Advertisment

ಡೆವಿಲ್‌ ದಾಖಲೆ ಉಡೀಸ್‌ ಮಾಡಿದ ಮಾರ್ಕ್‌.. ಫ್ಯಾನ್ಸ್‌ ನಡುವೆ ವಾರ್‌..!

ದುರಾದೃಷ್ಟ ಅಂದ್ರೆ ಯಾವುದೇ ಇಂಡಸ್ಟ್ರಿಯಲ್ಲಿ ಯಾವುದೇ ಎರಡು ದೊಡ್ಡ ಹೀರೋಗಳ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ ಫ್ಯಾನ್ಸ್‌ ವಾರ್‌ ಹುಟ್ಟಿಕೊಳ್ಳುತ್ತೆ. ಇದೀಗ ಕಿಚ್ಚನ ಮಾರ್ಕ್‌, ದರ್ಶನ್‌ ಡೆವಿಲ್‌ ಸಿನಿಮಾ ಬೇರೆ ಬೇರೆ ದಿನದಂದು ರಿಲೀಸ್‌ ಆಗ್ತಾ ಇದ್ರೂ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹತ್ತಿಕೊಂಡಿದೆ.

author-image
Ganesh Kerekuli
Devil vs Mark
Advertisment
  • ಡೆವಿಲ್​-ಮಾರ್ಕ್​ ಮಧ್ಯೆ ವೀವ್ಸ್​ ಗುದ್ದಾಟ.. ಫ್ಯಾನ್ಸ್​ ಏನಂದ್ರು?
  • ದರ್ಶನ್‌ ಡೆವಿಲ್‌ ದಾಖಲೆ ಉಡೀಸ್‌ ಮಾಡಿದ ಕಿಚ್ಚನ ಮಾರ್ಕ್‌!
  • ಯಾವ ಟ್ರೈಲರ್‌ಗೆ ಎಷ್ಟು ವೀವ್ಸ್‌.. ಫ್ಯಾನ್ಸ್‌ ಹೇಳೋದೇನು?

ದೊಡ್ಡ ಸ್ಟಾರ್‌ಗಳ ಸಿನಿಮಾ ಬರ್ತಾ ಇದೆ ಅಂದ್ರೆ ಸಿನಿ ಪ್ರೇಮಿಗಳ ಕಿವಿ ನೆಟ್ಟಗಾಗುತ್ತೆ. ಅದ್ರಲ್ಲಿಯೂ ಕಿಚ್ಚ ಸುದೀಪ್‌, ದರ್ಶನ್‌, ಶಿವಣ್ಣ, ಉಪೇಂದ್ರ ಸಿನಿಮಾ ಅಂದ್ರೆ ಕೇಳ್ಬೇಕಾ? ಖಂಡಿತ ಫ್ಯಾನ್ಸ್‌ ತುದಿಗಾಲ ಮೇಲೆ ನಿಂತಿರ್ತಾರೆ. ದುರಾದೃಷ್ಟ ಅಂದ್ರೆ ಯಾವುದೇ ಇಂಡಸ್ಟ್ರಿಯಲ್ಲಿ ಯಾವುದೇ ಎರಡು ದೊಡ್ಡ ಹೀರೋಗಳ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ ಫ್ಯಾನ್ಸ್‌ ವಾರ್‌ ಹುಟ್ಟಿಕೊಳ್ಳುತ್ತೆ. ಇದೀಗ ಕಿಚ್ಚನ ಮಾರ್ಕ್‌, ದರ್ಶನ್‌ ಡೆವಿಲ್‌ ಸಿನಿಮಾ ಬೇರೆ ಬೇರೆ ದಿನದಂದು ರಿಲೀಸ್‌ ಆಗ್ತಾ ಇದ್ರೂ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹತ್ತಿಕೊಂಡಿದೆ.

Advertisment

ರಿಲೀಸ್‌ ಡೇಟ್‌!

  • ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ಡಿ.11ಕ್ಕೆ
  • ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಡಿ.25ಕ್ಕೆ
  • ಶಿವಣ್ಣ, ಉಪೇಂದ್ರ ಆಭಿನಯದ 45 ಸಿನಿಮಾ ಡಿ.25ಕ್ಕೆ

ಒಂದೇ ದಿನದಲ್ಲಿ ಮಾರ್ಕ್‌, 45 ಸಿನಿಮಾ ಥಿಯೇಟರ್‌ಗೆ!

ಸಾಮಾನ್ಯವಾಗಿ ಒಂದೇ ದಿನದಲ್ಲಿ ಇಲ್ಲವೇ, ಎರಡ್ಮೂರು ದಿನದ ಹಿಂದೆ ಮುಂದೆ ಎರಡು ಬಿಗ್‌ ಸ್ಟಾರ್‌ಗಳ ಸಿನಿಮಾ ರಿಲೀಸ್‌ ಆಗ್ತಾವೇ ಅಂದ್ರೆ ಫ್ಯಾನ್ಸ್‌ ವಾರ್‌ ಶುರುವಾಗೋದು ಪಕ್ಕಾ. ಅದು ಸ್ಯಾಂಡಲ್‌ವುಂಡ್‌ ಅಂತ ಅಲ್ಲ.. ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌.. ಯಾವುದೇ ಇಂಡಸ್ಟ್ರಿಯಲ್ಲಿ ಆದ್ರೂ ಅದೊಂದ್‌ ರೀತಿಯಲ್ಲಿ ಕಾಮನ್‌. ಅಭಿಮಾನಿಗಳಿಗೇ ತಮ್ಮ ಹೀರೋ ಸಿನಿಮಾನೇ ಗೆಲ್ಬೇಕು? ತಮ್ಮ ಹೀರೋ ಸಿನಿಮಾನೇ ಬಾಕ್ಸ್‌ ಆಫೀಸ್‌ನಲ್ಲಿ ರೆಕಾರ್ಟ್‌ ಮಾಡ್ಬೇಕು ಅನ್ನೋದ್‌ ಇರುತ್ತೆ.

ಇದನ್ನೂ ಓದಿ: ವಿಶ್ವದ ಶ್ರೀಮಂತ​ ಲೀಗ್​ನ ಶಾಕಿಂಗ್​ ಸುದ್ದಿ ರಿವೀಲ್​.. ಆರ್​​ಸಿಬಿಗೂ ಆಘಾತ..!

Advertisment

Devil vs Mark (1)

ಆ ದೃಷ್ಟಿಯಲ್ಲಿ ನೋಡ್ತಾ ಹೋದ್ರೆ ಒಂದೇ ದಿನದಲ್ಲಿ ತೆರೆಗೆ ಬರ್ತಾ ಇರೋ ಮಾರ್ಕ್‌ ಸಿನಿಮಾ ಫ್ಯಾನ್ಸ್‌ಗೂ? 45 ಸಿನಿಮಾ ಫ್ಯಾನ್ಸ್‌ಗೂ ವಾರ್‌ ಶುರುವಾಗ್ಬೇಕಾಗಿತ್ತು. 14 ದಿನದ ಅಂತರದಲ್ಲಿ ಬಿಡುಗಡೆಯಾಗ್ತಿರೋ ಡೆವಿಲ್‌ ಫ್ಯಾನ್ಸ್‌ಗೂ? ಮಾರ್ಕ್‌ ಫ್ಯಾನ್ಸ್‌ಗೂ? ಸೋಷಿಯಲ್‌ ಮಾಡಿಯಾದಲ್ಲಿ ಯುದ್ಧ ಶುರುವಾಗಿದೆ.. ತಮ್ಮ ಹೀರೋ ಸಿನಿಮಾನೇ ರೆಕಾರ್ಡ್‌ ಮಾಡೋದು ಅಂತ ಭಿಮಾನದಿಂದ ಹೇಳ್ಕೊಳ್ತಿದ್ದಾರೆ.

ಡೆವಿಲ್‌ ದಾಖಲೆ ಉಡೀಸ್‌ ಮಾಡಿದ ಮಾರ್ಕ್‌!

ಯಾವುದೇ ಸಿನಿಮಾ ಗಮನ ಸೆಳೆಯೋದು ಟ್ರೈಲರ್‌ನಿಂದ. ಅದ್ರಲ್ಲಿಯೂ ಬಿಗ್‌ ಸ್ಟಾರ್‌ಗಳ ಸಿನಿಮಾದ ಟ್ರೈಲರ್‌ ಅಂದ್ರೆ ಸಿನಿ ಪ್ರೇಮಿಗಳು ಭಾರೀ ಕುತೂಹಲದಿಂದ ಕಾಯ್ತಾ ಇರ್ತಾರೆ. ಅದ್ರಲ್ಲಿಯೂ ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಸಿನಿಮಾ ಅಂದ್ರೆ ಕೇಳ್ಬೇಕಾ? ಖಂಡಿತ ಅಭಿಮಾನಿಗಳಿಗೆ ಹಬ್ಬ. ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಟ್ರೈಲರ್‌ ಡಿಸೆಂಬರ್‌ 5 ರಂದು ಬಿಡುಗಡೆಯಾಗಿತ್ತು. ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾದ ಟ್ರೈಲರ್‌ ಡಿಸೆಂಬರ್‌ 7ಕ್ಕೆ ಬಿಡುಗಡೆಯಾಗಿತ್ತು. ಸದ್ಯಕ್ಕೆ ಡೆವಿಲ್‌ ನಾಲ್ಕು ದಿನದಲ್ಲಿ ಯುಟ್ಯೂಬ್‌ನಲ್ಲಿ 12 ಲಕ್ಷಕ್ಕೂ ಹೆಚ್ಚಿನ ವೀವ್ಸ್‌ ಗಳಿಸಿದ್ರೆ, ಮಾರ್ಕ್‌ ಸಿನಿಮಾ ಯೂಟ್ಯೂಬರ್‌ನಲ್ಲಿ ಕನ್ನಡದಲ್ಲಿ 14 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ. ಹಾಗೇ ತೆಲುಗು, ತಮಿಳು ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿಯೂ ಮಾರ್ಕ್‌ ಟ್ರೈಲರ್‌ ಬಿಡುಗಡೆಯಾಗಿದ್ದೂ ಅಲ್ಲಿಯೂ ಅದ್ಭುತ ವೀವ್ಸ್‌ ಬರ್ತಿದೆ. 

ಇದನ್ನೂ ಓದಿ:ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್..!

ಈ ವಿಚಾರದಲ್ಲಿ ದರ್ಶನ್‌ ಫ್ಯಾನ್ಸ್‌ಗೂ? ಸುದೀಪ್‌ ಫ್ಯಾನ್ಸ್‌ಗೂ? ವಾರ್‌ ಶುರುವಾಗಿದೆ ಅಂದ್ರೆ ಖಂಡಿತ ತಪ್ಪಾಗದು. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹೀರೋ ಟ್ರೈಲರ್‌ ದಾಖಲೆ ಮಾಡಿದೆ ಅಂತ ಸುದೀಪ್‌ ಅಭಿಮಾನಿಗಳು ಪೋಸ್ಟ್‌ ಹಾಕ್ತಿದ್ದಾರೆ. ಹಾಗೇ ದರ್ಶನ್‌ ಅಭಿಮಾನಿಗಳು ಅದೆಲ್ಲ ಫೇರ್‌ ವ್ಯೂವ್ಸ್‌ ಅಂತ ಕಾಮೆಂಟ್‌ ಮಾಡ್ತಿದ್ದಾರೆ.

Advertisment

ಅಭಿಮಾನಿಗಳ ವಾದ ಪ್ರತಿವಾದ ಏನೇ ಇರ್ಲಿ.. ಆದ್ರೆ ಎರಡೂ ಕನ್ನಡದ ಸಿನಿಮಾಗಳು.. ಎರಡೂ ಸಿನಿಮಾ ಗೆಲ್ಬೇಕು ಅನ್ನೋದ್‌ ಕನ್ನಡಿಗರ ಆಶಯ. ಅಷ್ಟಕ್ಕೂ ಈ ಎರಡು ಸಿನಿಮಾಗಳ ಸಕ್ಸಸ್‌ ಆಯಾ ಹೀರೋಗಳ ಪಾಲಿಗೆ ಅದೆಷ್ಟು ಮಹತ್ವದ್ದು?

Advertisment
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Devil Movie darshan devil film Devil trailer Mark Movie
Advertisment
Advertisment
Advertisment