/newsfirstlive-kannada/media/media_files/2025/11/24/pratap-simha-2025-11-24-16-03-56.jpg)
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಸಿನಿಮಾ ಪ್ರಮೋಷನ್ ಮಾಡಿದ್ದಾರೆ. ದರ್ಶನ್ ನಟನೆಯ ಡೆವಿಲ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಪ್ರತಾಪ್ ಸಿಂಹ ಪ್ರಚಾರ ಮಾಡಿದ್ದಾರೆ.
ಬಳಿಕ ಮಾತನ್ನಾಡಿರುವ ಪ್ರತಾಪ್ ಸಿಂಹ.. ನಾನು ಕೂಡ ದರ್ಶನ್ ಅಭಿಮಾನಿ. ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದ್ರೆ ಅತೀ ಹೆಚ್ಚು ಫ್ಯಾನ್ಸ್ ಇರೋದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ಮೆಜೆಸ್ಟಿಕ್, ಕರಿಯ ಆ ಕಾಲದ ಸಿನಿಮಾಗಳನ್ನ ನೋಡುತ್ತಾ ಬಂದಿದ್ದೇನೆ.
/filters:format(webp)/newsfirstlive-kannada/media/media_files/2025/08/14/devil-cinema-of-darshan-2025-08-14-14-33-27.jpg)
ಕೆಂಚಾಲೋ ಮಂಚಾಲೋ ಸಾಂಗ್ ಕ್ರೇಜ್ ಹುಟ್ಟಿಸಿತ್ತು. ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ. ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ ಬೆಳವಣಿಗೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಡಿಸೆಂಬರ್ 12 ರಿಲೀಸ್ ಆಗಬೇಕಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ 11ಕ್ಕೆ ರಿಲೀಸ್ ಆಗ್ತಿದೆ.
ಕನ್ನಡ ಜನರ ಪ್ರೀತಿ ಸಿನಿಮಾವನ್ನ ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ದರ್ಶನ್ ಮೇಲಿರಲಿ. ಈ ಸಿನಿಮಾ ಅದ್ಭುತ ಯಶಸ್ಸು ಕಾಣಲಿ ಎಂದು ಮೈಸೂರಿನಲ್ಲಿ ಡೆವಿಲ್ ಪೋಸ್ಟರ್ ಬಿಡುಗಡೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: 6 ಮಕ್ಕಳು, 13 ಮೊಮ್ಮಕ್ಕಳು.. ಇಬ್ಬರು ಪತ್ನಿಯರು.. ನಕ್ಷತ್ರಗಳಂತೆ ತುಂಬಿದೆ ಧರ್ಮೇಂದ್ರ ಕುಟುಂಬ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us