/newsfirstlive-kannada/media/media_files/2025/08/03/prajwal-revanna-jail-1-2025-08-03-09-53-07.jpg)
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಇಂದು ಬೆಳಗ್ಗೆ 15528 ಸಂಖ್ಯೆಯ ಸಜಾಬಂಧಿ ನಂಬರ್ ನೀಡಿದ್ದಾರೆ. ಇನ್ನು ರಾತ್ರಿ ವೈದ್ಯರು ಆರೋಗ್ಯ ತಪಾಸಣೆಗೆ ಬಂದಿದ್ದರು, ಆಗ ಪ್ರಜ್ವಲ್, ಕಣ್ಣೀರು ಇಟ್ಟಿದ್ದಾರೆ.
ಸಿಬ್ಬಂದಿ ಬಳಿಯೂ ನೋವು ತೋಡಿಕೊಂಡಿರುವ ಪ್ರಜ್ವಲ್, ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಜೈಲಿನ ವಿಶೇಷ ಭದ್ರತಾ ಕೊಠಡಿಯಲ್ಲಿದ್ದಾರೆ. ಜೊತೆಗೆ ಜೈಲಿನ ಡ್ರೆಸ್ ಕೋಡ್ ಕೂಡ ಇವರಿಗೆ ಅನ್ವಯ ಆಗಲಿದೆ. ಅಂದರೆ ಸಜಾ ಕೈದಿಗೆ ನೀಡಲಿರುವ ಬಟ್ಟೆಯನ್ನ ಪ್ರಜ್ವಲ್ ರೇವಣ್ಣ ಧರಿಸಬೇಕಾಗಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಶಿಕ್ಷೆ; BSY, ಅಶೋಕ್, ಸಿಟಿ ರವಿ ಯಾಕೆ ಮಾತಾಡ್ತಿಲ್ಲ?- ಡಿ.ಕೆ ಶಿವಕುಮಾರ್
ಹೇಗಿರುತ್ತೆ ಕೈದಿ ಜೀವನ..?
ಶಿಕ್ಷೆ ಜಾರಿ ಆಗಿದ್ರಿಂದ ವಿಚಾರಣಾಧೀನ ಕೈದಿ ಆಗಿರದೆ ಜೈಲಿನಲ್ಲಿ ಸಜಾ ಕೈದಿಯಾಗಿ ಕಾಲ ಕಳೆಯಬೇಕು. ಜೈಲಿನ ಸಮವಸ್ತ್ರವಾದ ಬಿಳಿ ಬಟ್ಟೆ ಮೈಗೆ ಬೀಳಲಿದೆ. ಜೈಲಿನಲ್ಲಿ ಸಜೆ ಕೈದಿ ನಂಬರ್ ನೀಡಲಾಗುತ್ತೆ. ಅಲ್ಲದೆ, 8 ಗಂಟೆ ಮೈಬಗ್ಗಿಸಿ ದುಡಿಯಲು ಕೆಲಸ ನೀಡಲಾಗುತ್ತೆ. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು. ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆಗೆ ಅವಕಾಶ ಇದೆ.
ಜೈಲಿನಲ್ಲಿ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ಜೈಲಿನ ಸಂಬಳ ಪಾವತಿ ಆಗಲಿದೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ಸಿಗಲಿದೆ. ಆಮೇಲೆ ಅರೆಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ಆಗಲಿದೆ. ಕೈದಿಗಳಿಗೆ ನೀಡುವ ಕೂಲಿ ಹಣವನ್ನ ಬ್ಯಾಂಕ್ ಖಾತೆಗೆ ಪಾವತಿ ಮಾಡ್ತಾರೆ.
ಇದನ್ನೂ ಓದಿ: ಪ್ರಜ್ವಲ್ ಜೈಲು ಜೀವನ ಆರಂಭ.. ಕಾನೂನು ಹೋರಾಟಕ್ಕೆ ಇದೆಯಾ ಅವಕಾಶ..?
ಸದ್ಯ ಇರುವ ವಿಶೇಷ ಭದ್ರತಾ ಕೊಠಡಿಯಲ್ಲಿ ವಾಸದ ಅವಕಾಶ ಇದೆ. ಅದೂ ಕಂಟಿನ್ಯೂ ಮಾಡಬಹುದು. ಸದ್ಯ ಶಿಕ್ಷೆ ಜಾರಿಯಾದ ಬಳಿಕ ಜೈಲಿನಲ್ಲಿ ಬೇಜರದ ದಿನಗಳಂತು ಜಾರಿ ಆಗಿವೆ. ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಮಾನ ಕೊಟ್ಟ ಕೋರ್ಟ್ ನಿನ್ನೆ, ಶಿಕ್ಷೆಯ ಪ್ರಮಾಣದ ಬೇಡಿ ಹಾಕಿದೆ. ಮನೆಗೆಲಸದಾಕೆ ಮೇಲು ಹದ್ದಿನಂತೆ ಮುಕ್ಕಿದ ಕೇಸ್ನಲ್ಲಿ ಜೈಲುವಾಸದಲ್ಲೇ ಜೀವನ ಕಳೆಯುವ ಘನ ಘೋರ ಶಿಕ್ಷೆ ವಿಧಿಸಿದೆ. ಜೊತೆಗೆ 11 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ