಟವಾಗಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕಾಗಿ ವಿಷಾದಿಸಿದ್ದರು’ ಎಂದು ಹೇಳಿದ್ದರು.
ವಿಶೇಷ ವರದಿ: ವಿಶ್ವನಾಥ್, ನ್ಯೂಸ್​ಫಸ್ಟ್ ಕನ್ನಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us