/newsfirstlive-kannada/media/media_files/2025/08/03/rahul-gandhi-lok-sabha-election-2025-08-03-07-01-16.jpg)
ರಾಹುಲ್ ಗಾಂಧಿ
ಬಿಹಾರ ಕದನದ ಕಿಚ್ಚಿಗೆ ಕರ್ನಾಟಕದ ಹೋರಾಟ ತುಪ್ಪ ಸುರಿಯಲಿದೆ.. 2024ರ ಲೋಕಸಭಾ ಎಲೆಕ್ಷನ್​​ನಲ್ಲಿ ಹಸ್ತ ಸೋತ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಮಾತ್ನಾಡಿದ ರಾಹುಲ್​ ಗಾಂಧಿ 70 ರಿಂದ 100 ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಅಂತ ಆರೋಪಿಸಿದ್ದಾರೆ.
ಲೋಕಸಭಾ ಎಲೆಕ್ಷನ್​​​ ವೇಳೆ 70-100 ಕ್ಷೇತ್ರಗಳಲ್ಲಿ ಮತಕಳ್ಳತನ!
2014ರ ಮೋದಿ ತವರು ಗುಜರಾತ್​​​ನ ಚುನಾವಣೆಯಲ್ಲಿ ನೀಡಿದ ಪ್ರಬಲ ಪೈಪೋಟಿ ನೆನೆದ ರಾಹುಲ್​​​, ಚುನಾವಣೆಯ ಪ್ರಕ್ರಿಯೆಯಲ್ಲಿ ತಪ್ಪಾಗಿದೆ ಅನ್ನೋ ಅನುಮಾನ ಇತ್ತು. ಪುರಾವೆಗಳು ಸಿಕ್ಕಿರಲಿಲ್ಲ.. ಆದ್ರೀಗ 100 ಪರ್ಸೆಂಟ್​​​ ಸಾಕ್ಷಿ ಇದೆ.. ಅದು ಬಹಿರಂಗವಾದ್ರೆ ಅಣು ಬಾಂಬ್ ಬೀಳಿಸಿದಂತೆ.. 2024ರ ಎಲೆಕ್ಷನ್​​​ನಲ್ಲಿ ಅಕ್ರಮ ನಡೆದ ಕ್ಷೇತ್ರಗಳು 70-80-100ಕ್ಕೆ ಹತ್ತಿರವಿದೆ ಅಂತ ಸಂಶಯಿಸಿದ್ದಾರೆ.
10-15 ಕ್ಷೇತ್ರಗಳು ರಿಗ್​ ಆಗಿರದೇ ಹೋಗಿದ್ರೆ ಭಾರತದ ಪ್ರಧಾನಿ ಅತ್ಯಂತ ಕಡಿಮೆ ಬಹುಮತ ಹೊಂದಿದ ಪ್ರಧಾನಿ ಆಗ್ತಿದ್ರು. ನನ್ನ ಅಂದಾಜಿನ ಪ್ರಕಾರ ಆ ಸಂಖ್ಯೆ 70, 80, 100 ಹತ್ತಿರವಾಗಿದೆ. ಈ 15 ಕ್ಷೇತ್ರಗಳು ರಿಗ್​ ಆಗಿದ್ದರೂ ಅವರು ಈ ದೇಶದ ಪ್ರಧಾನಿ ಆಗ್ತಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೇಗೆಲ್ಲಾ ಅಕ್ರಮ ನಡೆದಿದೆ ಅನ್ನೋದಕ್ಕೆ ಇದರಲ್ಲಿ ಯಾವುದೇ ಸಂಶಯವೇ ಬೇಡ - ರಾಹುಲ್​ ಗಾಂಧಿ, ಲೋಕಸಭಾ ವಿಪಕ್ಷ ನಾಯಕ
ಇದಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿರುಗೇಟು ಕೊಟ್ಟಿದ್ದು, ರಾಹುಲ್ ಗಾಂಧಿ ಬಳಿ ಆಟಂ ಬಾಂಬ್ ಇದ್ದರೆ ಈ ಕೂಡಲೇ ಸ್ಫೋಟಿಸಲಿ ಅಂತ ಟಾಂಗ್​​​ ಕೊಟ್ಟಿದ್ದಾರೆ..
ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ವಿರುದ್ಧ ಎಷ್ಟು ಸಾಕ್ಷ್ಯಗಳಿದ್ದವು.. ಸರ್ಕಾರಿ ಅಭಿಯೋಜಕರು, ವಕೀಲರು ಯಾರು ಯಾರು?
ರಾಹುಲ್​ ಗಾಂಧಿ ಅವರಿಗೆ ವಿನಮ್ರತೆಯಿಂದ ಹೇಳಲು ಬಯಸೋದು ಒಂದೆ. ಒಂದ್ವೇಳೆ ನಿಮ್ಮ ಹತ್ತಿರ ಸಾಕ್ಷಿಗಳ ಅಟಂ ಬಾಂಬ್​ ಇದೆ ಅಂದ್ರೆ ಅದರ ಪರೀಕ್ಷೆ ಕೂಡಲೇ ಆಗಬೇಕು. ಟೆಸ್ಟ್​ ಶೀಘ್ರ ಆಗಬೇಕು. ಎಲ್ಲಾ ಸಾಕ್ಷಿಗಳನ್ನ ಜನರ ಮುಂದಿಡಬೇಕು. ಆದ್ರೆ ಸತ್ಯ ಏನೆಂದರೆ ಅವರ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಜವಾಬ್ದಾರಿ ಇಲ್ಲದ ಹೇಳಿಕೆ ನೀಡೋದು ಅವರ ಹಳೆಯ ಅಭ್ಯಾಸವಾಗಿದೆ- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ
ಚುನಾವಣೆಯಲ್ಲಿ ಹೀನಾಯ ಸೋಲನ್ನು ಮರೆಮಾಚಲು ರಾಹುಲ್ ಗಾಂಧಿ ಹತಾಶ ಯತ್ನ ಮಾಡ್ತಿದ್ದಾರೆ ಅಂತ ಬಿಜೆಪಿ ಟೀಕಿಸಿದೆ.. ಚುನಾವಣಾ ಅಕ್ರಮದ ಆರೋಪಗಳಿಗೆ 100% ಪುರಾವೆ ಇದ್ದರೆ, ಬೀದಿ ನಾಟಕದ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ. ನಾಡಿದ್ದು ಬೆಂಗಳೂರಿಗೆ ಆಗಮಿಸ್ತಿರುವ ರಾಹುಲ್​, ಸಾಕ್ಷಿಗಳನ್ನ ನೀಡ್ತಾರ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರಜ್ವಲ್​ ರೇವಣ್ಣಗೆ ಶಿಕ್ಷೆ; BSY, ಅಶೋಕ್, ಸಿಟಿ ರವಿ ಯಾಕೆ ಮಾತಾಡ್ತಿಲ್ಲ?- ಡಿ.ಕೆ ಶಿವಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us