/newsfirstlive-kannada/media/media_files/2025/10/24/shrikanth-2025-10-24-11-53-57.jpg)
ಚೆನ್ನೈ: ತಮಿಳು ನಟ ಕೆ.ಶ್ರೀಕಾಂತ್ ಹಾಗೂ ಕೃಷ್ಣ ಕುಮಾರ್​ಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಕೊಕೇನ್ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಗೆ ಇಡಿ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ.
ತಮಿಳು ನಟರಿಗೆ ಇಡಿ ಸಂಕಷ್ಟ..!
ಕೊಕೇನ್ ಪೆಡಿಂಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ. ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕೆ ಶ್ರೀಕಾಂತ್ ಮತ್ತು ಕೃಷ್ಣ ಕುಮಾರ್​ಗೆ ನುಂಗಂಬಾಕ್ಕಂನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್​ ಮೂಲಕ ಸೂಚಿಸಿದ್ದಾರೆ.
ಇದನ್ನೂ ಓದಿ: ಕಾವ್ಯಗಾಗಿ ಬಿಗ್​ಬಾಸ್ ಮನೆಯಲ್ಲಿ ಕೆಂಪೇಗೌಡ ಆದ ಗಿಲ್ಲಿ.. ಹೇಗಿದೆ ಗೊತ್ತಾ ಹೊಸ ಲುಕ್​?
/filters:format(webp)/newsfirstlive-kannada/media/media_files/2025/10/24/tamilu-actor-2025-10-24-11-23-42.jpg)
ಒಟ್ಟು 11.5 ಗ್ರಾಂ ಕೊಕೇನ್,10.3 ಗ್ರಾಂ ಮೆಥಾಂಫೆಟಮೈನ್, 2.75 ಗ್ರಾಂ ಎಂಡಿಎಂಎ, 2.4 ಗ್ರಾಂ ಒಜಿ ಗಾಂಜಾ ಮತ್ತು 30 ಗ್ರಾಂ ಗಾಂಜಾವನ್ನು ಜಿಸಿಪಿ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ಇಬ್ಬರು ನಟರಾದ ಕೆ.ಶ್ರೀಕಾಂತ್ ಮತ್ತು ಕೃಷ್ಣ ಕುಮಾರ್​ ಅವರನ್ನ ಬಂಧಿಸಲಾಗಿತ್ತು. ಮದ್ರಾಸ್​ ಹೈಕೋರ್ಟ್​ ನೀಡಿದ ಜಾಮೀನಿನ ಮೆರೆಗೆ ಇಬ್ಬರು ಜೈಲಿನಿಂದ ಹೊರ ಬಂದಿದ್ದರು. ಇದೀಗ ಅಕ್ಟೋಬರ್ 28 ರಂದು ಶ್ರೀಕಾಂತ್ ಹಾಗೂ ಅಕ್ಟೋಬರ್ 29 ರಂದು ಕೃಷ್ಣ ಕುಮಾರ್​ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್​ನಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ:BBK12; ಸೆಡೆ, ನಾಲಿಗೆ ಸೀಳಿ ಬಿಡ್ತೀನಿ.. ಅಯ್ಯೋ ಕಾಕ್ರೂಚ್ ಸುಧಿ ಮಾತುಗಳಿಗೆ ಸ್ಪರ್ಧಿಗಳು ಫುಲ್ ಶಾಕ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us