/newsfirstlive-kannada/media/media_files/2025/08/08/hanush-mrunal-thakur-2025-08-08-16-25-41.jpg)
ನಟಿ ಮೃಣಾಲ್ ಠಾಕೂರ್ ಜೊತೆ ನಟ ಧನುಷ್ ಕಾಣಿಸಿಕೊಂಡಿರುವುದು
ತಮಿಳು ನಟ ಧನುಷ್ ಸದ್ದಿಲ್ಲದೇ, ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮೃಣಾಲ್ ಠಾಕೂರ್ ಕೂಡ ಧನುಷ್ ಸೋದರಿಯರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ನಟ ಧನುಷ್ ಮತ್ತು ಮೃಣಾಲ್ ಠಾಕೂರ್ ನಡುವೆ ಕುಚ್ ಕುಚ್ ಚಲ್ ರಹೇ ಎಂಬ ಮಾತುಗಳು ಕೇಳಿ ಬಂದಿವೆ.
ತಮಿಳು ನಟ ಧನುಷ್, ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ಚರ್ಯಾರನ್ನು ವಿವಾಹವಾಗಿದ್ದರು. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೇ, ಕೆಲವೊಂದು ಕಾರಣಗಳಿಂದ ಇಬ್ಬರು ವಿವಾಹ ವಿಚ್ಛೇದನ ಪಡೆಯುವ ತೀರ್ಮಾನ ಕೈಗೊಂಡಿದ್ದಾರೆ. ಈಗ ಜೀವನದಲ್ಲಿ ಸಂಗಾತಿ ಇಲ್ಲದೇ ಒಂಟಿಯಾಗಿರುವ ಪ್ರಸಿದ್ದ ನಟ ಧನುಷ್, ಜೀವನದಲ್ಲಿ ಬೋರಾಗದಂತೆ ನೋಡಿಕೊಳ್ಳಲು ಮತ್ತೆ ಜಂಟಿಯಾಗುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮೃಣಾಲ್ ಠಾಕೂರ್ ಹಿಂದೆ ಬಿದ್ದಿದ್ದಾರೆ ಎಂದು ತಮಿಳುನಾಡಿನ ಚೆನ್ನೈನಿಂದ ಮಹಾರಾಷ್ಟ್ರದ ಮುಂಬೈನವರೆಗೂ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಟ ಧನುಷ್ ಹಾಗೂ ನಟಿ ಮೃಣಾಲ್ ಠಾಕೂರ್ ಆಗ್ಗಾಗ್ಗೆ ಭೇಟಿಯಾಗುತ್ತಿದ್ದಾರೆ. ಇಬ್ಬರು ಪಿಸು ಮಾತುಗಳನ್ನಾಡುವುದು ಕ್ಯಾಮರಾಗಳ ಕಣ್ಣಿಗೆ ಬಿದ್ದಿದೆ.
ಇತ್ತೀಚೆಗೆ ನಟಿ ಮೃಣಾಲ್ ಠಾಕೂರ್ ನಟಿಸಿರುವ ಸನ್ ಆಫ್ ಸರ್ದಾರ್ 2 ಸಿನಿಮಾದ ಸ್ಕ್ರೀನಿಂಗ್ ಮುಂಬೈನಲ್ಲಿ ನಡೆದಿತ್ತು. ಈ ಸಿನಿಮಾ ಸ್ಕ್ರೀನಿಂಗ್ ನಲ್ಲಿ ನಟ ಧನುಷ್ ಭಾಗಿಯಾಗಿದ್ದರು. ಬಳಿಕ ಮೃಣಾಲ್ ಠಾಕೂರ್ ಕೈ ಹಿಡಿದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೃಣಾಲ್ ಠಾಕೂರ್ ಕೂಡ ಧನುಷ್ ಜೊತೆ ಹತ್ತಿರ ಬಂದು ಪಿಸುಮಾತಿನಲ್ಲೇ ಮಾತನಾಡಿದ್ದರು.
ಇದನ್ನೂ ಓದಿ: ಬಿಗ್ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್.. PHOTOS
ಬಳಿಕ ಮೃಣಾಲ್ ಠಾಕೂರ್, ಇನ್ ಸ್ಟಗ್ರಾಮ್ ನಲ್ಲಿ ಧನುಷ್ ಸೋದರಿಯರಾದ ಡಾ.ಕಾರ್ತಿಕಾ ಕಾರ್ತಿಕ್ ಮತ್ತು ವಿಮಲಾ ಗೀತಾರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ಗಳನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ನಟ ಧನುಷ್ ಅವರು ಮೃಣಾಲ್ ಠಾಕೂರ್ ರನ್ನು ತಮ್ಮ ಸೋದರಿಯರಿಗೆ ಪರಿಚಯಿಸಿದ್ದಾರೆ. ಹೀಗಾಗಿಯೇ ನಟಿ ಮೃಣಾಲ್ ಠಾಕೂರ್, ಧನುಷ್ ಸೋದರಿಯರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಫುಷ್ಟಿ ನೀಡುವಂತೆ ಸೋಷಿಯಲ್ ಮೀಡಿಯಾ ಚಟುವಟಿಕೆಗಳು ಕಂಡು ಬಂದಿವೆ.
ಆಗಸ್ಟ್ 1 ರಂದು ನಟಿ ಮೃಣಾಲ್ ಠಾಕೂರ್ ಬರ್ತಡೇ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ನಟ ಧನುಷ್ ಭಾಗಿಯಾಗಿದ್ದರು ಎಂದು ಸೋಷಿಯಲ್ ಮೀಡಿಯಾ ಪೋಟೋಗಳಿಂದಲೇ ತಿಳಿದು ಬಂದಿದೆ.
ಇದನ್ನೂ ಓದಿ: ‘LOVE YOU ಬಂಗಾರ’.. ವೇದಿಕೆ ಮೇಲೆ ಸೋನಲ್ಗೆ ಸರ್ಪ್ರೈಸ್ ಕೊಟ್ಟ ತರುಣ್ ಸುಧೀರ್.. ಏನದು?
ಕಳೆದ ತಿಂಗಳು ಧನುಷ್ ಅವರ ಮುಂದಿನ ಸಿನಿಮಾ ತೆರೇ ಇಸ್ಕಾ ಮೈನ್ ಸಿನಿಮಾದ ಪ್ರೊಡ್ಯೂಸರ್ ಕನ್ನಿಕಾ ಧಿಲ್ಲೋನ್ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಮೃಣಾಲ್ ಠಾಕೂರ್ ಕೂಡ ಭಾಗಿಯಾಗಿದ್ದರು. ನಟಿ ಮೃಣಾಲ್ ಠಾಕೂರ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಇದರಿಂದಾಗಿ ನಟ ಧನುಷ್ ಮತ್ತು ನಟಿ ಮೃಣಾಲ್ ಠಾಕೂರ್ ಇಬ್ಬರೂ ಹತ್ತಿರವಾಗುತ್ತಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿರುವುದು ನಿಜ ಎಂದು ಇಬ್ಬರನ್ನೂ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ಆದರೇ, ಇಬ್ಬರಿಗೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಹೇಳಿಕೊಳ್ಳುವ ಯಾವ ಪ್ಲ್ಯಾನ್ ಗಳು ಇಲ್ಲ. ಜೀವನದಲ್ಲಿ ಇಬ್ಬರು ಆಲೋಚನೆ, ಮೌಲ್ಯ, ಆಯ್ಕೆಗಳು ಒಂದೇ ಆಗಿವೆ ಎಂದು ಸಿನಿಮಾ ರಂಗದಲ್ಲಿ ಇಬ್ಬರನ್ನೂ ಬಲ್ಲವರು ಹೇಳಿದ್ದಾರೆ.
ಇದನ್ನೂ ಓದಿ:ರೋಚಕ ಘಟ್ಟದಲ್ಲಿ ಅಮೃತಧಾರೆ.. ಭೂಮಿಕಾ ಮುಂದೆ ಕಳಚಿ ಬಿತ್ತು ಶಕುಂತಲಾ ಮುಖವಾಡ!
ಹೀಗಾಗಿ ಮುಂದೆ ರಜನಿಕಾಂತ್ ಮಾಜಿ ಅಳಿಯ ಧನುಷ್ , ಮೃಣಾಲ್ ಠಾಕೂರ್ ಜೊತೆ ಮದುವೆಯಾಗ್ತಾರಾ ಇಲ್ಲವೇ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ