/newsfirstlive-kannada/media/media_files/2026/02/26/rashmika-and-vijay-devarkonda-wedding-photos-2-2026-02-26-19-04-12.jpg)
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮದುವೆಯಲ್ಲಿ ಕಡಿಮೆ ಮೇಕಪ್ ಹಾಗೂ ಸಿಂಪಲ್ ಆಭರಣಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ, ಈ ಟ್ರೆಂಡ್ ಅನ್ನು ಸಂಪೂರ್ಣವಾಗಿ ಬ್ರೇಕ್ ಮಾಡಿದೆ. ಮೈತುಂಬಾ ಕೆಜಿಗಟ್ಟಲೆ ಸಾಂಪ್ರದಾಯಿಕ ‘ಟೆಂಪಲ್ ಜ್ಯುವೆಲರಿ’ (Temple Jewellery) ಧರಿಸಿ, ಮ್ಯಾಕ್ಸಿಮಲಿಸ್ಟ್ (Maximalist) ಟ್ರೆಂಡ್ ಮತ್ತೆ ಹುಟ್ಟುಹಾಕಿದ್ದಾರೆ.
ಈ ಜೋಡಿಯ ಕಣ್ಣುಕುಕ್ಕುವ ಚಿನ್ನದ ಆಭರಣಗಳನ್ನು ವಿನ್ಯಾಸ ಮಾಡಿದ್ದು ಹೈದರಾಬಾದ್ ಮೂಲದ ಪ್ರಖ್ಯಾತ ‘ಶ್ರೀ ಜ್ಯುವೆಲರ್ಸ್’ (SHREE Jewellers). ‘ರಶ್ಮಿಕಾ ಮತ್ತು ವಿಜಯ್ ಅವರನ್ನು ನಾವು ಯಾವಾಗಲೂ ಆರಾಧಿಸುತ್ತೇವೆ. ಅವರ ಜೀವನದ ಅತ್ಯಂತ ವಿಶೇಷ ದಿನದ ಭಾಗವಾಗಿದ್ದು ನಮಗೆ ಹೆಮ್ಮೆಯ ವಿಚಾರ’ ಎನ್ನುತ್ತಾರೆ ಶ್ರೀ ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಅಗರ್‌ವಾಲ್ ಮತ್ತು ಕೌಶಿಕ್ ಕುಮಾರ್.
ಇದನ್ನೂ ಓದಿ: ಡ್ಯಾನ್ಸ್ ಮಾಡೋದನ್ನ ಅವರು ಎಂದೂ ತಡೆದಿಲ್ಲ, ಗಂಡನ ಬಗ್ಗೆ ಪುಸ್ತಕವನ್ನೇ ಬರೆಯಬಲ್ಲೇ -ರಶ್ಮಿಕಾ ಭಾವುಕ
/filters:format(webp)/newsfirstlive-kannada/media/media_files/2026/02/27/rashmika-mandanna-13-2026-02-27-10-45-26.jpg)
ಪುರಾಣದ ರಾಜನಂತೆ ಮಿಂಚಿದ ವಿಜಯ್, ಆಭರಣಗಳ ವಿಶೇಷತೆಯೇನು?
ಭಾರತೀಯ ಮದುವೆಗಳಲ್ಲಿ ವರನ ಆಭರಣಗಳು ಸಾಮಾನ್ಯವಾಗಿ ಸರಳವಾಗಿರುತ್ತವೆ. ವಿಜಯ್ ದೇವರಕೊಂಡ ಅವರು ರಾಜಗಾಂಭೀರ್ಯದಿಂದ ಕಂಗೊಳಿಸುವಂತಹ ಒಡವೆಗಳನ್ನು ಧರಿಸಿದ್ದರು. ಪುರಾಣದ ರಾಜನಂತೆ ಕಾಣಲು ಅವರ ಆಭರಣಗಳಲ್ಲಿ ಬುದ್ಧಿವಂತಿಕೆಯನ್ನು ಸಂಕೇತಿಸುವ ‘ಆನೆ’ (Elephant) ಹಾಗೂ ಚುರುಕುತನವನ್ನು ಸಂಕೇತಿಸುವ ‘ಹುಲಿ’ಯ (Tiger) ಲಾಂಛನಗಳನ್ನು ನಕ್ಷಿ ಕೆತ್ತನೆ (Nakshi Engraving) ಮಾಡಲಾಗಿತ್ತು.
ನಾಣ್ಯದ ಗಾತ್ರದ ದೊಡ್ಡ ಕಿವಿಯೋಲೆಗಳು, ಪೀರಿಯಡ್ ಸಿನಿಮಾಗಳಲ್ಲಿ ರಾಜರು ಧರಿಸುವಂತಹ ಅಗಲವಾದ ರಿಸ್ಟ್ ಕಫ್ (ಮಣಿಕಟ್ಟಿನ ಕಡಗ), ತೋಳ್ಬಂದಿ ಹಾಗೂ ಕಿರುಬೆರಳಿಗೆ ವಿಶೇಷವಾದ ಉಂಗುರವನ್ನು ವಿಜಯ್ ಧರಿಸಿದ್ದರು.
ಇದನ್ನೂ ಓದಿ:ತಾಳಿ ಕಟ್ಟುವ ವೇಳೆ ರಶ್ಮಿಕಾ ಕಣ್ಣಂಚಲಿ ಜಾರಿದ ನೀರು
/filters:format(webp)/newsfirstlive-kannada/media/media_files/2026/02/27/rashmika-mandanna-14-2026-02-27-11-12-36.jpg)
ಕೊರಳಿನಲ್ಲಿ ಟೆಂಪಲ್ ಡಿಸೈನ್ ಇರುವ ಎರಡು ನೆಕ್ಲೇಸ್‌ಗಳು (ಒಂದು ಉದ್ದ, ಮತ್ತೊಂದು ಗಿಡ್ಡ) ವರನ ಲುಕ್ ಅನ್ನು ಮತ್ತಷ್ಟು ರಾಯಲ್ ಆಗಿ ಕಾಣುವಂತೆ ಮಾಡಿದ್ದವು. ಅಚ್ಚರಿ ಎಂದರೆ, ವಿಜಯ್ ಅವರು ಸಾಂಪ್ರದಾಯಿಕ ಕಾಲ್ಕಡಗಗಳನ್ನು (Ankle kadas) ಕೂಡ ಧರಿಸಿದ್ದರು!
ದೇವತೆಯಂತೆ ಕಂಗೊಳಿಸಿದ ರಶ್ಮಿಕಾ!
ರಶ್ಮಿಕಾ ಮಂದಣ್ಣ ಅವರ ಮದುವೆಯ ಆಭರಣಗಳು ದಕ್ಷಿಣ ಭಾರತದ ವಾಸ್ತುಶಿಲ್ಪದ ಭವ್ಯತೆಯಿಂದ ಪ್ರೇರಿತವಾಗಿದ್ದವು. ರಶ್ಮಿಕಾ ಅವರ ಬ್ರೈಡಲ್ ಲುಕ್ ಅನ್ನು ‘ಜೀವಂತ ದೇವತೆ’ಯ (Living Goddess) ಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿತ್ತು ಎನ್ನುತ್ತದೆ ಶ್ರೀ ಜ್ಯುವೆಲರ್ಸ್ ತಂಡ.
11 ಬಗೆಯ ಆಭರಣ ಧರಿಸಿದ್ದರು
ಚೋಕರ್, ಸಾಂಪ್ರದಾಯಿಕ ಉದ್ದನೆಯ ಹಾರ, ದೊಡ್ಡ ಜುಮುಕಿಗಳು, ಜಡ ಬಿಲ್ಲೆ (ಕೂದಲಿನ ಅಲಂಕಾರ), ಚಂಪಾಸರಲು, ಹತ್‌ಫೂಲ್, ಮಾಥಾಪಟ್ಟಿ, ಮೂಗುಬೊಟ್ಟು, ಬಳೆಗಳು, ಬಾಜುಬಂದ್ (ತೋಳ್ಬಂದಿ), ಡಾಬು (ಸೊಂಟದ ಪಟ್ಟಿ) ಮತ್ತು ಕಾಲ್ಗೆಜ್ಜೆ. ಹೈ-ರಿಲೀಫ್ ನಕ್ಷಿ ವರ್ಕ್ ಮತ್ತು ರವಾ ವಿನ್ಯಾಸದೊಂದಿಗೆ ಆಂಟಿಕ್ ಮ್ಯಾಟ್ ಫಿನಿಶ್ (Antique matte polish) ನೀಡಲಾಗಿದ್ದ ಈ ಆಭರಣಗಳು, ರಶ್ಮಿಕಾಗೆ ಅಪ್ಪಟ ದಕ್ಷಿಣ ಭಾರತದ ವಧುವಿನ ಕಳೆ ತಂದುಕೊಟ್ಟಿದ್ದವು.
ತಯಾರಿಗೆ ಬೇಕಾದ ಸಮಯವೆಷ್ಟು?
ನವಜೋಡಿ ಧರಿಸಿದ್ದ ಈ ಅದ್ಭುತ ಆಭರಣಗಳು ಒಂದೆರಡು ದಿನಗಳಲ್ಲಿ ತಯಾರಾದದ್ದಲ್ಲ! ವಿಜಯ್ ಹಾಗೂ ರಶ್ಮಿಕಾ ಅವರ ಈ ಆಭರಣಗಳ ಡಿಸೈನ್ ಕಾನ್ಸೆಪ್ಟ್, ಕಸ್ಟಮೈಸೇಷನ್, ಪ್ರೊಡಕ್ಷನ್ ಹಾಗೂ ಟ್ರಯಲ್ಸ್.. ಹೀಗೆ ಎಲ್ಲವೂ ಸೇರಿ ಸಂಪೂರ್ಣ ಲುಕ್ ಅನ್ನು ಫೈನಲ್ ಮಾಡಲು ಬರೋಬ್ಬರಿ 10 ತಿಂಗಳ ಕಾಲಾವಕಾಶ ಬೇಕಾಯಿತಂತೆ.
ಒಟ್ಟಿನಲ್ಲಿ, ವಿಜಯ್-ರಶ್ಮಿಕಾ ಜೋಡಿ ಮದುವೆಯಲ್ಲಿ ಧರಿಸಿದ್ದ ಈ ವಿಶೇಷ ಟೆಂಪಲ್ ಜ್ಯುವೆಲರಿಗಳು ಇದೀಗ ಇಂಟರ್ನೆಟ್‌ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದು, ಮದುವೆ ಮಾರುಕಟ್ಟೆಯಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೆಟ್ ಮಾಡಿವೆ.
ಇದನ್ನೂ ಓದಿ:ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us