/newsfirstlive-kannada/media/media_files/2026/02/26/rashmika-mandanna-and-vijay-devarakonda-3-2026-02-26-13-38-07.jpg)
ರಾಜಸ್ಥಾನದ ಉದಯಪುರದಲ್ಲಿ ಬೆಳಗ್ಗೆ 10.10ರ ಶುಭಲಗ್ನದಲ್ಲಿ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಅತ್ಯಾಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ತೆಲುಗು ಸಂಪ್ರದಾಯದಂತೆ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಮದುವೆಯ ದಿರಿಸಿನಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿ ಕಣ್ಮನ ಸೆಳೆಯುತ್ತಿದ್ದು, ಇಂದು ಸಂಜೆ 4.30ಕ್ಕೆ ರಶ್ಮಿಕಾ ಅವರ ಮೂಲವಾದ 'ಕೊಡವ ಸಂಪ್ರದಾಯ'ದಂತೆಯೂ ಮತ್ತೊಮ್ಮೆ ವಿವಾಹ ಶಾಸ್ತ್ರಗಳು ನಡೆಯಲಿವೆ. 'ಗೀತಾ ಗೋವಿಂದಂ' ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಶುರುವಾದ ಇವರ ಪರಿಚಯ, 'ಡಿಯರ್ ಕಾಮ್ರೇಡ್' ಹೊತ್ತಿಗೆ ಗಾಢವಾದ ಪ್ರೀತಿಯಾಗಿ ಬದಲಾಗಿತ್ತು. ಹಲವು ವರ್ಷಗಳಿಂದ ಗುಟ್ಟಾಗಿ ಪ್ರೇಮಾಯಣ ನಡೆಸುತ್ತಿದ್ದ ಜೋಡಿ ಇದೀಗ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ:ಮದ್ವೆಗೆ ಬಂದ ಸೆಲೆಬ್ರಿಟಿಗಳು ಯಾಱರು..? ಬಿಸಿಬೇಳೆ ಬಾತ್, ಮಟನ್ ಬಿರಿಯಾನಿ, ಪೋರ್ಕ್ ಕರಿ: ‘ಊಟದ ಮೆನು ಏನೇನು..?
/filters:format(webp)/newsfirstlive-kannada/media/media_files/2026/02/26/rashmika-mandanna-and-vijay-devarakonda-2-2026-02-26-13-40-45.jpg)
ಮದುವೆ ದಿನವೇ ಕ್ಯೂಟ್ ವಿಡಿಯೋ ವೈರಲ್!
ಒಂದೆಡೆ ವಿಜಯ್-ರಶ್ಮಿಕಾ ಮದುವೆಯ ಸಂಭ್ರಮ ಮುಗಿಲುಮುಟ್ಟಿದ್ದರೆ, ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ಜೋಡಿಯ ಹಳೆಯ ವಿಡಿಯೋವೊಂದು ಸಖತ್ ಟ್ರೆಂಡ್ ಆಗುತ್ತಿದೆ.
ಈ ಹಿಂದೆ ನಂದಮೂರಿ ಬಾಲಕೃಷ್ಣ (Balakrishna) ನಿರೂಪಣೆಯ ಜನಪ್ರಿಯ ಟಾಕ್ ಶೋ ‘ಅನ್‌ಸ್ಟಾಪಬಲ್’ (Unstoppable) ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅತಿಥಿಯಾಗಿ ತೆರಳಿದ್ದರು. ‘ಅನಿಮಲ್’ (Animal) ಸಿನಿಮಾದ ಪ್ರಚಾರದ ಭಾಗವಾಗಿ ನಟ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರೊಂದಿಗೆ ರಶ್ಮಿಕಾ ಕೂಡ ಈ ಶೋನಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮಧ್ಯೆ ರಶ್ಮಿಕಾ ಅವರು ವೇದಿಕೆ ಮೇಲಿಂದಲೇ ವಿಜಯ್ ದೇವರಕೊಂಡ ಅವರಿಗೆ ಲೈವ್ ಆಗಿ ಫೋನ್ ಕರೆ ಮಾಡಿದ್ದರು. ರಶ್ಮಿಕಾ ಕಾಲ್ ರಿಸೀವ್ ಮಾಡುತ್ತಿದ್ದಂತೆಯೇ ವಿಜಯ್, ‘ವಾಟ್ಸಾಪ್ ರೇ..’ (What's up re..) ಎಂದು ಪ್ರೀತಿಯಿಂದ ಕ್ಯಾಶುಯಲ್ ಆಗಿ ಕೇಳಿದ್ದರು. ವಿಜಯ್ ಅವರ ಆ ಮಾತನ್ನು ಕೇಳುತ್ತಿದ್ದಂತೆಯೇ ರಶ್ಮಿಕಾ ಮುಖದಲ್ಲಿ ಮಂದಹಾಸ ಮೂಡಿತ್ತು. ಎಲ್ಲರೆದುರು ಹಿಗ್ಗಿನಿಂದ ನಾಚಿ ನೀರಾಗಿದ್ದರು!
ಇದನ್ನೂ ಓದಿ: ಟಾಲಿವುಡ್​ನ ‘ಪವರ್ ಕಪಲ್’ ಆದ ರಶ್ಮಿಕಾ -ವಿಜಯ್ ದೇವರಕೊಂಡ..!
ಅಂದು ಇವರಿಬ್ಬರ ನಡುವೆ ನಡೆದಿದ್ದ ಈ ಮುದ್ದಾದ ಸಂಭಾಷಣೆಯ ವಿಡಿಯೋ ‘ವಿರೋಶ್’ ಮದುವೆಯ ಹೊತ್ತಿನಲ್ಲಿ ಇಂಟರ್ನೆಟ್‌ನಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಕ್ಯೂಟ್‌ನೆಸ್‌ಗೆ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us