/newsfirstlive-kannada/media/media_files/2025/08/17/rajinikanth-and-amirkhan-2025-08-17-11-22-24.jpg)
ಅಮಿರ್ ಖಾನ್, ರಜಿನಿಕಾಂತ್
ಜೈಲರ್ ಬಳಿಕ ಸೂಪರ್‌ಸ್ಟಾರ್ ರಜಿನಿಕಾಂತ್ (Rajinikanth) ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರ ಕೂಲಿ (coolie movie) ರಿಲೀಸ್ ಆಗಿದೆ.
ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಚಿತ್ರದಲ್ಲಿ ದೊಡ್ಡ ದೊಡ್ಡ ಬಿಗ್ಸ್ಟಾರ್ಗಳಿದ್ದಾರೆ. ನಾಗಾರ್ಜುನ, ಅಮೀರ್ ಖಾನ್ ಮತ್ತು ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಗಸ್ಟ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಚಿತ್ರವು ಅನಿರೀಕ್ಷಿತ ಪ್ರತಿಕ್ರಿಯೆ ಪಡೆಯುತ್ತಿದೆ. ಕೇವಲ ಎರಡು ದಿನಗಳಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿದೆ.
ವದಂತಿಗಳಿಗೆ ಸ್ಪಷ್ಟನೆ
ಇದರ ಮಧ್ಯೆ ಚಿತ್ರದ ಬಜೆಟ್ ಮತ್ತು ತಾರೆಯರ ಸಂಭಾವನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಅಮಿರ್ ಖಾನ್ 20 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದನ್ನು ನಿರ್ಮಾಪಕರು ನಿರಾಕರಿಸಿದ್ದರು. ಆದರೂ ವದಂತಿಗಳು ಮಾತ್ರ ನಿಂತಿರಲಿಲ್ಲ.
ಇದನ್ನೂ ಓದಿ: ಈ ಬಾರಿಯ ಬಿಗ್ಬಾಸ್ಗೆ ಅನಯಾ ಬಂಗಾರ್ ಎಂಟ್ರಿ..?
ಆದರೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಅಮಿರ್ ಖಾನ್, ತಮ್ಮ ಸಂಭಾವನೆ ಬಗ್ಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. ರಜಿನಿ ಜೊತೆ ತೆರೆ ಹಂಚಿಕೊಳ್ಳುವುದು ನನಗೆ ಕೋಟ್ಯಂತರ ರೂಪಾಯಿಗಳಿಗೆ ಸಮಾನ. ಅದಕ್ಕಿಂತ ಹೆಚ್ಚಿನ ಬೆಲೆಬಾಳುವುದು ನನ್ನಲ್ಲಿ ಏನೂ ಇಲ್ಲ. ನಾನು ಒಂದು ರೂಪಾಯಿಯನ್ನೂ ತೆಗೆದುಕೊಂಡಿಲ್ಲ. ರಜಿನಿ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರೊಂದಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದು ತಮಗೆ ಸಿಗುವ ದೊಡ್ಡ ಪ್ರತಿಫಲ. ಚಿತ್ರದಲ್ಲಿ ನಿಜವಾದ ನಾಯಕರು ನಾಗಾರ್ಜುನ ಮತ್ತು ರಜಿನಿಕಾಂತ್ ಎಂದಿದ್ದಾರೆ.
ಇದನ್ನೂ ಓದಿ: WhatsApp ಬಳಸುವವರೇ.. ಕೇಂದ್ರ ಸರ್ಕಾರದಿಂದ ರೆಡ್ ಅಲರ್ಟ್, ಎಚ್ಚೆತ್ತುಕೊಳ್ಳಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ