ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ​.. ಸುದೀಪ್​ ಹೊಸ ಲುಕ್​ನ ಸಿಕ್ರೇಟ್ ಏನು..?

ಕಿಚ್ಚ ಸುದೀಪ್​ ಧರಿಸುವ ಒಂದೊಂದು ಕಾಸ್ಟ್ಯೂಮ್​ಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಬರೀ ಕಾಸ್ಟ್ಯೂಮ್ ಅಷ್ಟೇ ಅಲ್ಲದೇ ಅವರ ಹೇರ್​ ಸ್ಟೈಲ್​ಗೂ ಕೆಲವೊಂದಿಷ್ಟು ಫ್ಯಾನ್ಸ್​ ಇದ್ದಾರೆ. ಇಂತಹ ಅಭಿಮಾನಿಗಳು ಸರ್​ಪ್ರೈಸ್​ ಆಗುವಂತಹ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

author-image
Veenashree Gangani
Updated On
Kiccha Sudeep(1)
Advertisment

ಸ್ಟಾರ್​ ನಟ ಕಿಚ್ಚ ಸುದೀಪ್​ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಕಿಚ್ಚ ಸುದೀಪ್​ ಅವರ ಕಾಸ್ಟ್ಯೂಮ್ ಹಿಡಿದು ಶೂಗಳವರೆಗೂ ಫ್ಯಾನ್ಸ್​ ಫಾಲೋ ಮಾಡ್ತಾರೆ. ನೆಚ್ಚಿನ ನಟ ಯಾವ ವಾಚ್​ ಹಾಕಿದ್ದಾರೆ, ಯಾವ ಬಟ್ಟೆ ಧರಿಸಿದ್ದಾರೆ, ಬ್ರಾಂಡ್ ಶೂ ಯಾವುದು ಹೀಗೆ ಒಂದಲ್ಲಾ ಒಂದು ವಿಚಾರವನ್ನು ಫ್ಯಾನ್ಸ್​ ಗಮನಿಸುತ್ತಲೇ ಇರುತ್ತಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಸ್ಟೈಲ್​ಗೆ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿರುತ್ತಾರೆ.

Kiccha Sudeep(2)

ಕಿಚ್ಚ ಸುದೀಪ್​ ಧರಿಸುವ ಒಂದೊಂದು ಕಾಸ್ಟ್ಯೂಮ್​ಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಬರೀ ಕಾಸ್ಟ್ಯೂಮ್ ಅಷ್ಟೇ ಅಲ್ಲದೇ ಅವರ ಹೇರ್​ ಸ್ಟೈಲ್​ಗೂ ಕೆಲವೊಂದಿಷ್ಟು ಫ್ಯಾನ್ಸ್​ ಇದ್ದಾರೆ. ಇಂತಹ ಅಭಿಮಾನಿಗಳು ಸರ್​ಪ್ರೈಸ್​ ಆಗುವಂತಹ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದಿನಿಂದಲೂ ನಟ ಸುದೀಪ್ ಹೊಸ ಹೊಸ ಹೇರ್ ಸ್ಟೈಲ್​ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್​ ಆದ ನಟನ ವಿಭಿನ್ನ​ ಹೇರ್ ಸ್ಟೈಲ್​ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ.

ಇದನ್ನೂ ಓದಿ:ಅನ್ನದಾತರಿಗೆ ಶಾಕಿಂಗ್ ನ್ಯೂಸ್​.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ

Kiccha Sudeep

ಹೌದು, ಇದೇ ಮೊದಲ ಬಾರಿಗೆ ನಟ ಸುದೀಪ್ ಹೊಸ ಹೇರ್ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕಿಚ್ಚ ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಹೊಸ ಲುಕ್​ನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ, ಕಿಚ್ಚ ಸುದೀಪ್​ ಅವರು ಹೀಗೆ ಕರ್ಲಿ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಳ್ಳೋದಕ್ಕೂ ಕಾರಣ ಇದೆ. ಇನ್ನೂ ಹೆಸರಿಡದ 'ಕಿಚ್ಚ 47' ಚಿತ್ರಕ್ಕಾಗಿ ನಟ ಸುದೀಪ್​ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ವಿಜಯ್ ಕಾರ್ತಿಕ್ ನಿರ್ದೇಶನದ, ಸತ್ಯಜ್ಯೋತಿ ಫಿಲಂಸ್ ಚಿತ್ರವು ಈಗ ಶೂಟಿಂಗ್ ಹಂತದಲ್ಲಿದೆ. ಚಿತ್ರೀಕರಣ ಸೆಟ್‌ನಲ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಅವರ ಒಂದೊಂದು ಫೋಟೋಗಳು ಆಚೆ ಬರುತ್ತಿವೆ.

ಇದನ್ನೂ ಓದಿ: ಒಳ ಮೀಸಲು ಸಮೀಕ್ಷೆಯ ಬಿಗ್​ ಅಪ್​ಡೇಟ್ಸ್​.. ನ್ಯಾ.ನಾಗಮೋಹನದಾಸ್‌ ಆಯೋಗದಿಂದ

ವಿಶೇಷ ಎಂದರೆ ಈ ಚಿತ್ರದಲ್ಲಿ ಸುದೀಪ್ ಅವರು ಮುತ್ತತ್ತಿ ಸತ್ಯರಾಜು ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದು, ಇದೇ ಸಿನಿಮಾದಲ್ಲಿ ನಿಶ್ಚಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ಈ ಹಿಂದೆ ನಟ ಕಿಚ್ಚ ಸುದೀಪ್​ ಹೆಬ್ಬುಲಿ, ದಿ ವಿಲನ್, ರಾಜು ಕನ್ನಡ ಮೀಡಿಯಂ ಸಿನಿಮಾಗಳಲ್ಲಿ ವಿಭಿನ್ನ ಹೇರ್‌ಸ್ಟೈಲ್ ಲುಕ್ಕಿನಿಂದ ಗಮನ ಸೆಳೆದಿದ್ದರು. ಅದರಲ್ಲೂ ಹೆಬ್ಬುಲಿ ಸಿನಿಮಾದಲ್ಲಿ ಮಾಡಿದ್ದ ಹೇರ್​ ಸ್ಟೈಲ್​  ಸಖತ್ ಫೇಮಸ್​ ಆಗಿತ್ತು. ಈಗ ಕರ್ಲಿ ಹೇರ್ ಸ್ಟೈಲ್ ಮೂಲಕ ಮತ್ತೆ ಹೊಸ ಸಂಚಲನ ಮೂಡಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep
Advertisment