Advertisment

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR, ಆಗಿದ್ದೇನು..?

ಕಲಾ ಸಮ್ರಾಟ ಎಸ್​.ನಾರಾಯಣ್ (S Narayan) ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ (Dowry harassment case) ಖ್ಯಾತ ನಿರ್ದೇಶಕ A2 ಆಗಿದ್ದು, ಎಫ್​​ಐಆರ್​ ದಾಖಲಾಗಿದೆ.

author-image
Ganesh Kerekuli
S Narayan dowry harassment case (1)
Advertisment

ಬೆಂಗಳೂರು: ಕಲಾ ಸಮ್ರಾಟ ಎಸ್​.ನಾರಾಯಣ್ (S Narayan) ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ  (Dowry harassment case) ಖ್ಯಾತ ನಿರ್ದೇಶಕ A2 ಆಗಿದ್ದಾರೆ.   

Advertisment

ಎಸ್​.ನಾರಾಯಣ್ ವಿರುದ್ಧ ಸೊಸೆ ಆರೋಪ

ಎಸ್​.ನಾರಾಯಣ್ ಸೊಸೆ ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ. ಪವಿತ್ರ ಹಾಗೂ ಎಸ್.ನಾರಾಯಣ್ ಪುತ್ರ ಪವನ್​ 2021ರಲ್ಲಿ ಮದುವೆ ಆಗಿದ್ದಾರೆ. ಇದೀಗ ಪವಿತ್ರಾ, ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪ ಪ್ರಕರಣದಲ್ಲಿ ಪವನ್ ಮೊದಲ ಆರೋಪಿ ಆಗಿದ್ದಾರೆ. 

ಆರೋಪ ಏನು..? 

ನನ್ನ ಪತಿ ಪವನ್ ಓದಿಲ್ಲ, ಹೀಗಾಗಿ ಎಲ್ಲಿಯೂ ಕೆಲಸ ಸಿಗ್ತಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ಮಧ್ಯೆ ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್​ಸ್ಟಿಟ್ಯೂಟ್ ಮಾಡಲಾಗಿತ್ತು. ಅದನ್ನು ಆರಂಭಿಸಲು ಪವನ್, ನಮ್ಮ ಬಳಿ ಹಣ ಕೇಳಿದ್ದ. ಆಗ ನಾನು ತಾಯಿಯ ಒಡವೆಗಳನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಕೊನೆಗೆ ಆ ಸಂಸ್ಥೆ ಲಾಸ್​ ಆಗಿ ಮುಚ್ಚಲಾಯಿತು. ಅಲ್ಲಿ ಆಗಿರುವ ನಷ್ಟ ತುಂಬಿಸಿಕೊಳ್ಳಲು ನಾನು 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್​ಗೆ ನೀಡಿದ್ದೆ.

ಇದನ್ನೂ ಓದಿ:ಸಂಜಯ ಕಪೂರ್‌ 30 ಸಾವಿರ ಕೋಟಿ ಆಸ್ತಿಗಾಗಿ ಹಾಲಿ-ಮಾಜಿ ಪತ್ನಿ ಫೈಟ್

S Narayan dowry harassment case (2)

ಇಷ್ಟೆಲ್ಲ ಆದರೂ ಪ್ರತಿ ದಿನ ಅತ್ತೆ ಭಾಗ್ಯಲಕ್ಷ್ಮಿ (ಎಸ್.ನಾರಾಯಣ್ ಪತ್ನಿ) ಹಾಗು ಪತಿ ನನ್ನ ಮೇಲೆ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಅತ್ತೆ ಭಾಗ್ಯಲಕ್ಷ್ಮಿ ಹಾಗು ಪತಿ ನನ್ನ ಮನೆಯಿಂದ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಅವಧಿಯಲ್ಲಿ ಒಂದು ಲಕ್ಷದ ಉಂಗುರ ಹಾಗೂ ಖರ್ಚು-ವೆಚ್ಚದ ಹಣ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಮಗನಿಗೆ ತೊಂದರೆಯಾದರೆ ಎಸ್.ನಾರಾಯಣ್, ಭಾಗ್ಯಲಕ್ಷ್ಮಿ ಹಾಗೂ ಪವನ್ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ಈ ವಿಚಾರಗಳನ್ನು ಎಫ್​ಐಆರ್​​ನಲ್ಲಿ ಉಲ್ಲೇಖ ಮಾಡಿದ್ದಾರೆ. 

Advertisment

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ.. ವರುಣ್ ತೇಜ್-ಲಾವಣ್ಯಗೆ ಗಂಡು ಮಗು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dowry harassment case director s narayan
Advertisment
Advertisment
Advertisment