/newsfirstlive-kannada/media/media_files/2025/08/03/vasuki-vaibhav-2025-08-03-13-23-36.jpg)
ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಡ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಅವರು ಗುಡ್ನ್ಯೂಸ್ ಕೊಟ್ಟಿದ್ದರು. ಇದೀಗ ಸಿಂಗರ್ ವಾಸುಕಿ ವೈಭವ್ ಮನೆಯಲ್ಲಿ ಇಂದು ಎರಡೆರಡು ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ:ಶ್ವೇತ ಬಣ್ಣದ ಉಡುಪಿನಲ್ಲಿ ಮಿಂಚಿದ ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾ ನಾಗ್.. ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ!
ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವನ್ನು ವಾಸುಕಿ ವೈಭವ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದರು. ವಿಶೇಷ ಎಂದರೆ ತಾಯಂದಿರ ದಿನದಂದೇ ಗಾಯಕ ವಾಸುಕಿ ವೈಭವ್ ಅವರು ಗುಡ್ನ್ಯೂಸ್ ಕೊಟ್ಟಿದ್ದರು.
ಇನ್ನೂ, ಇಂದು ವಾಸುಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರ ಹುಟ್ಟು ಹಬ್ಬ. ಮತ್ತು ಇಂದು ಸ್ನೇಹಿತರ ದಿನಾಚರಣೆ ಇದೆ. ಹೀಗಾಗಿ ಸ್ಟಾರ್ ದಂಪತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೇ ಪತ್ನಿ ಹುಟ್ಟು ಹಬ್ಬದ ನಿಮಿತ್ತ ವಾಸುಕಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪತ್ನಿಯ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ‘‘ಹುಟ್ಟುಹಬ್ಬದ ಶುಭಾಶಯಗಳು ಹೆಂಡ್ತಿ.. ಇಂದು ಸ್ನೇಹಿತರ ದಿನವೂ ಹೌದು. ಈ ಹುಟ್ಟುಹಬ್ಬವು ವಿಶೇಷವಾದದ್ದು’’ ಅಂತ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ ನೀಡಲಾಗಿದೆ.. ರಾತ್ರಿಯೆಲ್ಲ ಕಣ್ಣೀರಿಟ್ಟ ಮಾಜಿ ಸಂಸದ..!
ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಮೊದಲು ಸ್ನೇಹಿತರಾಗಿದ್ದರು. ವಾಸುಕಿ ಮತ್ತು ಬೃಂದಾ ಪರಿಚಯ ಬೆಳೆದಿದ್ದು ಸಹ ಇದೇ ರಂಗಭೂಮಿಯಲ್ಲಿ. ವಾಸುಕಿ ವೈಭವ್ ತಮ್ಮ ಜರ್ನಿ ಆರಂಭಿಸಿದ್ದೇ ರಂಗಭೂಮಿಯಲ್ಲಿ. ಬೃಂದಾ ಜೊತೆ ವಾಸುಕಿ ಸಹ ಹಲವು ನಾಟಕಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಬೃಂದಾ ನಟಿಸಿರುವ ನಾಟಕಗಳಿಗೆ ಮ್ಯೂಸಿಕ್ ಸಹ ಕೊಟ್ಟಿದ್ದಾರೆ. ಆಗಿಂದಲೂ ಇಬ್ಬರು ನಡುವೆ ಒಳ್ಳೆಯ ಒಡನಾಟ ಬೆಳೆದು, ಅದು ಮದುವೆಗೆ ತಿರುಗಿ ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.
ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು 2023 ನವೆಂಬರ್ 16ರಂದು ಗುರು-ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ವಾಸುಕಿ ವೈಭವ್ ಪತ್ನಿ ಬೃಂದಾ ಅವರು ಮೂಲತಃ ರಂಗಭೂಮಿ ಕಲಾವಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ಸ್ಟೇಜ್ಗಳಲ್ಲಿ ಶೋ ಪರ್ಫಾಮ್ ಮಾಡಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕೆಲಸ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ