/newsfirstlive-kannada/media/media_files/2025/09/17/actress-swarna-and-puspa-arunkumar-2025-09-17-12-43-13.jpg)
ಕೊತ್ತಲವಾಡಿ ಚಿತ್ರದ ಪೇಮೆಂಟ್ ವಿವಾದಕ್ಕೆ ಸಂಬಂಧಿಸಿ ನಟಿ ಸ್ವರ್ಣ ಅವರು ವಿಡಿಯೋ ಹರಿಬಿಟ್ಟಿದ್ದಾರೆ. ನನಗೆ ಪೇಮೆಂಟ್ ಆಗಿಲ್ಲ ಎಂದು ಅಮ್ಮ ಫೋನ್ ಮಾಡಿ ನಿರ್ದೇಶಕರ ಜೊತೆ ಗಲಾಟೆ ಮಾಡಿದ್ದು ನಿಜ. ಆ ಆಡಿಯೋ ಈಗ ವೈರಲ್ ಆಗಿದೆ. ಅದು ಹೇಗೆ ಆಗಿದೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ಆದರೆ ವಿಡಿಯೋ ವೈರಲ್ ಆಗಿರೋದು ತುಂಬಾ ಒಳ್ಳೆಯದೇ ಆಗಿದೆ. ನಾವು ಯಾರ ಹತ್ತಿರ ಹೇಳಿಕೊಳ್ಳಬೇಕು ಅನ್ನೋದು ಗೊತ್ತಾಗಿರಲಿಲ್ಲ. ಯಾರು ವಿಡಿಯೋ ವೈರಲ್ ಮಾಡಿದ್ದಾರೆ ಅವರಿಗೆ ನಾನು ಥ್ಯಾಂಕ್ಸ್ ಹೇಳ್ತೇನೆ. ಆದರೆ ವೈರಲ್ ಆಗಿರುವ ವಿಡಿಯೋ ಇವಾಗಿಂದಲ್ಲ.
ಇದನ್ನೂ ಓದಿ:ಮಾಜಿ ಸಿಎಂ ಸದಾನಂದಗೌಡರ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚಿದ ಹ್ಯಾಕರ್ಸ್, ಎಷ್ಟು ಲಕ್ಷ ಹಣ ದೋಚಿದ್ರು ಗೊತ್ತಾ?
ಮೊದಲು ನನಗೆ ಪೇಮೆಂಟ್ ಆಗಿರಲಿಲ್ಲ. ಅಮ್ಮ, ಜಗಳ ಆಡಿದ ಮೇಲೆ ನನಗೆ ಒಂದಷ್ಟು ಹಣ ನೀಡಿದರು. ನನಗೆ 35 ಸಾವಿರ ರೂಪಾಯಿ ನೀಡಿದ್ದಾರೆ. ಅವರಿಂದ ಇನ್ನೂ 48 ಸಾವಿರ ಬರಬೇಕಿದೆ ಎಂದಿದ್ದಾರೆ.
ಕಲಾವಿದರಿಗೆ ಪೇಮೆಂಟ್ ಮಾಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೊತ್ತಲವಾಡಿ (Kothalavadi movie) ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ (Pushpa Arunkumar) ವಿರುದ್ಧ ಕೇಳಿಬಂದಿದೆ. ಶ್ರೀರಾಜ್ ನಿರ್ದೇಶನದ ಈ ಚಿತ್ರವು ಕಳೆದ ಆಗಸ್ಟ್ 1 ರಂದು ಬಿಡುಗಡೆ ಆಗಿದ್ದು, ಇದೀಗ ಒಟಿಟಿಯಲ್ಲಿದೆ. ಚಿತ್ರದಲ್ಲಿ ನಟಿಸಿರುವ ಸಹ ಕಲಾವಿದ ಮಹೇಶ್ ಗುರು ಅನ್ನೋರು ಗಂಭೀರ ಆರೋಪ ಮಾಡಿದ್ದರು. ಇದೀಗ ಚಿತ್ರದ ನಟಿ ಕೂಡ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ:ಕೊತ್ತಲವಾಡಿ ಚಿತ್ರದ ನಟರಿಗೆ ಪೇಮೆಂಟ್ ಮಾಡದೇ ಮೋಸ - ವಿಡಿಯೋ ಹರಿಬಿಟ್ಟ ಕಲಾವಿದ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ