/newsfirstlive-kannada/media/media_files/2025/08/03/prajwal-revanna-jail-2-2025-08-03-07-50-55.jpg)
ಕೋರ್ಟ್ಗಳ ಮೇಲೆ ಒಮ್ಮೊಮ್ಮೆ ವಿಶ್ವಾಸ ಮೂಡೋದೇ ಇದೇ ಕಾರಣಕ್ಕೆ.. ಇಡೀ ವ್ಯವಸ್ಥೆ ತಿರುಗಿಬಿದ್ದಾಗ ಅಂತಿಮವಾಗಿ ಕಣ್ಣಿಗೆ ಕಾಣೋದೇ ಕೋರ್ಟ್.. ಈಗ ಹಾಸನದ ಕೇಸ್ನ್ನೇ ನೋಡಿ, ಅದೆಷ್ಟೆ ದೊಡ್ಡವರು, ದೊಡ್ಡ ಮನೆತನವಿದ್ರೂ ಕೋರ್ಟ್ಗೆ ಯಾವುದೇ ಹಂಗಿಲ್ಲ ಅನ್ನೋದು ನಿನ್ನೆಯ ತೀರ್ಪು ಸಾರಿದೆ.. ಹಾಗಾದ್ರೆ, ಈ ತೀರ್ಪು ಅಂತಿಮನಾ? ಕಾನೂನು ಅವಕಾಶಗಳೇ ಇಲ್ವಾ? ಇನ್ಮುಂದಿನ ಜೈಲ್ ಡೈರಿ ಹೇಗಿರಲಿದೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ಕಾನೂನಿಗಿಂತ ದೊಡ್ಡವರಿಲ್ಲ.. ಅಧಿಕೃತ ಜೈಲು ಜೀವನ ಶುರು!
ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಮಾನ ಕೊಟ್ಟ ಕೋರ್ಟ್ ನಿನ್ನೆ, ಶಿಕ್ಷೆಯ ಪ್ರಮಾಣದ ಬೇಡಿ ಹಾಕಿದೆ. ಮನೆಗೆಲಸದಾಕೆ ಮೇಲು ಹದ್ದಿನಂತೆ ಮುಕ್ಕಿದ ಕೇಸ್ನಲ್ಲಿ ಜೈಲುವಾಸದಲ್ಲೇ ಜೀವನ ಕಳೆಯುವ ಘನ ಘೋರ ಶಿಕ್ಷೆ ವಿಧಿಸಿದೆ. ಜೊತೆಗೆ 11 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿದೆ. ಈ ಮೂಲಕ ಸಮಾಜದಲ್ಲಿ ಅದೆಷ್ಟೇ ದೊಡ್ಡವರಿದ್ರೂ ಕಾನೂನಿಗಿಂತ ಚಿಕ್ಕವರು ಅನ್ನೋ ಸಂದೇಶ ನೀಡಿದೆ. ಇಷ್ಟಕ್ಕೆ ಮಗೀತಾ? ಕಾನೂನು ಮೆಟ್ಟಿಲುಗಳೇ ಅಂತ್ಯ ಆಯ್ತಾ? ಆದ್ರೆ ಕಾನೂನು ಅಷ್ಟು ನಿಷ್ಕರುಣಿಯಲ್ಲಿ ಅದಕ್ಕೂ ನ್ಯಾಯದ ಕೆಲ ಆಯ್ಕೆಗಳಿವೆ.
ಕಾನೂನು ಹೋರಾಟಕ್ಕಿದ್ಯಾ ಅವಕಾಶ?
- ಸಾಧ್ಯತೆ 1 : ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ
- ಸಾಧ್ಯತೆ 2 : ಜನಪ್ರತಿನಿಧಿಗಳ ಕೋರ್ಟ್ನ ತೀರ್ಪು ರದ್ದು ಮಾಡುವಂತೆ ಮನವಿ
- ಸಾಧ್ಯತೆ 3 : ಮೇಲ್ಮನವಿ ವಿಚಾರಣೆ ಮುಗಿಯೋ ತನಕ ತೀರ್ಪಿಗೆ ತಡೆಯಾಜ್ಞೆ
- ಸಾಧ್ಯತೆ 4 : ಜನಪ್ರತಿನಿಧಿಗಳ ಕೋರ್ಟ್ ನೀಡಿದ ಶಿಕ್ಷೆ ಅಮಾನತ್ತಿನಲ್ಲಿಡಬಹುದು
- ಸಾಧ್ಯತೆ 5 : ಜನಪ್ರತಿನಿಧಿಗಳ ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದ್ರೆ ಸೇಫ್
- ಸಾಧ್ಯತೆ 6 : ಆದ್ರೆ, ಇನ್ನೂ ಬಾಕಿ ಇರುವ 3 ಕೇಸ್ಗಳಲ್ಲಿ ಜೈಲು ವಾಸ ಕಂಟಿನ್ಯೂ
- ಸಾಧ್ಯತೆ 7 : ಆ ಮೂರು ಕೇಸ್ಗಳ ತೀರ್ಪು ಬಂದು, ನಿರಪರಾಧಿಯಾದ್ರೆ ರಿಲೀಫ್
- ಸಾಧ್ಯತೆ 8 : ಒಂದು ಕೇಸ್ನಲ್ಲಿ ವಿಧಿಸಲಾದ ಶಿಕ್ಷೆಯನ್ನ ಎತ್ತಿ ಹಿಡಿದ್ರೆ ದಿ ಎಂಡ್
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ವಿರುದ್ಧ ಎಷ್ಟು ಸಾಕ್ಷ್ಯಗಳಿದ್ದವು.. ಸರ್ಕಾರಿ ಅಭಿಯೋಜಕರು, ವಕೀಲರು ಯಾರು ಯಾರು?
ಹೇಗಿರಲಿದೆ ಜೈಲು ಜೀವನ?
ಶಿಕ್ಷೆ ಜಾರಿ ಆಗಿದ್ರಿಂದ ವಿಚಾರಣಾಧೀನ ಕೈದಿ ಆಗಿರದೆ ಜೈಲಿನಲ್ಲಿ ಸಜಾ ಕೈದಿಯಾಗಿ ಕಾಲ ಕಳೆಯಬೇಕು. ಜೈಲಿನ ಸಮವಸ್ತ್ರವಾದ ಬಿಳಿ ಬಟ್ಟೆ ಮೈಗೆ ಬೀಳಲಿದೆ. ಜೈಲಿನಲ್ಲಿ ಸಜೆ ಕೈದಿ ನಂಬರ್ ನೀಡಲಾಗುತ್ತೆ. ಅಲ್ಲದೆ, 8 ಗಂಟೆ ಮೈಬಗ್ಗಿಸಿ ದುಡಿಯಲು ಕೆಲಸ ನೀಡಲಾಗುತ್ತೆ. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು. ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆಗೆ ಅವಕಾಶ ಇದೆ.
ಜೈಲಿನಲ್ಲಿ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ಜೈಲಿನ ಸಂಬಳ ಪಾವತಿ ಆಗಲಿದೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ಸಿಗಲಿದೆ. ಆಮೇಲೆ ಅರೆಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ಆಗಲಿದೆ. ಕೈದಿಗಳಿಗೆ ನೀಡುವ ಕೂಲಿ ಹಣವನ್ನ ಬ್ಯಾಂಕ್ ಖಾತೆಗೆ ಪಾವತಿ ಮಾಡ್ತಾರೆ.
ಇದನ್ನೂ ಓದಿ:ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಮತ್ತೊಂದು ಆರೋಪ; ಸಾಕ್ಷಿ ಕೇಳಿದ ಬಿಜೆಪಿ..!
ಸದ್ಯ ಇರುವ ವಿಶೇಷ ಭದ್ರತಾ ಕೊಠಡಿಯಲ್ಲಿ ವಾಸದ ಅವಕಾಶ ಇದೆ. ಅದೂ ಕಂಟಿನ್ಯೂ ಮಾಡಬಹುದು. ಸದ್ಯ ಶಿಕ್ಷೆ ಜಾರಿಯಾದ ಬಳಿಕ ಜೈಲಿನಲ್ಲಿ ಬೇಜರದ ದಿನಗಳಂತು ಜಾರಿ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ