/newsfirstlive-kannada/media/media_files/2025/09/09/bhavana-ramanna-2025-09-09-07-43-45.jpg)
ದುರಾಷ್ಟವಶಾತ್ ಒಂದು ಮಗು ಉಳಿಯಲಿಲ್ಲ. ಆ ನೋವನ್ನು ಸಹಿಸುವುದು ಕಷ್ಟ ಆಗುತ್ತಿದೆ ಎಂದು ನಟಿ ಭಾವನಾ ರಾಮಯ್ಯ (Bhavana Remanna) ಕಣ್ಣೀರು ಇಟ್ಟಿದ್ದಾರೆ.
ಐವಿಎಫ್ (IVF) ಮೂಲಕ ಗರ್ಭ ಧರಿಸಿದ್ದ ಭಾವನಾ ಅವಳಿ ಮಕ್ಕಳಿಗೆ ತಾಯಿ ಆಗುವ ಸಂಭ್ರಮದಲ್ಲಿದ್ದರು. ಅವಧಿಗೂ ಮೊದಲೇ ಅವರಿಗೆ ರಕ್ತಸ್ರಾವ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 20 ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಯಿತು. ಈ ಅವಧಿಯಲ್ಲಿ ಒಂದು ಮಗು ತೀರಿಕೊಂಡಿದೆ. ಇನ್ನೊಂದು ಮಗು ಆರೋಗ್ಯವಾಗಿದೆ.
ಭಾವನಾ ರಾಮಣ್ಣರ ನೋವು..
ಇದೇ ವಿಚಾರದ ಬಗ್ಗೆ ಮಾತನಾಡಿರುವ ನಟಿ ಭಾವನಾ ರಾಮಯ್ಯ.. ಸೀಮಂತದವರೆಗೆ ಎಲ್ಲವೂ ಸರಿಯಾಗಿತ್ತು. ಆಮೇಲೆ ಹೆಚ್ಚು ಹೊತ್ತು ಕೂರಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ರಕ್ತಸ್ರಾವ ಶುರುವಾಯಿತು. ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ತೆರಳಿದ್ದೆ. ಅಲ್ಲಿನ ವೈದ್ಯರು ನಾನಿರುವ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಆ ಹೊತ್ತಿಗೆ ತಾಯಿಯಿಂದ ಮಗುವಿಗೆ ಹೋಗುವ ರಕ್ತ ಪೂರೈಕೆಯಲ್ಲೇ ಸಮಸ್ಯೆಯಾಗಿ ಪರಿಸ್ಥಿತಿ ಅಪಾಯಕರ ಸ್ಥಿತಿ ಮುಟ್ಟಿತ್ತು. ನಾನು ನೋಡುತ್ತಿರುವಂತೆಯೇ ಒಂದು ಮಗುವಿನ ಹೃದಯ ಬಡಿತ ಶೇಕಡಾ 50 ರಷ್ಟ್ಯ ಇಳಿದು ಹೋಗಿತ್ತು. ತೂಕವೂ ಇಳಿದಿತ್ತು. ಮಗುವಿನ ಆರೋಗ್ಯ ಸುಧಾರಿಸಲಿ ಅಂತಾ ಪ್ರಾರ್ಥಿಸುತ್ತಿದ್ದೇವು. ಆದರೆ ಸುಧಾರಿಸಲೇ ಇಲ್ಲ. ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪುಣ್ಯಕ್ಕೆ ಇನ್ನೊಂದು ಆರೋಗ್ಯವಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ಇನ್ನೂ ʻಸು ಫ್ರಮ್ ಸೋʼ ನೋಡಿಲ್ವಾ..? ಈ ಅವಕಾಶ ಮಿಸ್ ಮಾಡಿಕೊಳ್ಳಲೇಬೇಡಿ..!
ಮಗುವಿನ ಹೃದಯ ಬಡಿತ ಸೊನ್ನೆಯತ್ತ ಕುಸಿಯುತ್ತಿರುವುದನ್ನು ನೋಡಿದಾಗ ಆಗಿರುವ ನೋವನ್ನು ವಿವರಿಸೋದು ಕಷ್ಟ. ಮಗಳನ್ನು ಕಳೆದುಕೊಂಡ ನೋವು ಸದಾ ಕಾಡುತ್ತಿರುತ್ತದೆ. ಅವಳಿ ಮಕ್ಕಳನ್ನು ಮಡಿಲು ತುಂಬಿಕೊಳ್ಳಲು ಬಹಳ ಕಾದಿದ್ದೆ. ಈಗ ಒಂದು ಮಗುವನ್ನು ಕಳೆದುಕೊಂಡಿದ್ದಕ್ಕೆ ಅಳುವುದೋ, ಇನ್ನೊಂದು ಮಗು ಆರೋಗ್ಯವಾಗಿ ಜನಿಸಿದ್ದಕ್ಕೆ ಖುಷಿ ಪಡುವುದೋ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಅಜ್ಜಿಯ ಹೆಸರು ರುಕ್ಕಿಣೀ ಮಗಳಿಗೂ ಅದೇ ಹೆಸರನ್ನು ಇಟ್ಟಿದ್ದೇನೆ. ನನ್ನ ಮಗಳ ಪೂರ್ಣ ಹೆಸರು ರುಕ್ಕಿಣಿ ಭಾವನಾ ರಾಮಣ್ಣ. ಈಗ ಮಗಳ ಜೊತೆಗೆ ಮನೆಗೆ ಬಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಭಾವನಾ ರಾಮಣ್ಣ.. ತಾಯಿ, ಮಗು ಕ್ಷೇಮ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ