/newsfirstlive-kannada/media/media_files/2025/10/19/raghav-chadha-and-parineeti-chopra-2025-10-19-21-11-59.jpg)
ನಟಿ ಪರಿಣಿತಿ ಚೋಪ್ರಾ, ಸಂಸದ ರಾಘವ್ ಚಡ್ಡಾ (Parineeti Chopra, Raghav Chadha ) ದಂಪತಿ ಚೊಚ್ಚಲ ಮಗುವಿಗೆ ವೆಲ್​ಕಮ್ ಹೇಳಿದೆ. ದೀಪಾವಳಿಗೆ ಒಂದು ದಿನ ಮೊದಲು, ಛೋಟಿ ದೀಪಾವಳಿಯಂದು ಪರಿಣಿತಿ ಚೋಪ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ: ಫಿನಾಲೆಗೆ ಯಾರು ಅರ್ಹ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಒಂದೇ ಹೆಸರು ಹೇಳಿದ ಮಂಜು, ಅಶ್ವಿನಿ
ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ನಮ್ಮ ತೋಳುಗಳು ತುಂಬಿವೆ, ಹೃದಯಗಳು ಇನ್ನೂ ತುಂಬಿವೆ ಎಂದು ನಟಿ ಬರೆದಿದ್ದಾರೆ.
ನಮ್ಮ ಪುಟ್ಟ ಅತಿಥಿ.. ಮತ್ತು ನಾವು ನಿಜವಾಗಿಯೂ ಹಿಂದಿನ ಜೀವನ ಕಳೆದುಕೊಳ್ಳುವುದಿಲ್ಲ! ನಮ್ಮ ತೋಳುಗಳು ತುಂಬಿವೆ, ನಮ್ಮ ಹೃದಯಗಳು ಇನ್ನೂ ತುಂಬಿವೆ. ನಾವು ಒಬ್ಬರನ್ನೊಬ್ಬರು ಮಾತ್ರ ಹೊಂದಿದ್ದ ಮೊದಲು, ಈಗ ನಮಗೆ ಎಲ್ಲವೂ ಇದೆ. ಎಲ್ಲರಿಗೂ ಧನ್ಯವಾದಗಳು, ಪರಿಣಿತಿ ಮತ್ತು ರಾಘವ್" ಎಂದು ದಂಪತಿ ಬರೆದುಕೊಂಡಿದೆ.
ಇದನ್ನೂ ಓದಿ: ಗಿಲ್ಲಿ ಹಾಗೂ ಕಾವ್ಯಾಗೆ ಸುದೀಪ್​ ಏನಂದ್ರು ಗೊತ್ತಾ..? VIDEO
ಆಗಸ್ಟ್‌ನಲ್ಲಿ ಗುಡ್​ನ್ಯೂಸ್
ಆಗಸ್ಟ್ 25, 2025 ರಂದು ಈ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋದನ್ನು ಘೋಷಣೆ ಮಾಡಿತ್ತು. ಹೆಜ್ಜೆಗುರುತುಗಳು ಮತ್ತು "1 + 1 = 3" ಎಂಬ ಪದಗಳನ್ನು ಹೊಂದಿರುವ ಹಳದಿ ಕೇಕ್‌ನ ಫೋಟೋವನ್ನು ದಂಪತಿ ಹಂಚಿಕೊಂಡಿತ್ತು.
2023 ರಲ್ಲಿ ನಿಶ್ಚಿತಾರ್ಥ
ಈ ಜೋಡಿಯು ಮೇ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಸೆಪ್ಟೆಂಬರ್ 2023ರಲ್ಲಿ ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೇಸ್‌ನಲ್ಲಿ ಮದುವೆ ಮಾಡಿಕೊಂಡಿದ್ದರು. ನಿಕಟ ಕುಟುಂಬ ಸದಸ್ಯರು ಮತ್ತು ಮನರಂಜನೆ ಮತ್ತು ರಾಜಕೀಯ ಕ್ಷೇತ್ರಗಳ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ