/newsfirstlive-kannada/media/media_files/2025/12/23/vinay-gowda-2025-12-23-13-58-41.jpg)
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ವರ್ಸಸ್ ಸುದೀಪ್ ಫ್ಯಾನ್ಸ್ ನಡುವೆ ಯುದ್ಧ (Fans War) ನಡೆಯುತ್ತಿದೆ. ಇದರ ಮಧ್ಯೆ ದರ್ಶನ್ ಹಾಗೂ ಸುದೀಪ್ ಆಪ್ತರು ಪೋಸ್ಟ್​ಗಳನ್ನು ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದೀಗ ಧನ್ವಿರ್ ಗೌಡ vs ವಿನಯ್ ಗೌಡ (Dhanveer Gowda vs Vinay Gowda) ಮಧ್ಯೆ ಪೋಸ್ಟರ್ ವಾರ್ ಶುರುವಾಗಿದೆ.
ಧನ್ವೀರ್​ ಗೌಡಗೆ ಕೌಂಟರ್!
ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ (Kiccha Sudeep) ಆಡಿದ ‘ಯುದ್ಧಕ್ಕೆ ರೆಡಿ’ ಎಂಬ ಮಾತುಗಳು ಚರ್ಚೆ ಆಗ್ತಿದ್ದಂತೆಯೇ ವಿಜಯಲಕ್ಷ್ಮೀ ದರ್ಶನ್ ಪರ ಬ್ಯಾಟ್ ಬೀಸಿ, ಕೌಂಟರ್ ನೀಡಿದ್ದರು. ಬೆನ್ನಲ್ಲೇ ದರ್ಶನ್ ಅವರ ಆಪ್ತ ಧನ್ವೀರ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೋ ಶೇರ್​ ಮಾಡಿದ್ದರು. ಫೋಟೋಗೆ ತಮಿಳು ಸಿನಿಮಾ ಡೈಲಾಗ್ ಆಡಿಯೋ ಎಡಿಟ್ ಸೇರಿಸಲಾಗಿತ್ತು.
ಇದನ್ನೂ ಓದಿ:ಗಿಲ್ಲಿ PR ಟೀಂಗೆ ಎಚ್ಚರಿಕೆ ಕೊಟ್ಟ ರಜತ್.. ಯಾಕೆ..? -VIDEO
Dhanveer boss insta story
— ನಾನು ᴅʜᴀɴᴠᴇᴇʀᴀ ꜰᴀɴ ✪ (@NKurubagouda) December 21, 2025
Only one lion 🔥#dboss#dhanveera
pic.twitter.com/G05vjGciKy
ವಿನಯ್ ಏನಂದ್ರು..?
‘ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತದೆ. ಆದರೆ ಸಿಂಹನೇ ರಾಜ’ ಎಂದು ತಮಿಳು ಸಿನಿಮಾ ಡೈಲಾಗ್ ಅನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದರು. ಇದಕ್ಕೆ ಕೌಂಟರ್ ಎನ್ನುವಂತೆ, ವಿನಯ್ ಗೌಡ, ಧನ್ವೀರ್ ಮತ್ತು ದರ್ಶನ್ ಹೆಸರನ್ನು ಪ್ರಸ್ತಾಪಿದೇ, ಪೋಸ್ಟ್ ಮಾಡಿದ್ದಾರೆ. ಖಂಡಿತ ಕಾಡಿನ ರಾಜ ಸಿಂಹನೇ.. ಅದು ಎಲ್ಲರಿಗೂ ಚೆನ್ನಾಗಿ ಗೊತ್ತು. ಕಾಡಿನ ರಾಜ ಯಾರೆಂದರೆ, ಲಯನ್ ಈಸ್​.. ಕಿಚ್ಚ ಸುದೀಪ್ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಮಾತಿನ ಟಾರ್ಗೆಟ್ ಯಾರು ಗೊತ್ತಾ? ನಟ ದರ್ಶನ್ ಪತ್ನಿ ತಿರುಗೇಟು ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us