/newsfirstlive-kannada/media/media_files/2026/01/08/toxic-2026-01-08-14-00-09.jpg)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟೀಸರ್ (Toxic teaser) ವಿರುದ್ಧ ದೂರು ದಾಖಲಾಗಿದೆ. ಟೀಸರ್​ನಲ್ಲಿ ಅಶ್ಲೀಲ ಕಂಟೆಂಟ್ ಬಳಕೆ ಮಾಡಲಾಗಿದ್ದು, ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬಿರುತ್ತದೆ ಎಂದು ವಕೀಲ ಲೋಹಿತ್ ಹನುಮಪು ದೂರು ನೀಡಿದ್ದಾರೆ.
ಚಲನಚಿತ್ರ ಟೀಸರ್‌ಗಳಿಗೂ ಸಹ ಸೆನ್ಸಾರ್ ಪ್ರಮಾಣಪತ್ರ ಮತ್ತು ಮಾರ್ಗಸೂಚಿ ಕಡ್ಡಾಯ ಮಾಡಬೇಕು. ಟೀಸರ್‌ಗಳನ್ನು ಸೂಕ್ತ ಸೆನ್ಸಾರ್ ಪ್ರಮಾಣೀಕರಣವಿಲ್ಲದೇ ಬಿಡುಗಡೆ ಮಾಡುತ್ತಿರುವುದು ಅಪ್ರಾಪ್ತ ವಯಸ್ಕರು ಹಾಗೂ ಸಾರ್ವಜನಿಕ ನೈತಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ (CBFC)ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಯಶ್‌ಗೆ ಗಜ ಕೇಸರಿ ಯೋಗ, ಟಾಕ್ಸಿಕ್ ಸಾವಿರಾರು ಕೋಟಿ ಬಾಚುವುದರಲ್ಲಿ ಡೌಟು ಇಲ್ಲ ಎಂದ ಕೆ.ಮಂಜು
/filters:format(webp)/newsfirstlive-kannada/media/media_files/2026/01/08/yash-toxic-2026-01-08-10-26-17.jpg)
ಟೀಸರ್‌ನಲ್ಲಿ ತೀವ್ರ ವಯಸ್ಕ ದೃಶ್ಯಗಳಿವೆ. ಯಾವುದೇ ವಯೋಮಿತಿ ಅಥವಾ ಮುನ್ನಚ್ಚರಿಕೆ ಇಲ್ಲದೇ ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಲಭ್ಯವಾಗಿದೆ. A ಪ್ರಮಾಣ ಪತ್ರದೊಂದಿಗೆ ಬಿಡುಗಡೆ ಮಾಡುವುದು ಸೂಕ್ತ. ಪೋಷಕರ ಅನುಮತಿ ಅಥವಾ ಮುನ್ನಚ್ಚರಿಕೆ ಇಲ್ಲದೇ ಇದು ಮಕ್ಕಳಿಗೆ ಅಸಮಂಜಸವಾಗಿದೆ. ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ತಕ್ಷಣ ನಿರ್ದೇಶನ ನೀಡಿ.
ವಯಸ್ಕರ ಸ್ಪಷ್ಟ ವಿಷಯವಿರುವ ಟೀಸರ್ ತೆಗೆದುಹಾಕಲು ಅಥವಾ ಸೂಕ್ತವಾಗಿ ತಿದ್ದುಪಡಿ ಮಾಡಲು ಆದೇಶಿಸಬೇಕು. ಚಲನಚಿತ್ರಗಳಂತೆ ಟೀಸರ್ ಟ್ರೇಲರ್‌ಗಳು ಮತ್ತು ಪ್ರಚಾರ ವೀಡಿಯೊಗಳಿಗೂ ಸಹ ಸೆನ್ಸಾರ್ ಪ್ರಮಾಣೀಕರಣ ಕಡ್ಡಾಯ ಮಾಡಿ. ವಯಸ್ಕ ಅಥವಾ ಸ್ಪಷ್ಟ ವಿಷಯವಿರುವ ಟೀಸರ್‌ಗಳಿಗೆ A ಪ್ರಮಾಣಪತ್ರ ಅಥವಾ ಸ್ಪಷ್ಟ ವಯೋಮಿತಿ ಎಚ್ಚರಿಕೆ ಕಡ್ಡಾಯಗೊಳಿಸಬೇಕು. ಇಲ್ಲವಾದ್ರೆ ಸೆನ್ಸಾರ್ ಮಂಡಳಿಯ ವಿರುದ್ಧ ಭಾರೀ ಪ್ರತಿಭಟನೆ ಮಾಡಬೇಕಾಗುತ್ತದೆ ಎಚ್ಚರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us