/newsfirstlive-kannada/media/media_files/2025/09/15/upendra-and-priyanka-upendra-2025-09-15-13-54-46.jpg)
ಬೆಂಗಳೂರು: ಹತ್ತು ದಿನದ ಬಳಿಕ ಕೊನೆಗೂ ನಟ ಉಪೇಂದ್ರ ದಂಪತಿಯ (Upendra) ಮೊಬೈಲ್​ ಹ್ಯಾಕ್​ ಮಾಡಿದ ಗ್ಯಾಂಗ್​ನನ್ನು ಸದಾಶಿವನಗರ ಠಾಣೆ ಪೊಲೀಸ್ರು ಪತ್ತೆ ಹಚ್ಚಿದ್ದಾರೆ. ಬಿಹಾರಿ ಗ್ಯಾಂಗ್ ಮೊದಲಿಗೆ ನಟಿ ಪ್ರಿಯಾಂಕ ( Priyanka Upendra) ಮೊಬೈಲ್ ಹ್ಯಾಕ್ ಮಾಡಿ ಆ ಬಳಿಕ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ್ದಾರೆ.
ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣದ ಹಿನ್ನೆಲೆ ಸದಾಶಿವನಗರ ಠಾಣೆ ಪೊಲೀಸ್ರು ಹತ್ತು ದಿನ ಬಳಿಕ ಹ್ಯಾಕರ್​ ಗ್ಯಾಂಗ್​ ಪತ್ತೆ ಹಚ್ಚಿದ್ದಾರೆ. ಇದು ಒಬ್ಬ ಹ್ಯಾಕರ್ ಮಾಡಿರೋ ಕೃತ್ಯವಲ್ಲ, ನಾಲ್ಕೈದು ಮಂದಿಯ ಬಿಹಾರಿ ಗ್ಯಾಂಗ್ ಮಾಡಿರೋ ಕೃತ್ಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹ್ಯಾಕರ್ಸ್​ ನಟಿ ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿ ಪಡೆದ ಹಣವನ್ನೂ ಬರೋಬ್ಬರಿ ನಾಲ್ಕು ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ₹1.65 ಲಕ್ಷ ಹಣವನ್ನು ಎಲ್ಲಾ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಕೊನೆಗೆ ನಳಂದಾ ಬ್ಯಾಂಕ್​ಗೆ ಟ್ರಾನ್ಸಕ್ಷನ್ ಮಾಡಿದ್ದಾರೆ. *121*9279295167# ಸೇಮ್ ನಂಬರ್ ಬಳಸಿ ಆಂಧ್ರ ಹಾಗೂ ತಮಿಳುನಾಡು ಭಾಗದಲ್ಲಿ ಮೊಬೈಲ್ ಹ್ಯಾಕ್ ಮಾಡಲು ಯತ್ನಿಸಿರೋದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಉಪೇಂದ್ರ ಅಲರ್ಟ್​ ಆಗಿದ್ಹೇಗೆ?
ಸೈಬರ್ ವಂಚಕರು ಆರ್ಡರ್​ ಮೂಲಕ ಪ್ರಿಯಾಂಕ ಉಪೇಂದ್ರಗೆ ಲಿಂಕ್​​ ಮಾಡೋದಕ್ಕೆ ಹೇಳಿದ್ದಾರೆ. ಪ್ರಿಯಾಂಕ ಉಪೇಂದ್ರ ಲಿಂಗ್​ ಮಾಡ್ತಿದ್ದಂತೆ ಪ್ರಿಯಾಂಕ ಉಪೇಂದ್ರ ಸೇರಿ ಉಪೇಂದ್ರ ಅವರ ಎಲ್ಲಾ ಬ್ಯಾಂಕ್​ ಡಿಟೇಲ್ಸ್ ಹಾಗೂ ಕಾನ್​ಟ್ಯಾಕ್ಟ್ಸ್​ ವಂಚಕರ ಕೈ ಸೇರಿದೆ. ಪ್ರಿಯಾಂಕ ಉಪೇಂದ್ರ ತನ್ನ ಮೊಬೈಲ್​ ಹ್ಯಾಕ್ ಆಗ್ತಿದ್ದಂತೆ ಅಲರ್ಟ್ ಆಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡೋದು ಹತ್ತು ನಿಮಿಷ ಯಾರಾರಿದರೆ ಹತ್ತು ಲಕ್ಷಕ್ಕೂ ಹೆಚ್ಚು ಹಣ ಸಂದಾಯವಾಗ್ತಿತ್ತು ಎನ್ನಲಾಗ್ತಿದೆ. ಸ್ನೇಹಿತರು ಕುಟುಂಬಸ್ಥರು ಎಲ್ಲರೂ ಹಣ ಹಾಕುವ ಬಗ್ಗೆ ರಿಟರ್ನ್ ಫೋನ್ ಮಾಡಿ ವಿಚಾರಿಸಿದ್ದಾರೆ. ಸದ್ಯ ಮತ್ತೊಮ್ಮೆ ಪ್ರಿಯಾಂಕ ಉಪೇಂದ್ರರಿಂದ ಬ್ಯಾಂಕ್ ಅಕೌಂಟ್​ಗಳ ಬಗ್ಗೆ ದಾಖಲೆ ಪಡೆದಿದ್ದಾರೆ.
ಇದು ಒಬ್ಬ ಹ್ಯಾಕರ್ ಮಾಡಿರೋ ಕೃತ್ಯವಲ್ಲ, ನಾಲ್ಕೈದು ಮಂದಿಯ ಬಿಹಾರಿ ಗ್ಯಾಂಗ್ ಕೃತ್ಯ ಎಸೆಗಿದ್ದಾರೆ. ಸದ್ಯ ಪೊಲೀಸರ ಟೀಮ್​ ಎಚ್ಚೇತು ಬಿಹಾರಕ್ಕೆ ಒಂದು ಸ್ಪೆಷಲ್ ಟೀಂ ಕಳಿಸಲು ಸೆಂಟ್ರಲ್ ಡಿಸಿಪಿ ಅಕ್ಷಯ್ ಮಚೀಂದ್ರ ಮುಂದಾಗಿದ್ದಾರೆ.
ಇದನ್ನೂ ಓದಿ: ಹ್ಯಾರಿಸ್ ರೌಫ್, ಫರ್ಹಾನ್​​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..! ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ