/newsfirstlive-kannada/media/media_files/2025/11/11/vanya-kannada-movie-2025-11-11-19-31-18.jpg)
ಬೆಂಗಳೂರು: ಬಡಿಗೇರ್ ದೇವೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ ‘ವನ್ಯ’ 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಇಂಡಿಯನ್ ಪನೋರಮಾ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಈ ಚಲನಚಿತ್ರೋತ್ಸವವು ಇದೇ ನವೆಂಬರ್ 20 ರಿಂದ 28ರ ವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಈ ವರ್ಷ ಇಂಡಿಯನ್ ಪನೋರಮಾಗೆ ಆಯ್ಕೆಯಾದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಯನ್ನು ವನ್ಯ ಪಡೆದಿದೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಇದು ಒಂದು ಮಹತ್ವದ ಮೈಲುಗಲ್ಲಾಗಿದೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಗಾಯಕಿ ಅನನ್ಯ ಭಟ್
/filters:format(webp)/newsfirstlive-kannada/media/media_files/2025/11/11/vanya-kannada-movie-2-2025-11-11-19-35-27.jpg)
ಕಲಾತ್ಮಕತೆ, ವಿಷಯಾಧಾರಿತ ಮತ್ತು ನೈಜತೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರುವ ಭಾರತದ ಅತ್ಯುತ್ತಮ ಚಿತ್ರಗಳು ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗುತ್ತವೆ ಎನ್ನುವುದಕ್ಕೆ ವನ್ಯ ಆಯ್ಕೆಯೇ ಸಾಕ್ಷಿಯಾಗಿದೆ.
ವನ್ಯ ಸಿನಿಮಾದ ಆಯ್ಕೆಯು ಕಲಾತ್ಮಕತೆ, ಅರ್ಹತೆಯಿಂದ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಸಂದಿರುವ ಗೌರವವಾಗಿದೆ. ಕನ್ನಡ ಚಿತ್ರರಂಗದ ಸಾಂಸ್ಕೃತಿಕ ಶ್ರೀಮಂತಿಕೆ, ವೈವಿಧ್ಯಮಯ ಕಥಾ ಹಂದರವನ್ನು ವನ್ಯ ಒಳಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.
56ನೇ IFFI ಆವೃತ್ತಿ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ಒಟ್ಟುಗೂಡಿಸುವ ಮಹೋತ್ಸವವಾಗಿದೆ. ಇಂಡಿಯನ್ ಪನೋರಮಾ ವಿಭಾಗವು ಸಮಕಾಲೀನ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿರುವ ಪ್ರದರ್ಶಿಸುವ ವೇದಿಕೆಯಾಗಿದೆ. ಇಂತಹ ವೇದಿಕೆಗೆ ವನ್ಯ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ, ಭಾರತೀಯ ಚಿತ್ರರಂಗದಲ್ಲಿ ತನ್ನ ಸ್ಥಾನ ಮಾನವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.
ಇದನ್ನೂ ಓದಿ: ಬೆಂಗಳೂರು ಕೋರ್ಟ್ ನಲ್ಲಿ ನಟ ದರ್ಶನ್ ಕೇಸ್ ವಿಚಾರಣೆ : ಸಮಯ ಕೇಳಿದ ವಕೀಲರು, ವಿಚಾರಣೆ ಮುಂದೂಡಿಕೆ
/filters:format(webp)/newsfirstlive-kannada/media/media_files/2025/11/11/vanya-kannada-movie-1-2025-11-11-19-35-40.jpg)
ಐಎಫ್ಎಫ್ಐಗೆ ಆಯ್ಕೆಯಾಗಿರುವುದಕ್ಕೆ ನಟ, ನಿರ್ಮಾಪಕರು ಸೇರಿದಂತೆ ಒಟ್ಟಾರೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದು, IFFI ಗೋವಾ 2025ರಲ್ಲಿ ಭಾಗವಹಿಸಲು ಕಾತರರಾಗಿದ್ದಾರೆ. ವಿಮರ್ಶಕರಿಂದ ಮೆಚ್ಚುಗೆ ಪಡೆದ ರುದ್ರಿ ಮತ್ತು ಇನ್ ಚಿತ್ರಗಳ ನಂತರ, ದೇವೇಂದ್ರ ಅವರ ಮೂರನೇ ಚಿತ್ರ ವನ್ಯ ಸಾಮಾಜಿಕ ಜಾಗೃತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us