/newsfirstlive-kannada/media/media_files/2025/08/08/kantara-t-prabhakar-kalyani-2025-08-08-17-54-08.jpg)
ಉಡುಪಿ: ಕಾಂತಾರ ಚಿತ್ರತಂಡದಲ್ಲಿ ಗುರುತಿಸಿಕೊಂಡ ಮತ್ತೋರ್ವ ಸಹಕಲಾವಿದ ಮೃತಪಟ್ಟಿದ್ದಾರೆ. ಟಿ. ಪ್ರಭಾಕರ ಕಲ್ಯಾಣಿ ಮೃತ ದುರ್ದೈವಿ.
ಟಿ.ಪ್ರಭಾಕರ ಕಲ್ಯಾಣಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದವರು. ಕಾಂತಾರ ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಪ್ ಬರೋಡಾದ ನಿವೃತ್ತ ಉದ್ಯೋಗಿಯಾದ್ದರು.
ಇದನ್ನೂ ಓದಿ: ಐಶ್ಚರ್ಯಾಗೆ ಡಿವೋರ್ಸ್ ನೀಡಿ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರಾ ನಟ ಧನುಷ್..?
ರಂಗಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ಕಾಂತಾರ ಸಿನಿಮಾಗಾಗಿ ಸುಮಾರು ಒಂದು ವರ್ಷಗಳಕಾಲ ಗಡ್ಡ ತೆಗೆಯದೆ ಉಳಿಸಿಕೊಂಡಿದ್ದರು. ಇಂದು ಬೆಳಗ್ಗೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಲಾವಿದ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ರಿಲೀಸ್ಗೆ ಸಿದ್ಧವಾಗಿದೆ ಕಾಂತಾರ-1
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಮೊದಲ ಭಾಗ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. 125 ಕೋಟಿ ಬಜೆಟ್ನ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ. 2022ರಲ್ಲಿ ತೆರೆ ಕಂಡಿದ್ದ ಚಾಪ್ಟರ್ 2 ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಇದೀಗ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ:ರಿಷಭ್ ಶೆಟ್ಟಿಗೆ ಜೊತೆಯಾದ ಕನಕವತಿ.. ಕಾಂತಾರ- 1 ರಲ್ಲಿ ರುಕ್ಮಿಣಿ ವಸಂತ್ ಪೋಸ್ಟರ್ ಲುಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ