Advertisment

ಹಮ್ಮು-ಬಿಮ್ಮು ಯಾವತ್ತೂ ಇಲ್ಲ.. ಇದು ರಜಿನಿಕಾಂತ್ ಸರಳತೆ.. ಹೋಗಿದ್ದೆಲ್ಲಿಗೆ..?

ರಜಿನಿಕಾಂತ್​ ಅವರು ಸಾಮಾನ್ಯ ವ್ಯಕ್ತಿಯಂತೆ ರಸ್ತೆಬದಿಯಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ವೈರಲ್ ಆಗಿದ್ದು, ರಜಿನಿ ಅವರ ಸರಳತೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಜನಿಕಾಂತ್ ಹೋಗಿದ್ದೆಲ್ಲಿಗೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
Rajinikanth
Advertisment

ಸೂಪರ್​​ ಸ್ಟಾರ್​ ರಜಿನಿಕಾಂತ್ (Super star Rajinikanth)​ ಹಿಮಾಲಯಕ್ಕೆ ಪ್ರಯಾಣ ಬೆಳಸಿದ್ದಾರೆ. ಕೂಲಿ ಚಿತ್ರದ ನಂತರ ಜೈಲರ್​​ 2 ಚಿತ್ರದಲ್ಲಿ ನಟಿಸುತ್ತಿರುವ ರಜನಿ​​, ಶೂಟಿಂಗ್​​ ಮಧ್ಯೆ ಬ್ರೇಕ್​ ಪಡೆದು ತಮ್ಮ ಸ್ನೇಹಿತನ ಜೊತೆ ಋಷಿಕೇಶಕ್ಕೆ (Rajinikanth in Rishikesh) ತೆರಳಿದ್ದಾರೆ. 

Advertisment

ರಜಿನಿಕಾಂತ್​ ಅವರು ಸಾಮಾನ್ಯ ವ್ಯಕ್ತಿಯಂತೆ ರಸ್ತೆಬದಿಯಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ವೈರಲ್ ಆಗಿದ್ದು, ರಜನಿ ಅವರ ಸರಳತೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವರದಿಗಳ ಪ್ರಕಾರ ರಜಿನಿಕಾಂತ್, ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. 

ಇದನ್ನೂ ಓದಿ:‘ಬೇಜಾರು ಏನೆಂದರೆ..’ ಮನೆಯಿಂದ ಆಚೆ ಬಂದು ಕಿಚ್ಚನ ಎದುರು RJ ಅಮಿತ್ ಮಾತು..!

Rajinikanth (1)

ಅಲ್ಲಿ ಅವರು ಸ್ವಾಮಿ ದಯಾನಂದ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ವಾಸ್ತವ್ಯದ ಸಮಯದಲ್ಲಿ ಗಂಗಾನದಿಯ ದಡದಲ್ಲಿ ಗಂಗಾ ಧ್ಯಾನ ಮಾಡಿದರು. ನಂತರ ಗಂಗಾರತಿಯಲ್ಲಿ ಭಾಗಿಯಾದರು ಎಂದು ವರದಿಯಾಗಿದೆ. ತಲೈವಾ ರಜಿನಿಕಾಂತ್ ಅವರಿಗೆ 74 ವರ್ಷ. ಕಳೆದ 50 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಿರಿಯ ನಟ ರಜಿನಿಕಾಂತ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ.

Advertisment

ಇದನ್ನೂ ಓದಿ: ಜಾಹ್ನವಿಯನ್ನು ಸ್ವಿಮ್ಮಿಂಗ್​ ಪೂಲ್​ಗೆ ತಳ್ಳಿದ ಕಾಕ್ರೋಚ್.. ಮಾಡಿದ್ದೇ ನಿಯಮ, ಆಡಿದ್ದೇ ಆಟ..! 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

super star rajinikanth
Advertisment
Advertisment
Advertisment